Kannada Translation of "To Sleep" By John Keats
Kannada Translation of "To Sleep" by John Keats: ನಿದಿರೆಗೆ... ನಿಚ್ಚಳದ ನಡುರಾತ್ರಿ ನರುಗಂಪು ಹೊಸೆದು ಬೆರಳುಗಳ ನಯದಿಂದ ಕಂಗಳನು ಬೆಸೆದು ಕವಿದ ಮಂಕನು ಹರಿಸಿ ಬೆಳಕನಾವರಿಸು ನೆರಳಾಗಿ ಸೊಗದಿಂದ ನೆನಪುಗಳ ಮರೆಸು ನಿದಿರೆಯೇ! ನಿನ್ನಿಚ್ಛೆಯಿರುವಂತೆ ಮಾಡು ನುತಿಸುತಿರೆ ನಡುವಿನಲೆ ನಯನಗಳ ಕೂಡು ನಮನದಂತ್ಯಕೆ ಕಾಯ್ದು ದಯೆಯೆನಗೆ ನೀಡು ಗಸಗಸೆಯ ಮಹಿಮೆಯೊಲು ಲಾಲಿಯನು ಹಾಡು ರಕ್ಷಿಸೆನ್ನನು, ಮುಗಿದ ದಿನ ಮೆರೆಯದಿರಲಿ ನನ್ನ ದಿಂಬಿನ ಮೇಲೆ ಗೋಳರಳದಿರಲಿ ಕಡುಗತ್ತಲಲಿ ಭಾವಮರ್ಮ ಕೊರೆದಿರಲು ಬಿಡಿಸು ಬಿಗಿಹಿಡಿತದಿಂದೆನುವುದೆನ್ನೊರಲು! ಜಾರುತಿಹ ಕೀಲಿಯನು ತಿರುವು ಚುರುಕಿನಲಿ, ನನ್ನಾತ್ಮ ಸಂಪುಟಕೆ ನೀರವತೆ ಬರಲಿ! The original by Jon Keats: To Sleep O soft embalmer of the still midnight, Shutting, with careful fingers and benign, Our gloom-pleas'd eyes, embower'd from the light, Enshaded in forgetfulness divine: O soothest Sleep! if so it please thee, close In midst of this thine hymn my willing eyes, Or wait the "Amen," ere thy poppy throws Around my bed i...