Posts

Showing posts from February, 2021

Kannada Translation of Robert Frost's "To The Thawing Wind"

An attempt at translating Robert Frost's "To The Thawing Wind" to Kannada: ಬೀಸುವ ಬಿಸಿಗಾಳಿಗೆ... ನೈಋತ್ಯ ಗಾಳಿಯೇ! ಮಳೆಯೊಡನೆ ಬೀಸು ಹಾಡುಹಕ್ಕಿಯ ಗೂಡು ಕಟ್ಟೆನುತ ಕರೆಸು ಹುದುಗಿರುವ ಹೂದಳಕೆ ಕನಸೊಂದ ನೀಡು ಹಳಿ ಕಟ್ಟಿರುವ ಹಿಮವ ಹಬೆಯಾಗಿ ತೀಡು ಬಿಳುಪಿನಾಳದೊಳಿರುವ ಮಣ್ಣ ನೀ ಹುಡುಕು ಈ ರಾತ್ರಿ ನಿನ್ನ ಮನ ಬಂದಂತೆ ಮಾಡು ಬೆಳಕಿಂಡಿಯನು ಮಾತ್ರ ತೋಯಿಸುತ ಹರಿಸು ಜಿನುಗಿಸುತ ಗಡ್ಡೆಯನು ನೀರಾಗಿ ಸುರಿಸು ಕರಗಿಸುತ ಗಾಜುಗಳ ಕಣೆಗಳನ್ನುಳಿಸು ಸಾಧುವಿನ ಕವೆಗೋಲಿನಂದದಲಿ ತೋರು ಈ ನನ್ನ ಪುಟ್ಟ ಗುಡಿಯೊಳಗೆ ನೀ ನುಗ್ಗು ತೂಗಿರುವ ಪಟವನ್ನು ತೊನೆದಾಡಿ ಬಿಸುಡು ಪುಟಗಳನು ಗದ್ದಲದಿ ಮಗುಚಿ ಮುಂದೋಡು ಕಬ್ಬಗಳ ನೆಲಕೆಲ್ಲ ಹರಡಿ ಚೆಲ್ಲಾಡು ಕಬ್ಬಿಗನ ಮನೆಯಿಂದ ದಬ್ಬಿ ಹೊರದೂಡು The Original by Robert Frost: To The Thawing Wind Come with rain, O loud Southwester! Bring the singer, bring the nester; Give the buried flower a dream; Make the settled snow-bank steam; Find the brown beneath the white; But whate’er you do to-night, Bathe my window, make it flow, Melt it as the ice will go; Melt the glass and leave the sticks Like a hermit’s crucifix; Burst into my narrow sta...

Kannada Translation of Robert Frost's "Gathering Leaves"

An attempt at translation of Robert Frost's poem "Gathering Leaves" to Kannada: ತರಗು ಕೆದಕಲೆಲೆಗಳ ಸನಿಕೆ ಮಿಳ್ಳೆಗದು ಸಮವು, ತರಗು ತುಂಬಿದ ಮೂಟೆ ಪುಗ್ಗೆಯೊಲು ತೆಳುವು. ಮರ್ಮರವ ನಾನೆಸಗಿ ದಿನವಿಡೀ ಕೊರೆವೆ, ಬೆದರಿ ಸಾಗುವ ಕಡವೆ - ಮೊಲಗಳೊಲು ರವವೆ. ನಾ ನೆರೆದ ಗುಡ್ಡೆಗಳು ಅಪ್ಪುಗೆಯ ನುಸುಳಿ, ಬಾಹುಗಳ ಮೇಲಿಳಿದು ರಾಚುವುವು ಮೊಗಕೆ. ಅಳೆಯುವೆನು ಸುರಿಯುವೆನು ನಾ ಮತ್ತೆ ಮತ್ತೆ, ಕಾವಣವು ತುಂಬಿರಲು ಮುಂದೇನು ಮತ್ತೆ? ತೂಕವೇನತಿಯಿಲ್ಲ ನೆಲಕೆ ಬಿದ್ದಿರಲು, ಬಣ್ಣವೂ ಹೆಚ್ಚಿಲ್ಲ ಮಾಸಿಹುದು ತರಗು. ಬಳಕೆಯಿರದಿರಲೇನು? ಬೆಳೆಯೊಂದು ಬೆಳೆಯೇ! ಯಾರು ಹೇಳಿದರೇನು? ಸುಗ್ಗಿಗೇಂ ಕೊನೆಯೇ? The original poem by Frost: Gathering Leaves Spades take up leaves No better than spoons, And bags full of leaves Are light as balloons. I make a great noise Of rustling all day Like rabbit and deer Running away. But the mountains I raise Elude my embrace, Flowing over my arms And into my face. I may load and unload Again and again Till I fill the whole shed, And what have I then? Next to nothing for weight, And since they grew duller ...