Kannada translation of Robert Frost's "The Road Not Taken"

 

Kannada translation attempt of Robert Frost's famous poem "The Road Not Taken":

ನಡೆಯದ ಹಾದಿ

ಕವಲೊಡೆಯಿತೆರಡಾಗಿ ಕಾನನದ ಹಾದಿ,
ಅವುಗಳೆರಡಿಹವು; ನಾ ದಾರಿಯೊಳಗೊಂಟಿ.
ಸವೆಸಲಾರೆನು ನಾನು ಒಮ್ಮೆಗೆರಡೆನುತ,
ಎವೆಯಿಡದೆ ನೋಡಿದೆನು ಒಂದನನವರತ,
ಕವಿದು ಪೊದೆಯೊಳಗದುವೆ ಮರೆಯಾಗುವನಕ.

ಎರಡನೆಯ ಹಾದಿಯದೆ ಸರಿಯೆನಿಸಿ ಹಿಡಿದೆ,
ಚರಿಸೆನ್ನ ಮೇಲೆನುತಲದು ಕರೆಯುತಿತ್ತು.
ಹೊರವಾಗಿ ಹುಲ್ಲಿತ್ತು, ಸವೆತ ಬಯಸಿತ್ತು.
ತಿರುಗಾಡಿ ತುಸು ದೂರ ನಡೆದಂತೆ ತಿಳಿದೆ,
ಸರಿಸಮದ ಸವಕಳಿಯೆ ಎರಡರೊಳಗಿತ್ತು.

ಆ ದಿನದ ಬೆಳಗವುಗಳೊಂದರಂತೊಂದು
ಮೂಡಿದವು, ತರಗುಗಳ ತುಳಿದ ಕಪ್ಪಿರದೆ.
ಆದಿಯದನಿನ್ನೊಂದು ದಿನಕುಳಿಸಿ ಹೊರಟೆ.
ಹಾದಿ ಹಾದಿಗೆ ಹಾದಿ ತೋರುವುದನರಿತು,
ಪಾದಗಳು ಹಿಂದಿರುಗಿ ಬರುವ ನಚ್ಚಿರದೆ.

ನಿಡುಸುಯ್ದು ಹೇಳುವೆನು ಮುಂದೆ ನಾನಿಂತು -
ಕಡೆಯಲ್ಲಿ, ಹಲವಾರು ವರುಷಗಳ ಕಳೆದು,
ಒಡೆದು ಕವಲಾಗಿರಲು ಪಥವೆರಡು ವನದಿ,
ಕಡಿಮೆ ಬಳಸಿದ ಪಥವ ತುಳಿದು ನಾ ನಡೆದೆ;
ಪಡೆದೆ ನಾ, ಬೇರೆಯದೆ ಫಲಗಳನು ಪಡೆದೆ.


The original poem:

The Road Not Taken

Two roads diverged in a yellow wood,
And sorry I could not travel both
And be one traveler, long I stood
And looked down one as far as I could
To where it bent in the undergrowth;

Then took the other, as just as fair,
And having perhaps the better claim,
Because it was grassy and wanted wear;
Though as for that the passing there
Had worn them really about the same,

And both that morning equally lay
In leaves no step had trodden black.
Oh, I kept the first for another day!
Yet knowing how way leads on to way,
I doubted if I should ever come back.

I shall be telling this with a sigh
Somewhere ages and ages hence:
Two roads diverged in a wood, and I—
I took the one less traveled by,
And that has made all the difference.

Comments