Posts

Showing posts from October, 2022

ಅಕ್ಟೋಬರ್‌ಫೆಸ್ಟ್: ಜನ ಮರುಳೋ ಜಾತ್ರೆ ಮರುಳೋ!

Image
  ಅಕ್ಟೋಬರ್‌ಫೆಸ್ಟ್:  ಜನ ಮರುಳೋ ಜಾತ್ರೆ ಮರುಳೋ! ಅಕ್ಟೋಬರ್‌ಫೆಸ್ಟ್ ಎನ್ನುವುದು ಜರ್ಮನಿಯ ಮ್ಯೂನಿಕ್ ನಗರದಲ್ಲಿ ಪ್ರತಿ ವರ್ಷ ಸಪ್ಟೆಂಬರ್ ಮೂರನೇ ವಾರಾಂತ್ಯದಿಂದ ಅಕ್ಟೋಬರ್ ಮೊದಲನೇ ವಾರಾಂತ್ಯವನ್ನು ದಾಟುವವರೆಗೆ ನಡೆಯುವ ಒಂದು ಬೃಹತ್ ಜನಜಾತ್ರೆ. ಈ ಎರಡೂವರೆ ವಾರಗಳಲ್ಲಿ ಸುಮಾರು ಐವತ್ತರಿಂದ ಅರವತ್ತು ಲಕ್ಷ ಜನರು ಜರ್ಮನಿಯ ಬೇರೆ ಬೇರೆ ಭಾಗಗಳಿಂದಷ್ಟೇ ಅಲ್ಲದೆ ಪ್ರಪಂಚದೆಲ್ಲೆಡೆಯಿಂದ ಮ್ಯೂನಿಕ್ ನಗರಕ್ಕೆ ಪ್ರವಾಸ ಬಂದು ತಮ್ಮದೇ ಆದ ವಿಶಿಷ್ಟ ರೀತಿಗಳಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಐತಿಹಾಸಿಕ ಮಹತ್ತ್ವವುಳ್ಳ ಮೆರವಣಿಗೆಗಳು, ತಿಂಡಿ-ತಿನಿಸು-ಪಾನೀಯಗಳ ಸೇವನೆ, ಸಂಗೀತ ಮತ್ತು ಮನರಂಜನಾಕ್ರೀಡೆಗಳಿಗೆಲ್ಲ ಹೆಸರುವಾಸಿಯಾಗಿರುವ ಅಕ್ಟೋಬರ್‌ಫೆಸ್ಟ್‌ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬಿಯರ್ ಮತ್ತು ಮದ್ಯಸೇವನೆಯ ಜಾತ್ರೆಯೆಂಬಂತೆ ಬಿಂಬಿತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಪ್ರತಿವರ್ಷದ ಜಾತ್ರೆಯಲ್ಲೂ ಎಪ್ಪತ್ತರಿಂದ ಎಂಭತ್ತು ಲಕ್ಷ ಲೀಟರ್‌ಗಳಷ್ಟು ಮದ್ಯ ಖರ್ಚಾಗುವುದು ಇದಕ್ಕೆ ಒಂದು ಕಾರಣವಾದರೆ, ಮತ್ತೊಂದು, ಜಗತ್ತಿನಾದ್ಯಂತ ಅಕ್ಟೋಬರ್‌ಫೆಸ್ಟ್ ಹೆಸರಿನಲ್ಲಿ ಮದ್ಯಸೇವನೆಯನ್ನೇ ಕೇಂದ್ರೀಕರಿಸಿಕೊಂಡು ತಲೆಯೆತ್ತಿರುವ ಸ್ಥಳೀಯ ಉತ್ಸವಗಳು. ಆದರೆ ಮ್ಯೂನಿಕ್‌ನ ಅಕ್ಟೋಬರ್‌ಫೆಸ್ಟ್ ಜಾತ್ರೆಗೆ ಹಲವು ಮುಖಗಳುಂಟು. ಈ ಬರಹ ಅವುಗಳನ್ನು ಪರಿಚಯಿಸುವೆಡೆಗೆ ಒಂದು ಪ್ರಯತ್ನ.   ಜರ್ಮನಿಯ ಆಗ್ನೇಯ ಭಾಗಕ್ಕಿರುವ ಪ್ರಾ...