Invictus : ಅಜೇಯ

An attempt at Kannada translation of the famous poem Invictus by William Ernest Henley:


ಅಜೇಯ
 
ಇಂದೆನ್ನನಾವರಿಪ ಕಾರ್ಗತ್ತಲಿರುಳಿನಲಿ
ಅಂಧಕಾರವೆ ಮೊದಲಿನಿಂ ಕೊನೆಯವರೆಗೆ,
ವಂದಿಸುವೆ ಕಾಣದೆಯೆ ಕರುಣಿಸಿಹ ದೈವಕ್ಕೆ
ಸಂದಿರಲು ಸೋಲರಿಯದಾತ್ಮವದು ನನಗೆ
 
ಕತ್ತು ಹಿಸುಕುವ ಸನ್ನಿವೇಶದೊಳು ನಾನಿರಲು
ಅತ್ತಿಲ್ಲ, ಕರೆದಿಲ್ಲ, ಬೆದರಿಲ್ಲ ಸೆಲೆಯು
ಮತ್ತೆ ಮತ್ತೆಂದೆನ್ನ ಘಟನೆಗಳು ಸದೆಬಡಿಯೆ
ನೆತ್ತರಾಗಿರಬಹುದು ಬಾಗದಿದು ತಲೆಯು
 
ಕ್ರೋಧದಿಂ ಸಿಟ್ಟಿನಿಂ ಕಂಬನಿಗಳಿಂದಾಚೆ
ಕಾದಿಹುದು ಮರೆಯಲ್ಲಿ ಭೀತಿಯ ಜಗತ್ತು!
ಕೇಡು ಬಯಸುವ ಹಲವು ವರ್ಷಗಳೆ ಸಾಗಿರಲಿ,
ಬಾಧಿಸವು, ನನಗಿಹುದು ಕೆಚ್ಚೆದೆಯ ಗತ್ತು!
 
ಎನಿತು ಕಷ್ಟವೆ ಇರಲಿ ಸಗ್ಗದಗಸೆಯ ಪಯಣ
ಹೊಣೆ ಹೊರಿಸಿ ಪಾಪಗಳ ದಂಡನೆಯೆ ಇರಲಿ,
ಧಣಿಯು ನಾನೇ ನನ್ನ ಹಣೆಯ ಬರಹಕ್ಕೆಲ್ಲ,
ಮಣಿಯದೀ ಚೇತನಕೆ ನಾನೆ ಯಜಮಾನ!

 

The original:

Invictus

Out of the night that covers me,
      Black as the pit from pole to pole,
I thank whatever gods may be
      For my unconquerable soul.

In the fell clutch of circumstance
      I have not winced nor cried aloud.
Under the bludgeonings of chance
      My head is bloody, but unbowed.

Beyond this place of wrath and tears
      Looms but the Horror of the shade,
And yet the menace of the years
      Finds and shall find me unafraid.

It matters not how strait the gate,
      How charged with punishments the scroll,
I am the master of my fate,
      I am the captain of my soul.

Comments