Posts

Showing posts from 2019

Kannada translation of Robert Frost's "Devotion"

Image
An attempt at Kannada Translation of Robert Frost's poem Devotion: ಅನುರಾಗ ಪುನರಾವರ್ತನೆಯನ್ನೆಣಿಸುತ್ತಲನವರತ ತಡಿಯ ಕೋರೆಗೆ ನೆಲೆ ನಿಂತು ಹಿಡಿದಿಡುತ ಕಡಲಿನೊಡಲಿಗೆ ಬೆಸೆದ ತೀರದಂತಿರುವಾಗ ಮನಸ್ಸೆಣಿಸಲಾರದು ಇದನುಳಿದ ಅನುರಾಗ The original: " Devoton" by Robert Frost: The heart can think of no devotion Greater than being shore to the ocean-- Holding the curve of one position, Counting an endless repetition.

Kannada Translation of the poem "Cerebral Palsy"

An attempt at translating Dr. Chandana Sri 's poem "Cerebral Palsy" to Kannada, one of the most beautiful and moving poems I have come across in recent times. The original is below the translation, and I would be very surprised if the last four lines of the original in particular did not move many people to tears or make them contemplate in general. Dr. Chandana says she wrote this poem about 4 years ago, when a kid with cerebral palsy had come in with pneumonia for treatment. ಸೆರೆಬ್ರಲ್ ಪಾಲ್ಸಿ ಮರಮರಳಿ ನನ್ನತ್ತ ನೀ ನೋಡಿದಾಗೆಲ್ಲ ಮರೆಯಾಗಲಿನ್ನೆಂದು ಬಯಸಿಲ್ಲವೇ? ನಿನ್ನ ಪಾಲಿಗೆ ನಾನು ಮತ್ತೆ ಬೇರಿನ್ನೇನು? ಎಡಬಿಡದೆ ಕಾಡುತಿಹ ದಿಗಿಲಲ್ಲವೇ? ಬಲಹೀನನಿವ ತನ್ನ ಅಡಗಿನುಂಡೆಯೆ ಕಾಣು ಮೂಕನಿವ ಹೆಡ್ಡನಿವನೆನಿಸಿಲ್ಲವೇ? ಮರುಕವಿಲ್ಲದ ವಿಧಿಯು ತಿರುಚಿರಲು ನನ್ನಿರವ ಬೆಲೆಯೇನು ಇವನದೆಂದೆನಿಸಿಲ್ಲವೇ? ನನ್ನೆಡೆಗೆ ನೋಡಿ ನೀ ನಗುವೆಯಾ, ಈ ನನ್ನ ನವಿರಿರದ ನಡೆಗಳನು ಅಣಕಿಸುವೆಯಾ? ನನ್ನೊಳಗೆ ಉರಿಯುತಿಹ ಚೈತನ್ಯದಗ್ನಿಯನು ನೋಡುವಾಸೆಗೂ ನೆಲೆಯ ಕೊಡದಾದೆಯಾ? ನನ್ನಿಂದ ನೀ ಪಡೆದ ನಲಿವುಗಳ ಸಮನಾದ ಒಲವ ನೀ ನನಗೆಂದು ಕೊಡಮಾಡೆಯಾ? ಹೇಗಿರಲುಬಹುದಿತ್ತು ...

Kannada Translation of "Wounded Healers"

Image
Translation of Dr. Chandana Sri's poem "Wounded Healers" in Kannada. A tribute to all the doctors out there. ಗುಣಪಡಿಸುವ ಗಾಯಾಳುಗಳು  ತೊಡಕಿನದು ಕಡಿದಿನದು ನಾವಾರಿಸಿಹ ದಾರಿ ನಡಿಗೆಯಿದೆ ಬಲುದೂರ ಕಷ್ಟಸಾಧ್ಯ । ಒಡನಿರುವ ಕಣಿವೆಯೋ, ಆಳವಿದೆ ಘೋರವಿದೆ ಗಡಸಿನಾಳುಗಳಿಗೂ ವಿಷಮಭೇದ್ಯ ॥  ಒರೆಗೆ ನಮ್ಮನು ಹಚ್ಚಿ ದಿನದಿನವು ಪರಿಕಿಸುತ ಒರೆಯುತೆಮಗೂಳಿಗದ ಹೆಣಗಾಟವ ।  ಕೊರೆಯಿಲ್ಲದಂತೆಮಗೆ ತಾಳ್ಮೆಯಂ ಕಲಿಸುವರು ಪೊರೆಯೆ ನಾವ್ ಬೇನೆಯಿಂ ಸೊರಗಿರ್ಪರ ॥ ಕಲಿಸಿಹರು ಬಾಳುವುದ ಬಾಳಿಸಲ್ಕೆನುತಲೇ ಬೆಳೆಸುತ್ತಲುಕ್ಕಿನೆದೆ ನರಗಳನ್ನು । ನೆಲೆಗೊಳಿಸಿ ಕೊಡುವುದನು, ಮರೆಸಿಹರು ಪಡೆವುದನು ಕಲೆತು ನಾವ್ ಸಂತೈಸಿ ಮಾಯಿಸಿರಲು ॥ ಹದವರಿತ ಕಲೆಯಿಂದ ನುರಿತ ಕುಶಲತೆಯಿಂದ ಕದನವೊಂದನು ನಾವು ಕಾಯಬೇಕು । ಎದೆಯನುಬ್ಬಿಸಿ ಮತ್ತೆ ಗುಂಡಿಗೆಯ ಹುರಿಗಟ್ಟಿ ಬೆದರಿಸುವ ಹುರುಡ ನಾವರಸಬೇಕು ॥ ಸಮರದಿಂ ಪೆಟ್ಟುಗಳ ಮರಮರಳಿ ಪಡೆಯುತ್ತ ಕಮರುತ್ತ ಕಂದುತ್ತ ಕಲಹದಿಂದ । ಶಮಿಸುತ್ತ ಗುಣಪಡಿಪ ಗಾಯಾಳುಗಳಿಗುಂಟು ತಮವ ನೀಗುವ ಬದುಕಿನಾಚೆಯರಿವು ॥ ಕಣದಷ್ಟೆ ಮಾರ್ಪಾಟು ನಮ್ಮಿಂದಲಾಗುತಿರೆ ಚಣಚಣಕು ಬೆಲೆಯಿರುವುದೆನ್ನುತಿಹೆವು । ದಣಿವ ತರಿಸುವ ದುಡಿಮೆ ಫಲವೀಯುತಿದೆಯೆನುತ...

Translation of "Lodged" by Robert Frost

Image
ಶರಣಾಗತಿ ಮಳೆಯು ಹೇಳಿತು ಗಾಳಿಗೆ - 'ದೂಡು ನೀ, ನಾ ಜಡಿಯುವೆ' ಬಡಿಯಲವುಗಳು ತೋಟವ, ನಲುಗಿ ಹೂಗಳು ಬಾಗಿವೆ. ಬಳಲಿ ಸಾಯದೆ ಮಲಗಿವೆ, ಅವುಗಳನುಭವವರಿತಿಹೆ... Image attribution: CC BY 2.0 by Chris Metcalf Original "Lodged" from Robert Frost: The rain to the wind said, 'You push and I'll pelt.' They so smote the garden bed That the flowers actually knelt, And lay lodged--though not dead. I know how the flowers felt.

Translation of Rudyard Kipling's "If" to Kannada

Image
ರೆ... ನಿನ್ನ ನೆಮ್ಮದಿಯ ನೀಂ ಕಾಪಿಟ್ಟುಕೊಳ್ಳುತಿರೆ ನಿನ್ನನೇ ಹಳಿಯುತಿರೆ ತಲ್ಲಣಿಸಿದುಳಿದವರು, ನಿನ್ನಳವಿನೊಳು ನಿನ್ನ ನಂಬುಗೆಯದಚಲವಿರೆ ಅನ್ಯರಪನಂಬಿಕೆಯ ಮನ್ನಿಸುತ ನಡೆಯುತಿರೆ ತಾಳುವಿಕೆ ನಿನ್ನೊಳಿರೆ, ತಾಳ್ಮೆಯಿಂ ದಣಿಯದಿರೆ ದಾಳಿ ಹುಸಿಯಿಂ ನಡೆಸೆ ಹುಸಿಯ ನೀನಾಡದಿರೆ ಬಾಳೆ ಹಗೆತನವಾಗೆ ಹಗೆಯ ನೀಂ ಬಯಸದಿರೆ ಢಾಳಾಗಿ ಕಾಣಿಸದೆ ಮಾತಿನೊಳ್ ವಿನಯವಿರೆ ಕನಸ ನೀಂ ಕಾಣುತಿರೆ ಕನಸಿನಾಳಾಗದಿರೆ ಮನದಿ ಮಂಥನ ನಡೆಸೆ ಚಿಂತೆಯೀಡಾಗಿಸದೆ ನಿನಗಾಗಿ ಬಂದಿರುವ ಗೆಲುವು ಸೋಲೆಂಬೆರಡು ಘನಕಪಟಿಗಳ ನಡುವೆ ಸಮತೆಯಂ ತೋರುತಿರೆ ನಿನ್ನ ಸತ್ಯವ ತಿರುಚಿ ಕೇಡಿಗರು ಮರುಳರಿಗೆ ಗನ್ನವಾಗಿಸೆ, ಕೇಳಿ ಸಹಿಸುವಾಚಾರವಿರೆ ಭಿನ್ನಗೊಂಡಿರೆ ಜೀವ ಮುಡಿಪಿಟ್ಟು ಮಾಳ್ದ ಬೆಸ ಇನ್ನೊಮ್ಮೆ ನೀನದನು ಕಟ್ಟಲಣಿಯಾಗುತಿರೆ ಗಳಿಕೆಯಂ ನಿನದೆಲ್ಲ ಕುತ್ತಿಗೆಂದಡವಿಟ್ಟು ಬೆಳೆವುದೋ ಕಳೆವುದೋ ತಿಳಿಯದೇ ನಡೆಯುತಿರೆ  ಕಳೆದರೂ ಮತ್ತೊಮ್ಮೆ ಮೊದಲಿನಿಂ ತೊಡಗುತಿರೆ ಬಳಿಕ ಕಳೆದುದರ ಬಗೆಗುಸಿರನೇ ಎತ್ತದಿರೆ ಮಿಡಿವೆದೆಯ ತುಡಿವ ನರ ದುಡಿವ ಕಸುವಂ ನೀನು ಗಡುವು ದಾಟಿಯು ನಿನ್ನ ನಡೆಗೆಂದು ಸೆಳೆಯುತಿರೆ ಉಡುಗಿರಲು ನಿನ್ನಳವು ಅಡಿಗಡಿಗೆ ಬಳಲಿರಲು "ಬಿಡದೆ ಮುನ್ನಡೆ"ಯೆಂದು ದೃಢಮನವದೆನ್ನುತಿರೆ ಎಲ್ಲರೊಳಗೊಂದಾಗಿಯೂ ನಿನ್ನ ಹಿರಿಮೆಯಿರೆ ಮಲ್ಲರಾಜರ ಜತೆಗೆ ನಡೆದರೂ ವಿನಯವಿರೆ ಬಲ್ಲ ಸಖರೂ ಹಗೆಗಳೂ...

ಬಾಲ್ಯದ ಓದಿನ ನೆನಪುಗಳು

Image
ಈ ಕೆಳಗಿನ ದಿ ಅರುಣ್ ಮೇಷ್ಟ್ರು ಶೋ  ಎರಡನೇ ಆವೃತ್ತಿಯ ಮಾತುಗಳನ್ನು ಕೇಳಿದ ಮೇಲೆ ನನಗೂ ಬಾಲ್ಯದಲ್ಲಿ ಓದಲು ಪುಸ್ತಕಗಳಿಗಾಗಿ ಹಾತೊರೆಯುತ್ತಿದ್ದ ದಿನಗಳು ನೆನಪಾದವು. The Arun Meshtru Show S1-E2 ದಿ ಅರುಣ್ ಮೇಷ್ಟ್ರು ಶೋ S1-E2 Feat. @arunmeshtru Like | Share | Subscribe https://t.co/pdRGVzCfiT pic.twitter.com/Wj7RNRPoqx — Talk Of The Town (@TalkOf_TheT0wn) July 26, 2019 ನಾನು ಇದ್ದದ್ದು ಒಂದು ಸಣ್ಣ ಊರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ . ಈಗ ಊರು ದೊಡ್ಡದಾಗಿ ಬೆಳೆದಿದ್ದರೂ ನನ್ನ ಬಾಲ್ಯದ ಕಾಲಕ್ಕೆ ಅದು ಸಣ್ಣ ಊರು. ಅಲ್ಲಿ ಕೊಳ್ಳಲು ಪುಸ್ತಕದ ಅಂಗಡಿಗಳು ಹೆಚ್ಚಾಗಿ ಇರಲಿಲ್ಲ. ನನ್ನ ಪಾಲಿಗೆ ವರವಾಗಿದ್ದಂತಹವು ಊರಿನ "ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ" ಎಂಬ ಒಂದು ಖಾಸಗಿ ಗ್ರಂಥಾಲಯ ಮತ್ತು ಸರ್ಕಾರಿ ಗ್ರಂಥಾಲಯ . ಅಲ್ಲಿಂದ ಎರವಲು ತಂದು ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ನನಗೆ ಪುಸ್ತಕಗಳ ಪರಿಚಯವಾದದ್ದು ಮನೆಯಲ್ಲಿದ್ದ ಅಮರ ಚಿತ್ರ ಕಥೆ ಪುಸ್ತಕಗಳಿಂದ. ನಮ್ಮ ತಂದೆಯವರು, ಚಿಕ್ಕಪ್ಪ ಆಗಾಗ ಈ ಪುಸ್ತಕಗಳನ್ನು ತಂದಿಟ್ಟಿದ್ದರು. ಅವು ಕೇವಲ ಕಾಮಿಕ್ಸ್ ಪುಸ್ತಕಗಳಾಗಿದ್ದರೂ ಅವುಗಳಿಂದ ಕಲಿತದ್ದು ಬಹಳ. ಮಕ್ಕಳಿಗೆ ಭಾರತದ ಮೂಲೆ ಮೂಲೆಗಳಿಂದ ಪುರಾಣ ಮತ್ತು ನೀತಿಕಥೆಗಳನ್ನು ಹೆಕ್ಕಿ ತಂದು ಮನಮುಟ್ಟುವಂತೆ ಕಲಿಸಿದ ಶ್ರೇಯ ಅಮರ ಚಿತ್ರ ಕಥೆ ಮ...

Translation of William Shakespeare's Sonnet 94 to Kannada

Image
Thanks to the requests of the multi-talented Dr. Chandana Sri over at Twitter, I took up the challenge of translating William Shakespeare's Sonnet 94 to Kannada. This is an intriguing and enigmatic sonnet with multiple interpretations discussed by many scholars, so I'm not going into the details of those interpretations with no scholarly background for the same. Here's the attempt to translate it to Kannada though, where attempts to stick to its original rhyming scheme had to be given up mostly, and also my initial thoughts of ensuring dwitIyAkShara prAsa in Kannada had to be set aside too, while only ensuring it for lines 9-14. The whole write up is in the form 5/5/5/3, so that it could match the last line that was already translated by Dr. Chandana as "ಕೊಳೆತ ನೈದಿಲೆ ನಾತ ಕಳೆಗಿಂತ ಕೀಳು" So, in essence, it was an exercise in samasyApUraNa! ನೋಯಿಸುವ ಬಲವಿದ್ದು ನೋಯಿಸದ ಜನರು ಗೋಚರಿಪ ಲಕ್ಷಣವ ದಿಟ ಮಾಡದವರು ಇತರರಂ ಕದಲಿಪರು ತಾವು ಕಲ್ಲಾಗಿ ಜಡವಾಗಿ, ಸೆಟೆದಿರ್ದು, ಸೆಳೆತ...

"ಜ್ಞಾನಲೋಕ"ವೆಂಬ ಮರೀಚಿಕೆ, ಸಡಗರದ ಕೈಬರಹ ಪತ್ರಿಕೆ

ಇಂದಿಗೆ ಸರಿಯಾಗಿ ೨೦ ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿದ್ದಾಗ ನಿಂತುಹೋದದ್ದೊಂದು ಖಯಾಲಿಯನ್ನು ಮತ್ತೇಕೆ ಆರಂಭಿಸಬಾರದೆಂಬ ಮನಸ್ಸು ನನಗೂ ನನ್ನ ಸ್ನೇಹಿತ ಶಿವಪ್ರಸಾದನಿಗೂ ಇಂದು ಬೆಳಿಗಿನ ಜಾವದ ನಡಿಗೆಯ ಸಮಯದಲ್ಲಿ ಒಟ್ಟಿಗೇ ಬಂದದ್ದು ಆಶ್ಚರ್ಯಕರವೇ. ೧೪ ಏಪ್ರಿಲ್ ೧೯೯೯ ರ ದಿನ ನಾವಿಬ್ಬರೂ ಕೈಜೋಡಿಸಿ ಆರಂಭಿಸಿದ್ದ ಕೈಬರಹ ಪತ್ರಿಕೆ " ಜ್ಞಾನಲೋಕ "ದ ಕೊನೆಯ ಪ್ರತಿ ಪ್ರಕಟಗೊಂಡ ದಿನ. ಅಂದು ಅಂಬೇಡ್ಕರ್ ಜಯಂತಿಯೆಂದು ಶಿವಪ್ರಸಾದನು ಅಂಬೇಡ್ಕರರ ಚಿತ್ರವೊಂದನ್ನೂ ಬಿಡಿಸಿ ಒಂದೇ ಹಾಳೆಯ ಪೇಪರನ್ನು ಚೆನ್ನಾಗಿಯೇ ತುಂಬಿಸಿದ್ದ. ಆ ಪತ್ರಿಕೆ ಅಂದು ದಿನಪತ್ರಿಕೆಯಾಗಿತ್ತು. ದಿನಕ್ಕೆ ಎರಡು ಪ್ರತಿಗಳನ್ನು ಹೊರತರುತ್ತಿದ್ದೆವು. ಒಂದು ದಿನ ನಾನು ಪತ್ರಿಕೆ ಬರೆದರೆ ಮಾರನೆಯ ದಿನ ಅವನು. ಅದರ ನಂತರ ಮತ್ತೆ ನಾನು. ಹಾಗೆ. ಯಾರು ಬರೆದರೂ ಕೆಳಗೊಂದು ಕಾರ್ಬನ್ ಶೀಟ್ ಇಟ್ಟುಕೊಂಡು ಬರೆಯುವುದು. ಅದೇ ಎರಡನೇ ಪ್ರತಿ. ನಾನು ಬರೆದ ದಿನ ಆ ಕಾರ್ಬನ್ ಕಾಪಿ ಪ್ರತಿಯನ್ನು ಶಿವಪ್ರಸಾದನಿಗೆ ಕೊಡುವುದು, ಅವನು ಬರೆದ ದಿನ ಅವನು ನನಗೆ ಕೊಡುತ್ತಿದ್ದ. ಅಷ್ಟೇ. ಅದರಲ್ಲೇ ಒಂದು ಸಂತೃಪ್ತಿ. ಯಾರಿಗೇನು ಅದರ ಬಗ್ಗೆ ನಾವು ಹೇಳಿಯೂ ಇರಲಿಲ್ಲ.    ಇಷ್ಟೆಲ್ಲಾ ಪ್ರಚಾರ ಕೊಡುವುದು ನೋಡಿದರೆ ಓದುಗರು ನಾವೇನೋ ಆ ಪತ್ರಿಕೆಯನ್ನು ಹಲವು ವರ್ಷಗಳ ಕಾಲ ನಡೆಸಿದೆವೆಂದುಕೊಳ್ಳಬಹುದು. ಆದರೆ ನಾವು ಹೊರತಂದದ್ದು ಕೇವಲ ಐದೋ ಆರೋ ಸಂಚಿಕೆಗಳನ್ನು! ನಮ್ಮಿಬ್ಬರಿಗೂ ಆಗ...

Jhansi Rani Lakshmi Bai: Manikarnika: Through Murals at her Memorial

Image
A brief history of Jhansi Rani Lakshmi Bai, Manikarnika, through the murals of her memorial at Varanasi, pictures from the Varanasi visit of November 2018: Road leading to the Jhansi Rani Lakshmi Bai Memorial near Assi Ghat, Varanasi Entrance of the memorial... Details about the memorial and about Rani Lakshmi Bai: The majestic statue of the Queen of Jhansi: Manikarnika, being cared by her parents, Moropant and Bhagirathi Bai: Manikarnika playing on the banks of river Ganga at the Ghats of Varanasi: Moropant moves to Bithoor with little daughter Manikarnika after his wife passes away: Manikarnika gets special affection and attention from Peshwa Bajirao II and gets to learn the art of warfare from Tatya Tope and others: Manikarnika marries Gangadhar Rao, King of Jhansi, and becomes Lakshmi Bai: King Gangadhar Rao and Queen Lakshmi Bai of Jhansi: Gangadhar Rao and Lakshmi Bai adopt Damodar Rao as the heir to the Jhansi thr...

A Trip to Adi Badri and Sarasvati Udgam Sthal, Haryana

Image
A detailed write up will follow, but here are some pictures from Adi Badri, Haryana, from a visit in October 2018. This place is home to ancient Badrinath Vishnu and Kedarnath Shiva temples, as well as the place believed to be the birth place of River Sarasvati . Some clicks of the picturesque Adi Badri Pond : The green-filled path leading to Sarasvati Udgam Sthal : Sarasvati trickles through and falls on the Shiva Linga placed  here: The Somb River , a tributary of Yamuna that flows through Adi Badri, is believed to trace the same course as the River Sarasvati of the Vedic times: Beautiful crape jasmine (ಕನ್ನಡ: ನಂದಿಬಟ್ಟಲು) flowering at the feet of Sarasvati river birth: Initial steps to climb to the Adi Kedarnath Temple : And the last few steps to the temple: The main temple of Adi Kedarnath : The Gaushala maintained at Adi Kedarnath Temple premises: Adi Badrinath Temple  and it's steps as seen f...