Posts

Showing posts from 2022

Kannada Translation of "Lost" by David Wagoner

Image
Kannada Translation of the poem "Lost" by David Wagoner. ಕಾಂತಾರ ನಿಲ್ಲು, ಚಲಿಸದಿರು. ಮುಂದೆ ಮರಗಳಿವೆ, ಬದಿಗೆ ಪೊದೆಗಳಿವೆ ಕಾಣ! ಬಲ್ಲವೀ ನೆಲೆಯ, ಕಳೆದು ಹೋಗವವು - "ಇಲ್ಲಿ" ಎಂಬುದೀ ತಾಣ. ಪತ್ತೆಯಿರದ ಪರಕೀಯವಿದುವೆ - ಮೈ ಕಣ್ಣನಾಗಿಸಿರು, ಎಚ್ಚರ! ಗೊತ್ತನರಿತು ಅನುಮತಿಯ ಬೇಡಿ ಪರಿಚಯವನಿತ್ತು ಮುಂದಿನ ಬೆಸ. ಅಡವಿಯುಸಿರನಿಡುತಿಹುದು, ಕಿವಿಯ ಕೊಡು - ಮಾರುನುಡಿವುದದು ನಿಶ್ಚಿತ. ಸುತ್ತ ನಿನಗೆಂದು ತಾನು ರಚಿಸಿರುವ ನೆಲೆಯ ನೀನೊಮ್ಮೆ ನೋಡು, ಬಿಟ್ಟು ಹೊರಟಿರಲು ಮರಳಲನುವಿಹುದು, ಇಲ್ಲಿಗೆಂದುಸುರಿ ಜಾಡು. ಮರಗಳೆರಡೊಂದೆ ರೀತಿಯಿರವೆಂದು ಕಾಗೆಗಳಿಗಿಲ್ಲಿ ಗೊತ್ತು, ಎರಡು ಕೊಂಬೆಗಳು ಬೇರೆ ಬೇರೆಯವು, ಗುಬ್ಬಿಗಿದುವೆ ಮನದಟ್ಟು. ಮರಗಿಡಗಳೆಸಕ ನಿನ್ನ ಗಮನವನು ಸೆಳೆಯಲಾಗದಿರಲಿದು ಖರೆ -  ಕಳೆದು ಹೋಗಿರುವೆ, ನಿಲ್ಲು, ಚಲಿಸದಿರು. ನಿಬಿಡ ಕಾಂತಾರಕರಿವಿದೆ. ನೀನಿರುವ ತಾಣ ತಿಳಿದಿರುವುದದಕೆ, ಅನುಮತಿಸು ಹುಡುಕಲದಕೆ. - ವೆಂಕಟೇಶಪ್ರಸನ್ನ The original: Lost Stand still. The trees ahead and bushes beside you Are not lost. Wherever you are is called Here, And you must treat it as a powerful stranger, Must ask permission to know it and be known. The forest breathes. Listen. It answers, I have made this place around you. If you lea...

ಅಕ್ಟೋಬರ್‌ಫೆಸ್ಟ್: ಜನ ಮರುಳೋ ಜಾತ್ರೆ ಮರುಳೋ!

Image
  ಅಕ್ಟೋಬರ್‌ಫೆಸ್ಟ್:  ಜನ ಮರುಳೋ ಜಾತ್ರೆ ಮರುಳೋ! ಅಕ್ಟೋಬರ್‌ಫೆಸ್ಟ್ ಎನ್ನುವುದು ಜರ್ಮನಿಯ ಮ್ಯೂನಿಕ್ ನಗರದಲ್ಲಿ ಪ್ರತಿ ವರ್ಷ ಸಪ್ಟೆಂಬರ್ ಮೂರನೇ ವಾರಾಂತ್ಯದಿಂದ ಅಕ್ಟೋಬರ್ ಮೊದಲನೇ ವಾರಾಂತ್ಯವನ್ನು ದಾಟುವವರೆಗೆ ನಡೆಯುವ ಒಂದು ಬೃಹತ್ ಜನಜಾತ್ರೆ. ಈ ಎರಡೂವರೆ ವಾರಗಳಲ್ಲಿ ಸುಮಾರು ಐವತ್ತರಿಂದ ಅರವತ್ತು ಲಕ್ಷ ಜನರು ಜರ್ಮನಿಯ ಬೇರೆ ಬೇರೆ ಭಾಗಗಳಿಂದಷ್ಟೇ ಅಲ್ಲದೆ ಪ್ರಪಂಚದೆಲ್ಲೆಡೆಯಿಂದ ಮ್ಯೂನಿಕ್ ನಗರಕ್ಕೆ ಪ್ರವಾಸ ಬಂದು ತಮ್ಮದೇ ಆದ ವಿಶಿಷ್ಟ ರೀತಿಗಳಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಐತಿಹಾಸಿಕ ಮಹತ್ತ್ವವುಳ್ಳ ಮೆರವಣಿಗೆಗಳು, ತಿಂಡಿ-ತಿನಿಸು-ಪಾನೀಯಗಳ ಸೇವನೆ, ಸಂಗೀತ ಮತ್ತು ಮನರಂಜನಾಕ್ರೀಡೆಗಳಿಗೆಲ್ಲ ಹೆಸರುವಾಸಿಯಾಗಿರುವ ಅಕ್ಟೋಬರ್‌ಫೆಸ್ಟ್‌ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬಿಯರ್ ಮತ್ತು ಮದ್ಯಸೇವನೆಯ ಜಾತ್ರೆಯೆಂಬಂತೆ ಬಿಂಬಿತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಪ್ರತಿವರ್ಷದ ಜಾತ್ರೆಯಲ್ಲೂ ಎಪ್ಪತ್ತರಿಂದ ಎಂಭತ್ತು ಲಕ್ಷ ಲೀಟರ್‌ಗಳಷ್ಟು ಮದ್ಯ ಖರ್ಚಾಗುವುದು ಇದಕ್ಕೆ ಒಂದು ಕಾರಣವಾದರೆ, ಮತ್ತೊಂದು, ಜಗತ್ತಿನಾದ್ಯಂತ ಅಕ್ಟೋಬರ್‌ಫೆಸ್ಟ್ ಹೆಸರಿನಲ್ಲಿ ಮದ್ಯಸೇವನೆಯನ್ನೇ ಕೇಂದ್ರೀಕರಿಸಿಕೊಂಡು ತಲೆಯೆತ್ತಿರುವ ಸ್ಥಳೀಯ ಉತ್ಸವಗಳು. ಆದರೆ ಮ್ಯೂನಿಕ್‌ನ ಅಕ್ಟೋಬರ್‌ಫೆಸ್ಟ್ ಜಾತ್ರೆಗೆ ಹಲವು ಮುಖಗಳುಂಟು. ಈ ಬರಹ ಅವುಗಳನ್ನು ಪರಿಚಯಿಸುವೆಡೆಗೆ ಒಂದು ಪ್ರಯತ್ನ.   ಜರ್ಮನಿಯ ಆಗ್ನೇಯ ಭಾಗಕ್ಕಿರುವ ಪ್ರಾ...

Kannada Translation of Kuvempu's "The Banished Indian Patriot - Sonnet 2"

Image
 The legendary Kannada Poet, Kuppalli Venkatappa Puttappa (Kuvempu) had written a couple of sonnets in English, highlighting the patriotism of Veer Savarkar. Here's an attempt to translate the second of them to Kannada: ಮರೆತ ವೀರ ಭಾರತೀಯ - ಸಾನೆಟ್ ೨ ಅಬ್ಬರಿಸುವ ಸಾಗರಗಳೆ! ಹಬ್ಬಿರೆನ್ನ ಸುತ್ತಲೂ, ಭೋರ್ಗರೆಯುವ ತೆರೆಗಳುಬ್ಬಿ ಮೊರೆಯುತಿರಲದೆಂದಿಗೂ! ಧರೆಯ ಕಾಳ ನರಕ ನೀನು, ಓ ಕರಾಳ ದೀವಿಯೇ! ನಾಕವೆಂದೆ ಬಗೆವೆ; ಕೆರಳು! ಕೆರಳಿ ಕೆಂಡವಾಗಿಸು!  ಭರತಭೂಮಿಸುತನು ನಾನು ಪರಮವೀರಚೇತನ, ಮರಣದೆದುರು ಮುಗುಳುನಗುವೆ; ರೌದ್ರದೆದುರು ರುದ್ರ ನಾ! ಅಪರಿಮೇಯದಾಚೆಗಿರುವೆ, ನಾನು ಅಗಣಿತಾತ್ಮನು; ಪೂರ್ಣರಾದ ಋಷಿಮುನಿಗಳ  ಮೇರುಕುಲದೆ ಜಾತನು. ಅಳವುಗುಂದಿದೆಲರೆ ಕೇಳು, ಕೇಳಿ ಕಿಗ್ಗಡಲುಗಳೇ! ಅವನ ಸತ್ತ್ವದಿಂದ ನೀವು, ಹಿಡಿಯಲವನ ಸಾಧ್ಯವೇ? ಆ ಪರಾತ್ಪರದೊಳಗೊಂದುಗೂಡಿದಾತ್ಮ ನನ್ನದು, ಆದರೇನು? ಭಾರತೀಯನೆಂಬ ಹೆಮ್ಮೆ ಕುಂದದು! ನಾನೆ ಶರ್ವ, ನಾನೆ ಸರ್ವ; ಗಹ್ವರದೊಳು ಧುಮುಕುವೆ, ಪ್ರಾಣನಾಥನಲ್ಲಿ ಸಿಗುವ, ಸಚ್ಚಿದಾನಂದವೇ! - ವೆಂಕಟೇಶಪ್ರಸನ್ನ The original: The Banished Indian Patriot - Sonnet 2  - Kuppalli Venkatappa Puttappa (Kuvempu) Ye oceans that around me spread your vast And endless wavy bosom, roar and swell! And O thou...

Kannada Translation of "The Man of Life Upright"

Image
An attempt at translating Thomas Campion's poem to Kannada - "The Man of Life Upright": ನೀತಿವಂತ ಮಾನವ ನೀತಿವಂತನಾಗಿ ನಡೆವ ನರನ ಬದುಕೆ ಸುಂದರ, ಹರುಷ ತುಂಬಿದವನ ಮನಸು ನಿರಾತಂಕ ಹಂದರ. ಪಾಪಕರ್ಮಋಣದ ಭಾರದಿಂದಲವನು ಲುಪ್ತನು, ದುರಭಿಮಾನವೆಂಬ ನೊಗದ ದಾಸ್ಯದಿಂದ ಮುಕ್ತನು. ತನ್ನ ಬಾಳ ನೀರವತೆಯನವನು ಕಳೆವನನುದಿನ, ಹೆರರಿಗಾವ ಕೇಡು ತರದ ಚಿದಾನಂದ ಚೇತನ. ತನ್ನ ನಂಬಿಕೆಗಳ ನೆಚ್ಚಿ ಅವನು ಮರುಳನಾಗನು, ಶೋಕವೆಷ್ಟೆ ಇದ್ದರೇನು? ನಿರುತ್ಸಾಹವಿಣುಕದು. ಬೇಡವವನಿಗಾವ ಕೋಟೆ ಕೊತ್ತಲಗಳ ರಕ್ಷಣೆ ಅವನ ಕಾಪಿಗೇಕೆ ಬೇಕು ಕವಚ ಹರಿಗೆ ಮಾರ್ಗಣೆ? ದುರಿತಗಳನು ಹುದುಗಿಸಿಡುವ ಗೊಡವೆಯಿಲ್ಲವವನಿಗೆ ಮನದೊಳಿಲ್ಲ ಸಿಡಿಲಿನಂತೆ ಕುತ್ತೆರಗುವ ಹೆದರಿಕೆ. ಗಹ್ವರದೊಲು ಗಹನವಿರುವ ದಿಗಿಲು ಎಲ್ಲೆ ಮೀರಲಿ! ಮುಗಿಲಿನಿಂದ ಬರ್ಬರತೆಯೆ ಮೇಲೆ ಬಿದ್ದು ಮೆರೆಯಲಿ! ದಿಟ್ಟಿಸುತ್ತಲವನು ನೋಡಬಲ್ಲ ಗಟ್ಟಿ ಮನದಲಿ, ಭಯವೆಂಬುದನರಿಯನವನು ತೊಡಕದೇನೆ ಸುಳಿಯಲಿ. ತೃಣಸಮಾನವವನಿಗಿಹದ ಕೊರಗು, ಚಿಂತೆ, ತಳಮಳ. ವಿಧಿಯ ದೆಸೆಯೊ ಹಣೆಬರಹವೊ - ಅವನಿಗಿಲ್ಲ ಕಳವಳ. ದೈವದೆಡೆಗೆ ಚಿತ್ತವದುವೆ ವೇದವಾಕ್ಯವವನಿಗೆ, ಪಾರಮಾರ್ಥಿಕತೆಯ ಮರ್ಮವವನ ತಿಳಿವಿಗಾಸರೆ. ಅವನು ಬಯಸುವೊಳಿತುಗಳೇ ಅವನ ಗೆಳೆಯರೆನ್ನಿರಿ! ತುಂಬು ಬಾಳಿನವನ ಬದುಕೆ ಅವನು ಗಳಿಸಿದೈಸಿರಿ. ಗಳಿಗೆ ನೆಲೆಸಿ ದಣಿವ ನೀಗಿ ನಡೆವ ಸತ್ರವೀ ಧರೆ, ಅವನಿಗಿದೋ ತೀರ್ಥಯಾತ್ರೆ, ಮನಕೆ ನೆಮ್ಮದಿಯ ಸೆಲೆ. -...

ಅಲರು - Kannada translation of Alfred Lord Tennyson's "The Flower"

Image
An attempt at translating Alfred Lord Tennyson's poem, "The Flower": ಅಲರು ಗಳಿಗೆಯು ಹೊನ್ನಿನದೆನಿಸಿತ್ತು, ಇಳೆಗಿರಿಸಿದೆ ನಾನೀ ಬಿತ್ತು. ಬೆಳೆದಿತ್ತದರಿಂದೊಂದಲರು, ಕಳೆಯದು ಕೀಳೆಂದರು ಜನರು. ಸುಳಿದಾಡುತಲೆನ್ನಂಗಳದಿ ತಳಿರಿನ ತೋಪಿನ ಹಂದರದಿ ಹಳಿದರು ಗೊಣಗುತ ನನ್ನನ್ನು, ನಳನಳಿಸುವ ನನ್ನಲರನ್ನೂ! ಬೆಳಯಿತದೆತ್ತರಕೆತ್ತರಕೆ ಬೆಳಗಿತು ತೋಟವ ಕಾಂತಿಶಿಖೆ! ದುರುಳರು ಬೇಲಿಯನೆಗರಿದರು, ಇರುಳಲಿ ಬಿತ್ತವ ಕಳವಿದರು. ಬಿತ್ತಿದರದನೆಲ್ಲೆಡೆಗಳಲಿ ಸುತ್ತಲಿನೂರಲಿ, ಪೊದೆಗಳಲಿ. ಎತ್ತರದುಲಿಯಲಿ ಜನರೆಲ್ಲ, ಉತ್ತಮವೀ ಹೂವೆಂದರಲ! ಗೆಳೆಯನೆ, ನನ್ನೀ ಕಥೆ ಕೇಳು, ತಿಳಿಯಾಗಿದೆ ಇದರೊಳತಿರುಳು. ಮೊಳಕೆಯು ಈಗೆಲ್ಲೆಡೆ ಲಭ್ಯ, ಬೆಳೆಸಲು ಹಲರಿಗೆ ಸುಖಸಾಧ್ಯ. ಚೆಲುವಿನ ಹೂಗಳು ಕೆಲವಿಹವು, ಕೆಲವಲರುಗಳೋ ಕಳಪೆಯವು. ಹಳಿಯುವ ಜನರೂ ಮರಳಿಹರು,  ಕಳೆಯೆನ್ನುತ ಹೀಗಳೆದಿಹರು. The original: The Flower Once in a golden hour I cast to earth a seed. Up there came a flower, The people said, a weed. To and fro they went Thro' my garden bower, And muttering discontent Cursed me and my flower. Then it grew so tall It wore a crown of light, But thieves from o'er the wall Stole the seed by night. Sow'd it far and wide By every town...

Kannada Translation of Robert Frost's Fireflies in the Garden

Image
An attempt at translating the poem "Fireflies in the Garden" by Robert Frost to Kannada:   ತೋಟದ ಮಿಂಚುಹುಳಗಳು ಬಾನನು ತುಂಬುತ ಬಂದಿವೆ ನೋಡಿರಿ ತಾರೆಗಳಪ್ಪಟ ಥಳಥಳಿಸಿ, ಹಾರುತ ಬಂದಿವೆ ಮಿಂಚಿನ ಹುಳಗಳು ಧರೆಯೊಳಗವುಗಳನನುಕರಿಸಿ. ಹೋಲಿಸಿ ನೋಡಿರಲಳತೆಯಲೆಂದೂ ತಾರೆಗೆ ಸಾಟಿಯವಾಗದವು; ವಾಸ್ತವವಿದುವೇ, ಅಂತಃಕರಣದಿ ಸುತರಾಂ ತಾರೆಗಳಲ್ಲವವು. ಅಂದೋ ಇಂದೋ ತಾರೆಗಳಂದದ ಆದಿಯನೇನೋ ಗಳಿಸುವುವು. ಆದರೆ ನಿಶ್ಚಿತ, ಆ ಪರಿ ಥಳಕನು ಕಾಪಿಡಲಾಗದೆ ಕುಂದುವುವು. The original by Robert Frost: Fireflies in the Garden Here come real stars to fill the upper skies, And here on earth come emulating flies, That though they never equal stars in size, (And they were never really stars at heart) Achieve at times a very star-like start. Only, of course, they can’t sustain the part.

ಬಿಡುವು - Kannada Translation of "Leisure" by W H Davies

Image
  ಬಿಡುವು ಏನು ಬಾಳಿದು? ತುಂಬಿ ತುಳುಕಿರೆ ಚಿಂತೆ, ಕಳವಳ, ಕಿಂಕೃತಿ; ನಿಂತು ನೋಡುತ ಕೆಲವು ಚಣಗಳ ಕಳೆಯಲಾಗದ ಧಾವತಿ. ದೂರ ಬಯಲಲಿ ಮೇಯ್ವ ಹಸುಗಳ ದಿಟ್ಟಿಸಲು ಬಿಡುವೆಲ್ಲಿದೆ? ಮರದ ನೆರಳಲಿ ದಣಿವ ನೀಗಲು ಗಳಿಗೆಯೊಂದಕು ಬರವಿದೆ! ಅಳಿಲ ಜೋಡಿಯು ಸಿಕ್ಕ ಹಣ್ಣನು ಹುದುಗಿಸಿಡುತಿರೆ ಪೊದೆಯಲಿ, ನಿಂತು ನೋಡಲು ಸಮಯವೆಲ್ಲಿದೆ ಕಾಡ ಹಾದಿಯ ನಡೆಯಲಿ! ಹಗಲು ತಾನೇ ನಿಶೆಯ ಬಾನಿನ ತೆರದ ಮಿನುಗನು ಸೂಸಿದೆ, ಹರಿವ ಹೊಳೆಯಲಿ ಹೊಳಪ ನೋಡಲು ಬಿಡುವು ಕಾಣದ ಗತಿಯಿದೆ. ಮಿಂಚುನೋಟವ ಹರಿಸಿ ರೂಪವು ನರ್ತಿಸುತ ತಾ ನಲಿದಿರೆ ಹೆಜ್ಜೆ ಹಾಕುವ ಬೆಡಗು ನೋಡಲು ವೇಳೆ ಸಾಲದ ಕರಕರೆ. ಅವಳ ಕಣ್ಣಂಚಿನಲಿ ಮೂಡಿದ ಮಂದಹಾಸದ ಸೌರಭ ತುಟಿಗೆ ಹಬ್ಬುವ ತನಕ ಕಾಯುವ ಸಹನೆಯೂ ಸಹ ದುರ್ಲಭ. ಕಳಪೆ ಬಾಳಿದು - ತುಂಬಿ ತುಳುಕಿರೆ ಚಿಂತೆ, ಕಳವಳ, ಕಿಂಕೃತಿ; ನಿಂತು ನೋಡುತ ಗಳಿಗೆಯೊಂದನು ಕಳೆಯಲಾರದ ಧಾವತಿ. - ವೆಂಕಟೇಶಪ್ರಸನ್ನ The original by W H Davies: Leisure WHAT is this life if, full of care, We have no time to stand and stare?— No time to stand beneath the boughs, And stare as long as sheep and cows: No time to see, when woods we pass, Where squirrels hide their nuts in grass: No time to see, in broad daylight, Streams full of stars, like skies at night: No time to turn at Beaut...