Posts

Showing posts from May, 2020

ಹೀಗೊಂದು ಆಲೋಚನೆ

ನೆನ್ನೆ ಸಂಜೆ ಒಂದಷ್ಟು ಹೊತ್ತು ವಿದ್ಯುತ್ ಅಡಚಣೆಯುಂಟಾದಾಗ ಮನೆಯಿಂದ ಹೊರಬಂದು ನೋಡಿದೆ. ಸಲ್ಪ ಹೆಚ್ಚೇ ಕತ್ತಲು ಕವಿದ ಹಾಗಿತ್ತು. ಲಾಕ್‌ಡೌನ್‌ನಿಂದಾಗಿ ರಸ್ತೆಯಲ್ಲಿ ಹೆಚ್ಚು ವಾಹನಗಳೂ ಇರಲಿಲ್ಲ; ಒಂದೆರಡು ಗಂಟೆಗಳ ಮುಂಚೆ ಬಂದ ಭಾರೀ ಮಳೆಯಿಂದಾಗಿ ಜನರೂ ಮನೆ ಸೇರಿದ್ದರೇನೋ, ಕಾಲುದಾರಿಗಳೂ ನಿರ್ಜನವಾಗಿದ್ದವು. ಸುತ್ತಮುತ್ತಲಿನ ಮನೆಯ ಜನರೂ ತಮ್ಮ ತಮ್ಮ ಮನೆಯೊಳಗೆ ಸೇರಿದ್ದರು. ಈ ಬೆಳಕು, ಶಬ್ದ ಎರಡೂ ಇಲ್ಲದ ವಾತಾವರಣ ಬೆಂಗಳೂರಿನ ಮಟ್ಟಕ್ಕೆ ಅಪರೂಪವೇ. ಸುಮಾರು ಒಂದು ೧೫ - ೨೦ ನಿಮಿಷಗಳಷ್ಟು ಕಾಲ - ವಿದ್ಯುಚ್ಛಕ್ತಿ ಪೂರೈಕೆ ಮತ್ತೆ ಆರಂಭವಾಗುವುದರೊಳಗೆ - ನಮ್ಮ ಮನೆಯ ಆವರಣದಿಂದಲೇ ಈ ಪ್ರಶಾಂತ ಪರಿಸರದಲ್ಲಿ ನಿಂತು ಹೊರನೋಡುತ್ತಿದ್ದಾಗ ಮನಸ್ಸಿನಲ್ಲಿ ಒಂದಷ್ಟು ವಿಚಾರಗಳು, ನೆನಪುಗಳು ಮಿಂಚಿ ಹೋದವು.   ಚಿಕ್ಕಂದಿನಲ್ಲಿ ಸಣ್ಣ ಊರೊಂದರಲ್ಲಿ ವಿದ್ಯಾರ್ಥಿಯಾಗಿ ಬೆಳೆಯುತ್ತಿದ್ದಾಗ ಇಂತಹ ವಿದ್ಯುತ್ ಅಡಚಣೆಗಳು ಸಾಮಾನ್ಯವಾಗಿತ್ತು. ಆಗೆಲ್ಲಾ ಚಾರ್ಜ್‌ಲೈಟುಗಳಾಗಲೀ ಬ್ಯಾಟರಿ-ಇನ್‌ವರ್ಟರ್‌ಗಳಾಗಲೀ ಇಷ್ಟೊಂದು ಹಾಸುಹೊಕ್ಕಾಗಿರಲಿಲ್ಲ. ಮಧ್ಯಮವರ್ಗದ ಜನರಿಗೆ ಅವುಗಳನ್ನು ಕೊಂಡುತಂದು ಬಳಸುವ ಶಕ್ತಿಯೂ ಇರಲಿಲ್ಲವೆನ್ನೋಣ. ಅಷ್ಟೇ ಅಲ್ಲದೆ ಈ ವಿದ್ಯುತ್ ಅಡಚಣೆಗಳನ್ನೂ ಜೀವನದ ಒಂದು ಭಾಗವನ್ನಾಗಿ ಸ್ವೀಕರಿಸಿಬಿಟ್ಟಿದ್ದರು ಜನ. ಕೆಲವೊಮ್ಮೆ ಸಂಜೆಯ ಹೊತ್ತು ಗಂಟೆಗಟ್ಟಲೆ ವಿದ್ಯುತ್ ಇರುತ್ತಿರಲಿಲ್ಲ. ಆಗ ಒಮ್ಮೊಮ್ಮೆ ಸಂಬಂಧಪಟ್ಟವರನ್ನ...

ಕುಟಿಲ ಶಿಖಾಮಣಿಗಳು

Image
Here's an attempt at translating another of Bill Watterson 's poems that appeared in Calvin and Hobbes, where Calvin hilariously thinks that his parents, alien beings in disguise according to him, are hatching a sinister plan to enslave him. The translation follows a maatraa chhandas of 3/3/3/3/3/3/4: ಕುಟಿಲ ಶಿಖಾಮಣಿಗಳು ಇವರೆ ನನ್ನ ಅಪ್ಪ ಅಮ್ಮ, ಸಹಜವಿಲ್ಲ ತೋರಿಕೆ ಇವರ ಮಂಕು ಕವಿದ ರೂಪ ಬಹಳ ಕುಟಿಲ ಹವಣಿಕೆ ಇಂತು ನಮ್ಮ ಪಾಲಿಸುವರ ತಂತ್ರ ನನಗೆ ತಿಳಿದಿದೆ, ಅಂತರಿಕ್ಷದಾಚೆಯಿಂದ ಬಂದರಿವರು ಪೊಡವಿಗೆ! ದೊಡ್ಡ ಗಗನನೌಕೆಗಳಲಿ ಬಂದು ಭುವಿಯೊಳಿಳಿದರು ದೊಡ್ಡವರಂತಿರುತ ನಮ್ಮ-ನಿಮ್ಮೊಳೆಲ್ಲ ಬೆರೆತರು. ಹೆತ್ತವರೆಂದೆನಿಸಿಕೊಂಡು ಸುಳ್ಳೆ ನನಗೆ ನುಡಿವರು ಗೊತ್ತು ನಿಜವು, ನನ್ನ ಹರೆಯವನ್ನು ಜೀತ ಪಡೆವರು! ಬಂದು ರವಿಯು ಇರುಳ ನೀಗಿ ಬೆಳಕು ತಂದ ಚಣದಲೆ ತಂದೆ ತಾಯಿ ಭುವಿಯ ಜನರ ಸೋಗು ಹಾಕಿಬಿಡುವರು ತಕ್ಕುದಲ್ಲ ಅವರ ಮೊಗದ ಮುಸುಕು ಎಂಬುದರಿತಿಹೆ ಸುಕ್ಕುಗಟ್ಟಿ ಜೋತುಬಿದ್ದ ಮೊಗದ ನೆರಿಗೆ ಸಡಿಲವೆ ಗುರುತೆಯಿರುವ ಭುವಿಯ ಮೇಲೆ ಚುರುಕ ಮರೆತು ಬಾಳ್ವರು ಕರೆವರೆನ್ನ ಗದರಿಸುತಲಿ ಓಡಬೇಡವೆನುವರು ದಿನಚರಿಗಳ ದಾಸರವರು ಕಾಲದೊಡನೆ ನಡೆವರು ಕನಸ ಮರೆತು ಯಂತ್ರದಂತೆ ವರ್ಷವೆಲ್ಲ ದುಡಿವರು ದೂರದರ್ಶಿ ಕುರುಕು ತಿ...

Calvin as Shiva

Image
ಹೆಸರು ಮಾಡಿಹ ಜನರು ಕಸಿ ಚಿಕಿತ್ಸೆಗೆ ಬಾಗಿ ಹುಸಿನಗುತ ಬಾಳುತಿರೆ ತಾಯೆ ಹೇಳೆನಗೆ ಸೊಸೆ ಭವಾನಿಯ ಹುಲಿಯ ಜೊತೆಯಲಾಡುವ ನಾನು ಬೆಸೆದು ಕಣ್ಣಿನ್ನೊಂದ ಶಿವನಾಗಲೇ? ಹೆಸರು ಮಾಡಿಹ ಜನರು ಕಸಿ ಚಿಕಿತ್ಸೆಗೆ ಬಾಗಿ ಹುಸಿನಗುತ ಬಾಳುತಿರೆ ತಾಯೆ ಹೇಳೆನಗೆ ನೊಸಲಿನೊಳು ಮೂರನೆಯ ಕಣ್ಣ ಬೆಸೆಯಿಸಿ ನಾನು ರಸಿಕ ಕಾಮನ ಸುಟ್ಟ ಶಿವನಾಗಲೇ?

Invictus : ಅಜೇಯ

Image
An attempt at Kannada translation of the famous poem Invictus by William Ernest Henley: ಅಜೇಯ   ಇಂದೆನ್ನನಾವರಿಪ ಕಾರ್ಗತ್ತಲಿರುಳಿನಲಿ ಅಂಧಕಾರವೆ ಮೊದಲಿನಿಂ ಕೊನೆಯವರೆಗೆ, ವಂದಿಸುವೆ ಕಾಣದೆಯೆ ಕರುಣಿಸಿಹ ದೈವಕ್ಕೆ ಸಂದಿರಲು ಸೋಲರಿಯದಾತ್ಮವದು ನನಗೆ   ಕತ್ತು ಹಿಸುಕುವ ಸನ್ನಿವೇಶದೊಳು ನಾನಿರಲು ಅತ್ತಿಲ್ಲ, ಕರೆದಿಲ್ಲ, ಬೆದರಿಲ್ಲ ಸೆಲೆಯು ಮತ್ತೆ ಮತ್ತೆಂದೆನ್ನ ಘಟನೆಗಳು ಸದೆಬಡಿಯೆ ನೆತ್ತರಾಗಿರಬಹುದು ಬಾಗದಿದು ತಲೆಯು   ಕ್ರೋಧದಿಂ ಸಿಟ್ಟಿನಿಂ ಕಂಬನಿಗಳಿಂದಾಚೆ ಕಾದಿಹುದು ಮರೆಯಲ್ಲಿ ಭೀತಿಯ ಜಗತ್ತು! ಕೇಡು ಬಯಸುವ ಹಲವು ವರ್ಷಗಳೆ ಸಾಗಿರಲಿ, ಬಾಧಿಸವು, ನನಗಿಹುದು ಕೆಚ್ಚೆದೆಯ ಗತ್ತು!   ಎನಿತು ಕಷ್ಟವೆ ಇರಲಿ ಸಗ್ಗದಗಸೆಯ ಪಯಣ ಹೊಣೆ ಹೊರಿಸಿ ಪಾಪಗಳ ದಂಡನೆಯೆ ಇರಲಿ, ಧಣಿಯು ನಾನೇ ನನ್ನ ಹಣೆಯ ಬರಹಕ್ಕೆಲ್ಲ, ಮಣಿಯದೀ ಚೇತನಕೆ ನಾನೆ ಯಜಮಾನ!   The original: Invictus Out of the night that covers me,       Black as the pit from pole to pole, I thank whatever gods may be       For my unconquerable soul. In the fell clutch of circumstance       I have not winced nor cried alou...

ಭೂತಾನದ ಹಾಡು

Image
"ಕ್ಯಾಲ್ವಿನ್ ಅಂಡ್ ಹಾಬ್ಸ್" ಖ್ಯಾತಿಯ ಬಿಲ್ ವಾಟರ್‌ಸನ್ ಅವರ "ದಿ ಯೂಕಾನ್ ಸಾಂಗ್" ಪದ್ಯದ ಕನ್ನಡಾನುವಾದ: A quick Kannada translation of Bill Watterson 's funny poem on "Calvin and Hobbes" ,  "The Yukon Song" ಭೂತಾನದ ಹಾಡು ತಂದಿದೆ ನೋಡಿರಿ ನನ್ನಯ ಹುಲಿಮರಿ ಹಿಮದೊಳು ಜಾರುವ ಬಂಡಿಯನು, ತಿಂಡಿಯ ಪೊಟ್ಟಣ ನಾ ಕಟ್ಟಿರುವೆನು ಮರಳದ ಪಯಣಕೆ ಹೊರಟಿಹೆವು! ತೊರೆದಿಹೆವಿಲ್ಲಿಯವರೆಗಿನ ಬಾಳನು, ವಿದಾಯ ಅಮ್ಮಗೆ ಅಪ್ಪನಿಗೆ! ರೋಸಿರುವೆವು ನಿಮ್ಮಾಜ್ಞೆಯ ಪಾಲಿಸಿ ಮುಗಿದಿಹುದಿಲ್ಲಿಗೆ ನಿಮ್ಮ ಹಗೆ! ವರುಷದೊಳೆಲ್ಲಾ ಹಿಮ ಸುರಿವಲ್ಲಿಗೆ ಸಾಗಿ ಬದುಕ ನಾವ್ ಸವಿಯುವೆವು, ಕೋಣೆಯ ಶುಚಿಯಾಗಿಸು ನೀನೆನ್ನುವ ಬೈಗುಳ ಕೇಳದೆ ಬದುಕುವೆವು... ಭೂತಾನವೆ ನಮಗಿರಿಸಿಹ ತಾಣವು! ಅಲ್ಲಿಯೆ ಜೀವನ ಮಾಡುವೆವು. ಕಿರುಚುತ ಶಪಿಸುತ ಅದರೆತ್ತರದಲಿ ಮನಸಿಗೆ ಬಂದಂತಲೆಯುವೆವು! ಶಾಲೆಗೆ ಹೋಗುವ ಕಾಟವೆ ತಪ್ಪಿತು, ನಮ್ಮನು ಯಾರೂ ಪಳಗಿಸರು. ಭಯವನು ತರಿಸುವ ಶಿಕ್ಷಕರಾರೂ ಲೆಕ್ಕವ ಕಲಿಸದೆ ಕೊರಗುವರು! ಊಟದ ತಟ್ಟೆಯ ಅಂಟುಗಳೆಲ್ಲವ ತೊಳೆಯುವ ಗೋಜನು ಮರೆಯುವೆವು, ಮನಸಿಗೆ ಬಂದಂತಗಿವೆವು ತಿನಿಸನು ಸಿಕ್ಕಿದ ಚಮಚವ ಬಳಸುವೆವು! ಹಿಮನಾಯಿಗಳೇ ನಮ್ಮಯ ಗೆಳೆಯರು ಚಂದ್ರನ ನೋಡುತ ಊಳುವೆವು, ನಿದ್...

Kannada translation of "Worth While" by Ella Wheeler Wilcox

An attempt at Kannada translation of the poem "Worth While" by Ella Wheeler Wilcox : This was a "collaboration project" between Dr. Chandana Sri and me, and it is something that gave a lot of satisfaction to both of us when we finished it. Significant amount of the work was by Chandana, including the choice of the meter, so most of the credit goes to her! We are just beginners here and there could be scope for improvements, but here's the outcome of first such "collaborative" verslation attempt. Hope this is the first of many! ಅರ್ಹತೆ ನಲಿವುದು ಸುಲಭವೆ ಜೀವನ ಸಾಗಿರೆ ಸುಲಲಿತ ಗಾನದ ಗತಿಯಲ್ಲಿ, ಸಲುವುದು ಮೆಚ್ಚುಗೆ ನಸುನಗುವೆದೆಯಿರೆ ಬಲುಕಾರ್ಪಣ್ಯದ ನೆಲೆಯಲ್ಲಿ. ಎದೆಗಾರಿಕೆಯಂ ಪರಿಕಿಪುದವಘಡ ಒದಗುವುದದು ಸರಿಕಾಲದಲಿ, ಕಂಬನಿಗಳ ನಡುನಡುವಿನ ಬೆಳ್ನಗೆ ಕೊಂಬುದು ಪೊಗಳಿಕೆ ಜಗದಲ್ಲಿ. ತಳೆವುದು ಸುಲಭ ವಿವೇಕಿಯ ವೇಷವ ಸೆಳೆತವು ಹಾದಿಯ ಬಿಡಿಸದಿರೆ, ಒಳಗೋ ಹೊರಗೋ ಪಾಪದ ಮರ್ಮರ ತಿಳಿವಿನ ದಿಕ್ಕನು ಕೆಡಿಸದಿರೆ. ಬೆಲೆಯದು ಸಲ್ಲುವುದೆಂತು ವಿವೇಕಕೆ ಕುಲುಮೆಯ ಬೇಗೆಯು ತಟ್ಟದಿರೆ? ಜಯಿಪುದು ಲೋಕದ ಮನ್ನಣೆಯನು ಬಾ...