Posts

Showing posts from October, 2016

Hoysala Expedition Part 47: Kedareshwara Temple, Balligave

Image
Well, a Hoysala Temple Write-Up after a long time, and not entirely "Hoysala" for that matter too. This is a long pending blog post about the temple that stands as testimony to "the handing over of the baton", so to speak, from the Kalyani Chalukya Architecture to the Hoysala Architecture - The Kedareshwara Temple in Balligave , Shikaripura Taluk in Shivamogga . The town of Balligave must be celebrated as one of the most important centers of art and architecture in the history of Karnataka. After all, this is the birth place of Shantala Devi , a great exponent of the traditional Indian dance forms, a devout Jain, and the Queen of Hoysala King Vishnuvardhana . This is where the best of the sculptors of the later Kalyani Chalukya era and the initial Hoysala era hailed from - Dasoja, Malloja, Maniyoja, Siddoja, Nadoja and more. This is where they got their hands on a huge mine of soapstone (Chlorite Schist) that took the beauty and the possibilities of int...

ಮಂಜಿನ ಸಂಜೆಯ ಅರಣ್ಯವಾಸ್ತವ್ಯ - Kannada Translation of "Stopping By Woods on a Snowy Evening" by Robert Frost

Image
An old attempt at translation of Robert Frost's poem "Stopping By Woods on a Snowy Evening" to Kannada: ಮಂಜಿನ ಸಂಜೆಯ ಅರಣ್ಯವಾಸ್ತವ್ಯ ಅಡವಿಯಿದು ಯಾರದೆಂದಿದೆಯೆನಗೆ ಅರಿವು ಹಳ್ಳಿಮನೆಯೊಳಗುಂಟು ಇದರೊಡೆಯನಿರವು ನಾನಿಲ್ಲಿ ತಂಗಿದ್ದನವ ತಿಳಿಯಲಾರ - ನೋಡುತ್ತ ಅವನಡವಿಯ ಮಂಜು ಮುಸುಕಿದ ಹರವು ವಿಚಿತ್ರವೆನಿಸಬಹುದೆನ್ನ ತೇಜಿಗೀ ವ್ಯವಹಾರ ಹೊಲಮನೆಯಂಗಳವಿಲ್ಲದೆಡೆ ಬಿಡಾರ ಹೆಪ್ಪುಗಟ್ಟಿದ ಹಳ್ಳ ಅಡವಿಗಳ ನಡುವೆ ಅತಿಕರಾಳ ಸಂಜೆಯಂದು ತಳೆದ ಈ ನಿರ್ಧಾರ ರಿಂಗಣಿಸಿದೆ ಹೂಡುಗಂಟೆ ಮೈಯನೊಮ್ಮೆ ಕೊಡವೆ ತಪ್ಪಾಗಿದೆಯೇನೊ, ಒಮ್ಮೆ ನೋಡೆಂಬ ಗೊಡವೆ ಸುತ್ತಲಿನ ಪರಿಸರ ಬಹಳಷ್ಟು ಪ್ರಸನ್ನ ಹಗುರ ಹವೆ ಹಿಮಪಾತ, ಉಳಿದಂತೆ ಜಡವೆ ಕತ್ತಲಿದೆ ಗಹನವಿದೆ ಅಡವಿಯಿರಬಹುದು ಚೆನ್ನ ನಡೆಸುವುದಿದೆ ಕೊಟ್ಟ ಹಲವು ಮಾತುಗಳನ್ನ ಮೈಲುಗಳ ಪಯಣವಿದೆ ಕಣ್ಣ ಮುಚ್ಚುವ ಮುನ್ನ ಮೈಲುಗಳ ಪಯಣವಿದೆ ಕಣ್ಣ ಮುಚ್ಚುವ ಮುನ್ನ... -ವೆಂಕಟೇಶಪ್ರಸನ್ನ The original from Robert Frost: Stopping By Woods on a Snowy Evening Whose woods these are I think I know.    His house is in the village though;    He will not see me stopping here    To watch his woods fill up with snow. ...

ಎತ್ತ ಹೋಯಿತೆನ್ನ ಬಾಲ್ಯ

A very old poem in Kannada that I had written over 15 years ago... ಎತ್ತ ಹೋಯಿತೆನ್ನ ಬಾಲ್ಯ ಎಳೆಯ ಹೊಂಬಿಸಿಲಿನಲ್ಲಿ ಹೊಳೆಯ ದಂಡೆಗುಂಟ ಓಡಿ ಮಳೆಬಿಲ್ಲಿನ ಮಾದಕತೆಯ ಹೊಳೆವ ಕಂಗಳಲ್ಲೆ ಹಿಡಿದ ಎಳೆಯತನದ ದಿನಗಳೆಲ್ಲ ಕಳೆದುಹೋದುವೆಲ್ಲಿ ಇಂದು? ಗುಬ್ಬಿಗಳ ಕಲರವಕ್ಕೆ ಹಬ್ಬಗಳ ಸಡಗರಕ್ಕೆ ಕಬ್ಬು ಮಾವು ಸಜ್ಜಿಗೆಗೆ ಹುಬ್ಬೇರಿಸಿ ಕಣ್ಣರಳಿಸಿ ಸಭ್ಯರಾಗಿ ಕಾಯುತ್ತಿದ್ದ ಹೆಬ್ಬಯಕೆಯ ಆ ಕ್ಷಣಗಳೆಲ್ಲಿ? ಅಕ್ಕ ತಮ್ಮರೊಡನೆ ಕೂಡಿ ಸಿಕ್ಕ ಮರಳ ಗುಡ್ಡೆ ಹತ್ತಿ ಹೆಕ್ಕಿ ಕಪ್ಪೆ ಚಿಪ್ಪು ತೆಗೆದು ಲೆಕ್ಕ ಮಾಡಿ ನಲಿಯುತ್ತಿದ್ದ ದುಃಖದುಮ್ಮಾನವಿರದ ಮಕ್ಕಳಾಟದ ಆ ದಿನಗಳೆಲ್ಲಿ? ಹಚ್ಚಹಸಿರು ಸೀಬೆಯನ್ನು ಕಚ್ಚಿ ಕಾಗೆ ಎಂಜಲೆನುತ ರಚ್ಚೆ ಹಿಡಿದು ಜಗಳವಾಡಿ ಹಂಚಿ ತಿಂದು ಖುಷಿಯ ಪಟ್ಟ ಮುಚ್ಚು ಮರೆಯ ಅರಿಯದಂಥ ಅಚ್ಚರಿಯ ಆ ಸ್ನೇಹವೆಲ್ಲಿ? ಸುತ್ತಲಿರುವ ಪ್ರಕೃತಿಯನ್ನು ಮತ್ತೆ ತಿರುಗಿ ನೋಡದಂತೆ ಹತ್ತು ಹಲವು ಚಿಂತೆಗಳನು ಹೊತ್ತು ತಿರುಗುತ್ತಿರುವೆನಲ್ಲ! ಎತ್ತ ಹೋಯಿತೆನ್ನ ಬಾಲ್ಯ ಅತ್ತು ಕರೆದರೂ ಬಾರದಲ್ಲ... - ವೆಂಕಟೇಶಪ್ರಸನ್ನ