Posts

Showing posts from December, 2019

Kannada translation of Robert Frost's "Devotion"

Image
An attempt at Kannada Translation of Robert Frost's poem Devotion: ಅನುರಾಗ ಪುನರಾವರ್ತನೆಯನ್ನೆಣಿಸುತ್ತಲನವರತ ತಡಿಯ ಕೋರೆಗೆ ನೆಲೆ ನಿಂತು ಹಿಡಿದಿಡುತ ಕಡಲಿನೊಡಲಿಗೆ ಬೆಸೆದ ತೀರದಂತಿರುವಾಗ ಮನಸ್ಸೆಣಿಸಲಾರದು ಇದನುಳಿದ ಅನುರಾಗ The original: " Devoton" by Robert Frost: The heart can think of no devotion Greater than being shore to the ocean-- Holding the curve of one position, Counting an endless repetition.

Kannada Translation of the poem "Cerebral Palsy"

An attempt at translating Dr. Chandana Sri 's poem "Cerebral Palsy" to Kannada, one of the most beautiful and moving poems I have come across in recent times. The original is below the translation, and I would be very surprised if the last four lines of the original in particular did not move many people to tears or make them contemplate in general. Dr. Chandana says she wrote this poem about 4 years ago, when a kid with cerebral palsy had come in with pneumonia for treatment. ಸೆರೆಬ್ರಲ್ ಪಾಲ್ಸಿ ಮರಮರಳಿ ನನ್ನತ್ತ ನೀ ನೋಡಿದಾಗೆಲ್ಲ ಮರೆಯಾಗಲಿನ್ನೆಂದು ಬಯಸಿಲ್ಲವೇ? ನಿನ್ನ ಪಾಲಿಗೆ ನಾನು ಮತ್ತೆ ಬೇರಿನ್ನೇನು? ಎಡಬಿಡದೆ ಕಾಡುತಿಹ ದಿಗಿಲಲ್ಲವೇ? ಬಲಹೀನನಿವ ತನ್ನ ಅಡಗಿನುಂಡೆಯೆ ಕಾಣು ಮೂಕನಿವ ಹೆಡ್ಡನಿವನೆನಿಸಿಲ್ಲವೇ? ಮರುಕವಿಲ್ಲದ ವಿಧಿಯು ತಿರುಚಿರಲು ನನ್ನಿರವ ಬೆಲೆಯೇನು ಇವನದೆಂದೆನಿಸಿಲ್ಲವೇ? ನನ್ನೆಡೆಗೆ ನೋಡಿ ನೀ ನಗುವೆಯಾ, ಈ ನನ್ನ ನವಿರಿರದ ನಡೆಗಳನು ಅಣಕಿಸುವೆಯಾ? ನನ್ನೊಳಗೆ ಉರಿಯುತಿಹ ಚೈತನ್ಯದಗ್ನಿಯನು ನೋಡುವಾಸೆಗೂ ನೆಲೆಯ ಕೊಡದಾದೆಯಾ? ನನ್ನಿಂದ ನೀ ಪಡೆದ ನಲಿವುಗಳ ಸಮನಾದ ಒಲವ ನೀ ನನಗೆಂದು ಕೊಡಮಾಡೆಯಾ? ಹೇಗಿರಲುಬಹುದಿತ್ತು ...

Kannada Translation of "Wounded Healers"

Image
Translation of Dr. Chandana Sri's poem "Wounded Healers" in Kannada. A tribute to all the doctors out there. ಗುಣಪಡಿಸುವ ಗಾಯಾಳುಗಳು  ತೊಡಕಿನದು ಕಡಿದಿನದು ನಾವಾರಿಸಿಹ ದಾರಿ ನಡಿಗೆಯಿದೆ ಬಲುದೂರ ಕಷ್ಟಸಾಧ್ಯ । ಒಡನಿರುವ ಕಣಿವೆಯೋ, ಆಳವಿದೆ ಘೋರವಿದೆ ಗಡಸಿನಾಳುಗಳಿಗೂ ವಿಷಮಭೇದ್ಯ ॥  ಒರೆಗೆ ನಮ್ಮನು ಹಚ್ಚಿ ದಿನದಿನವು ಪರಿಕಿಸುತ ಒರೆಯುತೆಮಗೂಳಿಗದ ಹೆಣಗಾಟವ ।  ಕೊರೆಯಿಲ್ಲದಂತೆಮಗೆ ತಾಳ್ಮೆಯಂ ಕಲಿಸುವರು ಪೊರೆಯೆ ನಾವ್ ಬೇನೆಯಿಂ ಸೊರಗಿರ್ಪರ ॥ ಕಲಿಸಿಹರು ಬಾಳುವುದ ಬಾಳಿಸಲ್ಕೆನುತಲೇ ಬೆಳೆಸುತ್ತಲುಕ್ಕಿನೆದೆ ನರಗಳನ್ನು । ನೆಲೆಗೊಳಿಸಿ ಕೊಡುವುದನು, ಮರೆಸಿಹರು ಪಡೆವುದನು ಕಲೆತು ನಾವ್ ಸಂತೈಸಿ ಮಾಯಿಸಿರಲು ॥ ಹದವರಿತ ಕಲೆಯಿಂದ ನುರಿತ ಕುಶಲತೆಯಿಂದ ಕದನವೊಂದನು ನಾವು ಕಾಯಬೇಕು । ಎದೆಯನುಬ್ಬಿಸಿ ಮತ್ತೆ ಗುಂಡಿಗೆಯ ಹುರಿಗಟ್ಟಿ ಬೆದರಿಸುವ ಹುರುಡ ನಾವರಸಬೇಕು ॥ ಸಮರದಿಂ ಪೆಟ್ಟುಗಳ ಮರಮರಳಿ ಪಡೆಯುತ್ತ ಕಮರುತ್ತ ಕಂದುತ್ತ ಕಲಹದಿಂದ । ಶಮಿಸುತ್ತ ಗುಣಪಡಿಪ ಗಾಯಾಳುಗಳಿಗುಂಟು ತಮವ ನೀಗುವ ಬದುಕಿನಾಚೆಯರಿವು ॥ ಕಣದಷ್ಟೆ ಮಾರ್ಪಾಟು ನಮ್ಮಿಂದಲಾಗುತಿರೆ ಚಣಚಣಕು ಬೆಲೆಯಿರುವುದೆನ್ನುತಿಹೆವು । ದಣಿವ ತರಿಸುವ ದುಡಿಮೆ ಫಲವೀಯುತಿದೆಯೆನುತ...

Translation of "Lodged" by Robert Frost

Image
ಶರಣಾಗತಿ ಮಳೆಯು ಹೇಳಿತು ಗಾಳಿಗೆ - 'ದೂಡು ನೀ, ನಾ ಜಡಿಯುವೆ' ಬಡಿಯಲವುಗಳು ತೋಟವ, ನಲುಗಿ ಹೂಗಳು ಬಾಗಿವೆ. ಬಳಲಿ ಸಾಯದೆ ಮಲಗಿವೆ, ಅವುಗಳನುಭವವರಿತಿಹೆ... Image attribution: CC BY 2.0 by Chris Metcalf Original "Lodged" from Robert Frost: The rain to the wind said, 'You push and I'll pelt.' They so smote the garden bed That the flowers actually knelt, And lay lodged--though not dead. I know how the flowers felt.

Translation of Rudyard Kipling's "If" to Kannada

Image
ರೆ... ನಿನ್ನ ನೆಮ್ಮದಿಯ ನೀಂ ಕಾಪಿಟ್ಟುಕೊಳ್ಳುತಿರೆ ನಿನ್ನನೇ ಹಳಿಯುತಿರೆ ತಲ್ಲಣಿಸಿದುಳಿದವರು, ನಿನ್ನಳವಿನೊಳು ನಿನ್ನ ನಂಬುಗೆಯದಚಲವಿರೆ ಅನ್ಯರಪನಂಬಿಕೆಯ ಮನ್ನಿಸುತ ನಡೆಯುತಿರೆ ತಾಳುವಿಕೆ ನಿನ್ನೊಳಿರೆ, ತಾಳ್ಮೆಯಿಂ ದಣಿಯದಿರೆ ದಾಳಿ ಹುಸಿಯಿಂ ನಡೆಸೆ ಹುಸಿಯ ನೀನಾಡದಿರೆ ಬಾಳೆ ಹಗೆತನವಾಗೆ ಹಗೆಯ ನೀಂ ಬಯಸದಿರೆ ಢಾಳಾಗಿ ಕಾಣಿಸದೆ ಮಾತಿನೊಳ್ ವಿನಯವಿರೆ ಕನಸ ನೀಂ ಕಾಣುತಿರೆ ಕನಸಿನಾಳಾಗದಿರೆ ಮನದಿ ಮಂಥನ ನಡೆಸೆ ಚಿಂತೆಯೀಡಾಗಿಸದೆ ನಿನಗಾಗಿ ಬಂದಿರುವ ಗೆಲುವು ಸೋಲೆಂಬೆರಡು ಘನಕಪಟಿಗಳ ನಡುವೆ ಸಮತೆಯಂ ತೋರುತಿರೆ ನಿನ್ನ ಸತ್ಯವ ತಿರುಚಿ ಕೇಡಿಗರು ಮರುಳರಿಗೆ ಗನ್ನವಾಗಿಸೆ, ಕೇಳಿ ಸಹಿಸುವಾಚಾರವಿರೆ ಭಿನ್ನಗೊಂಡಿರೆ ಜೀವ ಮುಡಿಪಿಟ್ಟು ಮಾಳ್ದ ಬೆಸ ಇನ್ನೊಮ್ಮೆ ನೀನದನು ಕಟ್ಟಲಣಿಯಾಗುತಿರೆ ಗಳಿಕೆಯಂ ನಿನದೆಲ್ಲ ಕುತ್ತಿಗೆಂದಡವಿಟ್ಟು ಬೆಳೆವುದೋ ಕಳೆವುದೋ ತಿಳಿಯದೇ ನಡೆಯುತಿರೆ  ಕಳೆದರೂ ಮತ್ತೊಮ್ಮೆ ಮೊದಲಿನಿಂ ತೊಡಗುತಿರೆ ಬಳಿಕ ಕಳೆದುದರ ಬಗೆಗುಸಿರನೇ ಎತ್ತದಿರೆ ಮಿಡಿವೆದೆಯ ತುಡಿವ ನರ ದುಡಿವ ಕಸುವಂ ನೀನು ಗಡುವು ದಾಟಿಯು ನಿನ್ನ ನಡೆಗೆಂದು ಸೆಳೆಯುತಿರೆ ಉಡುಗಿರಲು ನಿನ್ನಳವು ಅಡಿಗಡಿಗೆ ಬಳಲಿರಲು "ಬಿಡದೆ ಮುನ್ನಡೆ"ಯೆಂದು ದೃಢಮನವದೆನ್ನುತಿರೆ ಎಲ್ಲರೊಳಗೊಂದಾಗಿಯೂ ನಿನ್ನ ಹಿರಿಮೆಯಿರೆ ಮಲ್ಲರಾಜರ ಜತೆಗೆ ನಡೆದರೂ ವಿನಯವಿರೆ ಬಲ್ಲ ಸಖರೂ ಹಗೆಗಳೂ...