Kannada Translation of "Wounded Healers"

Translation of Dr. Chandana Sri's poem "Wounded Healers" in Kannada. A tribute to all the doctors out there.

ಗುಣಪಡಿಸುವ ಗಾಯಾಳುಗಳು 

ತೊಡಕಿನದು ಕಡಿದಿನದು ನಾವಾರಿಸಿಹ ದಾರಿ
ನಡಿಗೆಯಿದೆ ಬಲುದೂರ ಕಷ್ಟಸಾಧ್ಯ ।
ಒಡನಿರುವ ಕಣಿವೆಯೋ, ಆಳವಿದೆ ಘೋರವಿದೆ
ಗಡಸಿನಾಳುಗಳಿಗೂ ವಿಷಮಭೇದ್ಯ ॥ 

ಒರೆಗೆ ನಮ್ಮನು ಹಚ್ಚಿ ದಿನದಿನವು ಪರಿಕಿಸುತ
ಒರೆಯುತೆಮಗೂಳಿಗದ ಹೆಣಗಾಟವ । 
ಕೊರೆಯಿಲ್ಲದಂತೆಮಗೆ ತಾಳ್ಮೆಯಂ ಕಲಿಸುವರು
ಪೊರೆಯೆ ನಾವ್ ಬೇನೆಯಿಂ ಸೊರಗಿರ್ಪರ ॥

ಕಲಿಸಿಹರು ಬಾಳುವುದ ಬಾಳಿಸಲ್ಕೆನುತಲೇ
ಬೆಳೆಸುತ್ತಲುಕ್ಕಿನೆದೆ ನರಗಳನ್ನು ।
ನೆಲೆಗೊಳಿಸಿ ಕೊಡುವುದನು, ಮರೆಸಿಹರು ಪಡೆವುದನು
ಕಲೆತು ನಾವ್ ಸಂತೈಸಿ ಮಾಯಿಸಿರಲು ॥

ಹದವರಿತ ಕಲೆಯಿಂದ ನುರಿತ ಕುಶಲತೆಯಿಂದ
ಕದನವೊಂದನು ನಾವು ಕಾಯಬೇಕು ।
ಎದೆಯನುಬ್ಬಿಸಿ ಮತ್ತೆ ಗುಂಡಿಗೆಯ ಹುರಿಗಟ್ಟಿ
ಬೆದರಿಸುವ ಹುರುಡ ನಾವರಸಬೇಕು ॥

ಸಮರದಿಂ ಪೆಟ್ಟುಗಳ ಮರಮರಳಿ ಪಡೆಯುತ್ತ
ಕಮರುತ್ತ ಕಂದುತ್ತ ಕಲಹದಿಂದ ।
ಶಮಿಸುತ್ತ ಗುಣಪಡಿಪ ಗಾಯಾಳುಗಳಿಗುಂಟು
ತಮವ ನೀಗುವ ಬದುಕಿನಾಚೆಯರಿವು ॥

ಕಣದಷ್ಟೆ ಮಾರ್ಪಾಟು ನಮ್ಮಿಂದಲಾಗುತಿರೆ
ಚಣಚಣಕು ಬೆಲೆಯಿರುವುದೆನ್ನುತಿಹೆವು ।
ದಣಿವ ತರಿಸುವ ದುಡಿಮೆ ಫಲವೀಯುತಿದೆಯೆನುತ
ತಣಿವ ನಗೆಯೊಂದ ನಾವ್ ಬೀರುತಿಹೆವು ॥


Original Poem "Wounded Healers" by Dr. Chandana Sri:

Our chosen path is hard and steep
The walk is really long
The gorge beside is dire and deep
A challenge for the strong

Put to test each passing day
Taught to toil and till
Taught to endure all the way
While we nurse the ill

Taught to live just to let live
To build the nerves of steel
Not to take but always give
As we salve and heal

With our skill and hard-earned art
A war have we to wage
With squared chest and hardened heart
Seek the daunting gage

Sullied by the battle's blows
Humbled by the strife
Every wounded healer knows
The other side of life

But the slightest difference made
Makes it worth the while
We deem our efforts fully paid
And wear a content smile


Comments