Posts

Showing posts from 2017

ನಾಶಿಕ್ - ಇತಿಹಾಸ, ಪುರಾಣ ಮತ್ತು ವಾಸ್ತುಶಿಲ್ಪ

Image
2015 ಜುಲೈ ತಿಂಗಳು ಬಂತೆಂದರೆ ಭಾರತದ ನಾಲ್ಕು ಪವಿತ್ರ ಯಾತ್ರಾಸ್ಥಳಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮಹಾರಾಷ್ಟ್ರದ ನಾಶಿಕ್‍ನಲ್ಲಿ ಮತ್ತೆ ಮೇಳೈಸುತ್ತದೆ. ಒಂದು ವರ್ಷಕ್ಕೂ ಮೇಲ್ಪಟ್ಟು, ಅಂದರೆ ೨೦೧೬ರ ಆಗಸ್ಟ್ ತಿಂಗಳವರೆಗೂ ಶಾಹಿ ಸ್ನಾನಗಳು, ಪವಿತ್ರ ಪೂಜೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ನಗರವು ಜನವರಿಯಿಂದಲೇ ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ ಎಂಬುದು ನಾಶಿಕ್‍ಗೆ ಈಚೆಗೆ ಭೇಟಿ ಕೊಟ್ಟ ಎಲ್ಲರಿಗೂ ಸುಲಭದಲ್ಲಿ ವೇದ್ಯವಾಗುತ್ತದೆ. ನಗರದೊಳಗಿನ ಮತ್ತು ರಾಜ್ಯದ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ ಒಂದೆಡೆ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಬರುವ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನಗರದುದ್ದಗಲಕ್ಕೂ ಮತ್ತು ನಾಶಿಕದಿಂದ ತ್ರ್ಯಂಬಕೇಶ್ವರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ವಸತಿಗೃಹಗಳ ಮತ್ತು ಧರ್ಮಛತ್ರಗಳ ಸಮುಚ್ಚಯಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಮಹಾಕುಂಭಮೇಳ ನಡೆಯುವ ಇತರ ಮೂರು ಸ್ಥಳಗಳಾದ ಹರಿದ್ವಾರ, ಪ್ರಯಾಗ ಮತ್ತು ಉಜ್ಜೈನಿಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಿಗೆ ಇದ್ದುದರಲ್ಲಿ ಹತ್ತಿರವಾಗಿರುವ ನಾಶಿಕ್‍ಗೆ ರಸ್ತೆ ಮತ್ತು ರೈಲು ಸಂಪರ್ಕಗಳೆರಡೂ ಸಮರ್ಪಕವಾಗಿದ್ದು, ಕುಂಭಮೇಳವನ್ನು ನೋಡಿ ಕಣ್ತುಂಬಿಕೊಳ್ಳುವ ಮತ್ತು ಭಾಗವಹಿಸಿ ಪುನೀತರಾಗುವ ಆಸೆಯಿದ್ದವರಿಗೆ ಮುಂದಿನ ಒಂದು ವರ್ಷ ಪ್ರವಾಸೀ ತಾಣವಾಗಿ ಆಕರ್ಷಿಸುವ ಸಾ...

ರಾಮ ಗೋವಿಂದ ಹರೇ - ಕನಕದಾಸರ ದೇವರನಾಮ

Image
ಕನಕದಾಸರ ಈ ದೇವರನಾಮ ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುವಂತಾಗಿ ಕಳೆದ ಕೆಲವು ದಿನಗಳಲ್ಲಿ ಹಲವು ಬಾರಿ ಕೇಳಿದ್ದಾಗಿದೆ. ಅಷ್ಟು ಸುಂದರ ಸಾಹಿತ್ಯ. ಅಷ್ಟೇ ಭಕ್ತಿಪರವಶವಾಗುವಂತಹ ಗಾಯನ ಕುರುಡಿ ವೆಂಕಣ್ಣಾಚಾರ್ ಮತ್ತು ಅವರ ಮಗ ಕೆ. ವಿ. ನಂದಕುಮಾರ್ ಅವರಿಂದ. ಆಹಿರ್ ಭೈರವ್  ರಾಗವೂ ತನ್ನ ಪ್ರಭಾವವನ್ನು ಸಂಪೂರ್ಣವಾಗಿ ಬೀರುತ್ತದೆ... ರಾಮ ಗೋವಿಂದ ಹರೇ... ಕೃಷ್ಣಾ... ॥ ಪ ॥ ದಾಮೋದರ ಹರಿ ವಿಷ್ಣು ಮುಕುಂದಾ... ॥ ಅ ॥ ಮಚ್ಚಾವತಾರದೊಳಾಡಿದನೇ ಮಂದರಾಚಲ ಬೆನ್ನೊಳಗಾಂತವನೇ ಅಚ್ಚಸೂಕರನಾಗಿ ಬಾಳಿದನೇ ಮದ ಹೆಚ್ಚೆ ಹಿರಣ್ಯಕನ ಸೀಳಿದನೇ ॥ ೧ ॥ ಬಲಿಯೊಳು ದಾನವ ಬೇಡಿದನೇ ಕ್ಷತ್ರಕುಲವ ಬಿಡದೆ ಕ್ಷಯ ಮಾಡಿದನೇ ಜಲನಿಧಿಗೆ ಬಿಲ್ಲನ್ನು ಹೂಡಿದನೇ ಕಾಮಕ್ಕೊಲಿದು ಗೊಲ್ಲತಿಯೊಳಗಾಡಿದನೇ ॥ ೨ ॥ ಸಾಧಿಸಿ ತ್ರಿಪುರರ ಗೆಲಿದವನೇ ಪ್ರತಿಪಾದಿಸಿ ಹಯವೇರಿ ನಲಿದವನೇ ಭೇದಿಸಿ ವಿಶ್ವವ ಗೆಲಿದವನೇ ಬಾಡದಾದಿಕೇಶವ ನಮಗೊಲಿದವನೇ ॥ ೩ ॥

Some glimpses from yesterday's Fort High School Concert by Trichur Brothers

Image

ಡಂಬಳ: ಮತ್ತೆ ಮತ್ತೆ ನೋಡಬೇಕೆನಿಸುವ ಹಂಬಲ

Image
ಹನ್ನೊಂದು ಮತ್ತೆ ಹನ್ನೆರಡನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ಮತ್ತು ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪದ ಪರಾಕಾಷ್ಠೆಯನ್ನು ಪ್ರದರ್ಶಿಸುವ ಹಲವು ದೇಗುಲಗಳಿಗೆ ಗದಗ ಜಿಲ್ಲೆ ಇಂದು ತವರೂರಾಗಿದೆ . ಇವುಗಳಲ್ಲಿ ಅತ್ಯಂತ ಸುಂದರವಾಗಿದ್ದೂ ಸಹ ಎಲೆಮರೆಯ ಕಾಯಾಗಿರುವ ಡಂಬಳ ದ ದೊಡ್ಡಬಸಪ್ಪ ದೇವಾಲಯವೂ ಒಂದು . ಡಂಬಳ ಗದಗಿನಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರವಿದ್ದು , ಮುಂಡರಗಿ ತಾಲ್ಲೂಕಿಗೆ ಸೇರಿರುವ ಒಂದು ಹಳ್ಳಿ . ಆದರೆ ಇದೇ ಡಂಬಳ ಚಾಲುಕ್ಯರ ಕಾಲಕ್ಕೆ ಮಾಸವಾಡಿನಾಡೆಂದು ಕರೆಸಿಕೊಂಡ ಪ್ರದೇಶದ ರಾಜಧಾನಿಯಾಗಿ ಮೆರೆದ ಧರ್ಮಪುರ , ಧರ್ಮೋಳ , ಧರ್ಮವೊಳಲ್ ಎಂದೆಲ್ಲಾ ಹೆಸರು ಮಾಡಿದ್ದ ಮಹಾಪಟ್ಟಣ . ಆಗಿನ ಕಾಲದ ಧಾರ್ಮಿಕ ಅನ್ಯೋನ್ಯತೆಗೆ ಹಿಡಿದ ಕನ್ನಡಿಯಂತಿದ್ದ ಡಂಬಳದ ಶಿಲ್ಪಕಲಾ ಮತ್ತು ಐತಿಹಾಸಿಕ ಹೆಚ್ಚುಗಾರಿಕೆನ್ನು ಬಿಂಬಿಸುವ ಪ್ರಯತ್ನ ಈ ಲೇಖನ . ಚಿತ್ರ ೧. ದೂರದಿಂದಲೇ ಕೈಬೀಸಿ ಕರೆಯುವ ದೊಡ್ಡಬಸಪ್ಪ ದೇವಾಲಯ ಡಂಬಳ ಮತ್ತು ಆಸುಪಾಸಿನಲ್ಲಿ ದೊರಕಿರುವ ಶಾಸನಗಳ ಪ್ರಕಾರ ಹಿಂದೆ ಈ ಹಳ್ಳಿ ಬೌದ್ಧ , ಜೈನ ಮತ್ತು ಹಿಂದೂ ಧರ್ಮಗಳ ಪೋಷಣೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿರುವುದು ಕಂಡುಬರುತ್ತದೆ . ಕ್ರಿ.ಶ. 1059 ರ ಶಾಸನದಿಂದಾಗಿ ಡಂಬಳದಲ್ಲಿ ಮೊದಲೇ ಉಪಸ್ಥಿತವಿದ್ದ ಜಿನಾಲಯವೊಂದಕ್...