ಹೂಗಳ ತಂದಿಹೆ...
ಹೂಗಳ ತಂದಿಹೆ... ಹೊನ್ನಿನ ಬೆಳಕಿನ ಬೆಳಗಿನ ಜಾವದಿ ನಿನ್ನನಗಲಿ ನಾ ನಡೆದಿದ್ದೆ, ಇನ್ನು ಬರುವೆನೆಂದುಲಿದಿದ್ದೆ. ಹೊರಟಿರಲೆನ್ನೊಡನಡಿಗಳನಿಕ್ಕುತ ಹರದಾರಿಯ ನೀ ಸವೆಸಿದ್ದೆ, ವಿರಹದ ಕೊರಗನ್ನು ತರಿಸಿದ್ದೆ. ಮರಳಿರೆ ನಾ ಗೋಧೂಳಿಯ ಸಮಯದಿ ಗುರುತಿರದಾಯಿತೆ ನಿನಗೆನದು? ಬಳಲಿಹೆನಲೆದಾಡುತ ನಾ ದಿನವೂ - ಮಳಲಿನ ಮಣ್ಣಿನ ಕೊಳೆಯಿಹುದು. ಮಾತಿರದಾಗಿದೆ, ಹೇತುವದೇನಿದೆ? ಪರಿಚಯವಳಿದಿಹುದರ ಫಲವೊ? ಗುರುತಿಹುದರ ಪರಿಣಾಮವದೊ? ನನಗೊಬ್ಬನಿಗೇಕೀ ಆಕ್ಷೇಪಣೆ? ವನಸುಮಗಳಿಗೇತಕೆ ಸಲ್ಲ? ಬಾಡಿದ ಹೂಗಳ ನಾನೈತಂದಿಹೆ, ಬೇಡಿಕೆಯದರೆಡೆಗೇಕಿಲ್ಲ? ಮಲರುಗಳೆನ್ನನು ನಿನ್ನೆಡೆಯಿಂದಲಿ ಬಲುದೂರಾಗಿಸುತಿವೆಯಲ್ಲ! ಹಗಲೊಂದರ ಕೆಲ ಗಳಿಗೆಗಳಗಲಿಕೆ ಯುಗಗಳೆ ಕಳೆದಂತಿಹುದಲ್ಲ! ಒಲವಿನಲರುಗಳ ನಿನಗೊಪ್ಪಿಸುತಿಹೆ ಬೆಲೆಯನು ಪರಿಗಣಿಸುತ ಸಲಹು, ಕಲೆಹಾಕಲು ನಾ ದೂರಾಗಿದುದರ ಫಲವನಳೆಯಲದುವೇ ಕುರುಹು. Original: Flower-Gathering I left you in the morning, And in the morning glow, You walked a way beside me To make me sad to go. Do you know me in the gloaming, Gaunt and dusty grey with roaming? Are you dumb because you know me not, Or dumb because you know? All for me? And not a question For the faded flowers gay That could take ...