Posts

Showing posts from September, 2018

Flowers and Patterns - Banashankari Edition

Image
Some colourful flowers, greenery and a parrot - all captured last month in and around Banashankari area, Bengaluru...

ಶಿವನ ಸ್ತುತಿ - ಕವನ / ಕೃತಿ - Poem on Shiva

Image
ಕಳೆದೆರಡು ದಿನಗಳಲ್ಲಿ ಸಮಯ ದೊರೆತಾಗ ಯೋಚಿಸುತ್ತಾ ಶಿವನ ಸ್ತುತಿಯಾಗಿ ಬರೆದ ಕವನ - ಸಂಗೀತ ಕೃತಿಯ ರೂಪದಲ್ಲಿ ಈ ಕೆಳಗೆ ಹಂಚಿಕೊಂಡಿರುತ್ತೇನೆ... ಛಂದಸ್ಸು: 4/4/4/4 4/4/4/1 ಗುಡಿಯೊಂದಿಹುದಲ ಮದನಹರನಿಗೆಂ - ದಡವಿಗಳಾಚೆಗೆ ಬಡಗಣದೆ ।। ಪ ॥ ಕಡವಸದುಡುಪಿನ ಹೆಡೆಹಾವೊಡವೆಯ ಅಡವಿಯ ವಾಸದ ಮೃಡಹರಗೆ ॥ ಅ ॥ ಪೊಡವಿಯೊಳೋಡುತ ಮೂಡುವ ಗಂಗೆಯ ತಡೆದು ಜಡೆಯೊಳಗೆ ಮುಡಿದವಗೆ ಕಡಲಿನಲೆಗಳನೆ ತಡಿಗೆಡತಾಕಿಪ ಉಡುರಾಜನ ಮುಡಿಗೇರಿಪಗೆ ॥ ೧ ॥ ಕುಡಿದೆಲ್ಲ ಗರಳ ಪಿಡಿದುಮೆಯ ಕರವ ಪಡಿ ಬೇಡುತ ವರ ಕೊಡುವವಗೆ ಬಡಿದು ಡಮರು ಜಬಗಡದಶವೆನಿಸುತ ನುಡಿಯ ನಡೆಗಳನು ಹಡೆದವಗೆ ॥ ೨ ॥ ಗುಡುಗು ಸಿಡಿಲು ಕರಿಮೋಡದ ನೆರಳಿನ ಕಡುಕಾರ್ಪಣ್ಯವ ತೊಡೆವವಗೆ ಸುಡುಗಣ್‌ ಬಿಡುವಗೆ ಸುಜನರ ಪೊರೆವಗೆ ಜಡತೆ ಕೊಡಹಿ ತಾ ಕುಣಿವವಗೆ ॥ ೩ ॥ ಸಡಗರದಿಂದಲಿ ಸೊಡರನು ಬೆಳಗುತ ಮೃಡನ ನೆನೆವುದಿನ್ನಡಿಗಡಿಗೆ ಬಿಡುಗಡೆ ಭವದಿಂ ಪಡಿಸೆನ್ನುತಲವ - ನಡಿಗೆರಗುವುದದೆ ಬೆಳವಣಿಗೆ ॥ ೪ ॥ Image credits: Painting by  @ santalum_aurum  on Twitter (doctor, poet, painter, knowledgeable in Sanskrit,...