An attempt at translating Robert Frost's "To The Thawing Wind" to Kannada:
ಬೀಸುವ ಬಿಸಿಗಾಳಿಗೆ...
ನೈಋತ್ಯ ಗಾಳಿಯೇ! ಮಳೆಯೊಡನೆ ಬೀಸು
ಹಾಡುಹಕ್ಕಿಯ ಗೂಡು ಕಟ್ಟೆನುತ ಕರೆಸು
ಹುದುಗಿರುವ ಹೂದಳಕೆ ಕನಸೊಂದ ನೀಡು
ಹಳಿ ಕಟ್ಟಿರುವ ಹಿಮವ ಹಬೆಯಾಗಿ ತೀಡು
ಬಿಳುಪಿನಾಳದೊಳಿರುವ ಮಣ್ಣ ನೀ ಹುಡುಕು
ಈ ರಾತ್ರಿ ನಿನ್ನ ಮನ ಬಂದಂತೆ ಮಾಡು
ಬೆಳಕಿಂಡಿಯನು ಮಾತ್ರ ತೋಯಿಸುತ ಹರಿಸು
ಜಿನುಗಿಸುತ ಗಡ್ಡೆಯನು ನೀರಾಗಿ ಸುರಿಸು
ಕರಗಿಸುತ ಗಾಜುಗಳ ಕಣೆಗಳನ್ನುಳಿಸು
ಸಾಧುವಿನ ಕವೆಗೋಲಿನಂದದಲಿ ತೋರು
ಈ ನನ್ನ ಪುಟ್ಟ ಗುಡಿಯೊಳಗೆ ನೀ ನುಗ್ಗು
ತೂಗಿರುವ ಪಟವನ್ನು ತೊನೆದಾಡಿ ಬಿಸುಡು
ಪುಟಗಳನು ಗದ್ದಲದಿ ಮಗುಚಿ ಮುಂದೋಡು
ಕಬ್ಬಗಳ ನೆಲಕೆಲ್ಲ ಹರಡಿ ಚೆಲ್ಲಾಡು
ಕಬ್ಬಿಗನ ಮನೆಯಿಂದ ದಬ್ಬಿ ಹೊರದೂಡು
The Original by Robert Frost:
To The Thawing Wind
Come with rain, O loud Southwester!
Bring the singer, bring the nester;
Give the buried flower a dream;
Make the settled snow-bank steam;
Find the brown beneath the white;
But whate’er you do to-night,
Bathe my window, make it flow,
Melt it as the ice will go;
Melt the glass and leave the sticks
Like a hermit’s crucifix;
Burst into my narrow stall;
Swing the picture on the wall;
Run the rattling pages o’er;
Scatter poems on the floor;
Turn the poet out of door.
ಬೀಸುವ ಬಿಸಿಗಾಳಿಗೆ...
ನೈಋತ್ಯ ಗಾಳಿಯೇ! ಮಳೆಯೊಡನೆ ಬೀಸು
ಹಾಡುಹಕ್ಕಿಯ ಗೂಡು ಕಟ್ಟೆನುತ ಕರೆಸು
ಹುದುಗಿರುವ ಹೂದಳಕೆ ಕನಸೊಂದ ನೀಡು
ಹಳಿ ಕಟ್ಟಿರುವ ಹಿಮವ ಹಬೆಯಾಗಿ ತೀಡು
ಬಿಳುಪಿನಾಳದೊಳಿರುವ ಮಣ್ಣ ನೀ ಹುಡುಕು
ಈ ರಾತ್ರಿ ನಿನ್ನ ಮನ ಬಂದಂತೆ ಮಾಡು
ಬೆಳಕಿಂಡಿಯನು ಮಾತ್ರ ತೋಯಿಸುತ ಹರಿಸು
ಜಿನುಗಿಸುತ ಗಡ್ಡೆಯನು ನೀರಾಗಿ ಸುರಿಸು
ಕರಗಿಸುತ ಗಾಜುಗಳ ಕಣೆಗಳನ್ನುಳಿಸು
ಸಾಧುವಿನ ಕವೆಗೋಲಿನಂದದಲಿ ತೋರು
ಈ ನನ್ನ ಪುಟ್ಟ ಗುಡಿಯೊಳಗೆ ನೀ ನುಗ್ಗು
ತೂಗಿರುವ ಪಟವನ್ನು ತೊನೆದಾಡಿ ಬಿಸುಡು
ಪುಟಗಳನು ಗದ್ದಲದಿ ಮಗುಚಿ ಮುಂದೋಡು
ಕಬ್ಬಗಳ ನೆಲಕೆಲ್ಲ ಹರಡಿ ಚೆಲ್ಲಾಡು
ಕಬ್ಬಿಗನ ಮನೆಯಿಂದ ದಬ್ಬಿ ಹೊರದೂಡು
The Original by Robert Frost:
To The Thawing Wind
Come with rain, O loud Southwester!
Bring the singer, bring the nester;
Give the buried flower a dream;
Make the settled snow-bank steam;
Find the brown beneath the white;
But whate’er you do to-night,
Bathe my window, make it flow,
Melt it as the ice will go;
Melt the glass and leave the sticks
Like a hermit’s crucifix;
Burst into my narrow stall;
Swing the picture on the wall;
Run the rattling pages o’er;
Scatter poems on the floor;
Turn the poet out of door.
Comments