Posts

Showing posts from June, 2025

ಕೈಮರ

Image
  ಕೈಮರ ಕಾರಿರುಳೆಲ್ಲೆಡೆ, ನೇಸರನಿಳಿದಿಹ  ಮಾಸಲು ಗಿರಿಗಳ ಹಿಂಬದಿಗೆ, ಬಾನಲಿ ಕಾಣಿಸವರಿಲುಗಳೊಂದೂ ಬೆಳಗಲು ಬೆಳ್ಳಿಯ ಮುಗುಳುನಗೆ. ಗೂಗೆಯು ಹಾರಿತು ಬಯಲನು ಹಾಯುತ  ಕೂಗನು ಬಿರುಗಾಳಿಗೆ ಬೆರೆಸಿ, ಮಂಕದು ಕವಿದಿರೆ ಪುಟ್ಟನು ನಡೆದನು  ಬಿರುಸಿನ ಹೆಜ್ಜೆಯ ಹಾಕುತಲಿ. ಆ ಕಗ್ಗತ್ತಲಿನೊಳು ನಡುನಡುವೆಯೆ  ಮಿಂಚಿನ ತಾಂಡವ ನಡೆದಿತ್ತು, ಕೆಸರಿನ ಜಾಡನು ತೋರಿತ್ತು, ಬೇಲಿಯ ನೆರಳೂ ಕಂಡಿತ್ತು! ಭೀಕರ ಕಾವಳ ಕವಿದಿರೆ ಪಥವನು  ತಡಕಾಡುತಲವ ಹುಡುಕಿದನು, ಘೋರದ ರೂಪವನೊಂದನು ದೂರದಿ  ಕಂಡಂತೆನಿಸಿಯೆ ಬೆದರಿದನು. ಮಾರಕವೆನಿಸುವ ಭೀಕರ ಕಾಯವು  ಬಿಳಿಯುಡುಪನು ತಾ ಹೊದ್ದಿತ್ತು, ಪುಟ್ಟನ ಜುಟ್ಟನು ಹಿಡಿದೆಳೆದಾಡಲು  ತೋಳ್ಗಳನಗಲಿಸಿ ಕಾದಿತ್ತು! ಮೈ ಮರಗಟ್ಟಿತು ಥರಥರಗುಟ್ಟಿತು ಮುಂದಿರುವಾಕೃತಿಯನು ನೆನೆದು, ಕೆಚ್ಚೆದೆಯಿಂದಲಿ ಕೈಲಾದುದ ತಾ- ನೆಸಗುವ ನಿಶ್ಚಯ ಪುಟ್ಟನದು. ತನ್ನೆಲ್ಲಳವನು ಕೂಡಿಸಿ ನಡೆದನು ಹುಡುಗನು ಬೇತಾಳದ ಕಡೆಗೆ, ಮಬ್ಬಿನಿರುಳಿನಲಿ ತವಕದಿ ಚಲಿಸುತ ಬೀರಿದ ನೋಟವನದರೆಡೆಗೆ. ಹತ್ತಿರವಾಗಿರೆ ಭೂತಾಕಾರವು ಭಯವದು ಕಣ್ಮರೆಯಾಗಿತ್ತು, ತಟ್ಟುತ ಕೈಗಳ ಪುಟ್ಟನು ನಕ್ಕನು ಹೊಟ್ಟೆಯು ಹುಣ್ಣಾಗುವವರೆಗೂ! ಕೈಮರವಿದ್ದಿತು ಭೂತವದಲ್ಲವೊ, ನೆರವಿಗೆ ದಾರಿಯ ಹೋಕರಿಗೆ! ಕತ್ತಲ ಮಾಯೆಯು ಕಳೆದಿರೆ ಬೆರಗಿನ  ನಿಜವದು ಕಂಡಿತು ಪುಟ್ಟನಿಗೆ. ಹೊಸತೊಂದುತ್ತಮ ಪಾಠವ ಕಲಿತೆನು  ಸಂಶಯವಿಲ್ಲೆಂದನ...

ಹಿಂಜರಿಕೆ

Image
 Kannada Translation of Robert Frost's poem "Reluctance": ಹಿಂಜರಿಕೆ ಕಾಡುಗಳಲಡ್ಡಾಡಿ ಬಯಲುಗಳಲೋಡಾಡಿ  ಗೋಡೆಗಳ ಹಾರುತ್ತಲಲೆದಿದ್ದೆ ನಾನು, ಕೋಡುಗಲ್ಲನು ಹತ್ತಿ ಜಗವನವಲೋಕಿಸುತ  ಮೂಡುಪಡುಗಳ ಕಂಡು ಬಂದೆ ಕೆಳಗಿಳಿದು.  ಬೀಡ ನಾ ಸೇರಿಹೆನು ಹೆದ್ದಾರಿಯನು ಹಿಡಿದು - ನೋಡದೋ, ಅಲ್ಲಿಗದು ಕೊನೆಯ ಕಂಡಿಹುದು! ತರಗುಗಳು ಚೆಲ್ಲಾಡಿ ಮಣ್ಣನಪ್ಪಿಹವೆಲ್ಲ  ಮರವು ಹಿಡಿದಿಟ್ಟ ಕೆಲವೆಲೆಗಳನು ಬಿಟ್ಟು, ತೊರೆವುದವುಗಳನು ತಾನೊಂದನೊಂದನೆ ಕಳಚಿ ಬರಡಾಗಿ ತರುವು ತಾ, ಹೆರರು ನಿದ್ರಿಸಿರೆ. ಹರಡಿರುವ ಹಿಮದೊಳಗೆ ಸೇರುವವು ತರಗುಗಳು ಕರಗುತ್ತ ಮುರಮುರನೆ ನವುರಾಗಿ ದನಿಸಿ. ಕೊಳೆತೆಲೆಗಳೆಡೆಗೆಡೆಗೆ ಗುಪ್ಪೆಯಲಿ ಕದಲದೆಯೆ  ಕುಳಿತಿಹವು, ಅತ್ತಿತ್ತ ಚಲಿಸದೆಯೆ ನೆಲದಿ. ಅಳಿದಿಹುದು ನಂದಿಹುದು ಆ ಕೊನೆಯ ಸೇವಂತಿ, ಬಳಲಿ ಮಲ್ಲೆಯ ದಳಗಳುದುರಿ ಹೋಗಿಹವು. ಕಳವಳಿಸಿ ಗುಂಡಿಗೆಯು ಮುಂದಿನದನರಸುತಿರೆ ಕೇಳಿಹವು ಹೆಜ್ಜೆಗಳು - "ಮತ್ತೆತ್ತ ನಡೆವೆ?" ಹರಿವ ನೀರಿನ ಸೆಳವಿನೊಳು ತೇಲಿ ಹೋಗುವುದು  ಎರಡು ಬಗೆದಂತೆನಿಸದೇನು ನರಮನಕೆ? ಅರಿವಿರಲು ಸರಿತಪ್ಪುಗಳ ತೆಳ್ಪು ಬಲಿತಿರಲು  ಕರವ ಜೋಡಿಸಿ ಮಣಿಯಲೆಂತು ಹಿಂಜರಿಕೆ? ಕರಗಿ ಹೋಗಿರೆ ನಲುಮೆ, ಋತುವು ಕೊನೆಗಾಣುತಿರೆ ಶರಣಾಗಿ ಜರುಗಿದುದನೊಪ್ಪುವುದಕಳವೆ? Reluctance Out through the fields and the woods    And over the walls I have wen...