Posts

Showing posts from November, 2022

Kannada Translation of "Lost" by David Wagoner

Image
Kannada Translation of the poem "Lost" by David Wagoner. ಕಾಂತಾರ ನಿಲ್ಲು, ಚಲಿಸದಿರು. ಮುಂದೆ ಮರಗಳಿವೆ, ಬದಿಗೆ ಪೊದೆಗಳಿವೆ ಕಾಣ! ಬಲ್ಲವೀ ನೆಲೆಯ, ಕಳೆದು ಹೋಗವವು - "ಇಲ್ಲಿ" ಎಂಬುದೀ ತಾಣ. ಪತ್ತೆಯಿರದ ಪರಕೀಯವಿದುವೆ - ಮೈ ಕಣ್ಣನಾಗಿಸಿರು, ಎಚ್ಚರ! ಗೊತ್ತನರಿತು ಅನುಮತಿಯ ಬೇಡಿ ಪರಿಚಯವನಿತ್ತು ಮುಂದಿನ ಬೆಸ. ಅಡವಿಯುಸಿರನಿಡುತಿಹುದು, ಕಿವಿಯ ಕೊಡು - ಮಾರುನುಡಿವುದದು ನಿಶ್ಚಿತ. ಸುತ್ತ ನಿನಗೆಂದು ತಾನು ರಚಿಸಿರುವ ನೆಲೆಯ ನೀನೊಮ್ಮೆ ನೋಡು, ಬಿಟ್ಟು ಹೊರಟಿರಲು ಮರಳಲನುವಿಹುದು, ಇಲ್ಲಿಗೆಂದುಸುರಿ ಜಾಡು. ಮರಗಳೆರಡೊಂದೆ ರೀತಿಯಿರವೆಂದು ಕಾಗೆಗಳಿಗಿಲ್ಲಿ ಗೊತ್ತು, ಎರಡು ಕೊಂಬೆಗಳು ಬೇರೆ ಬೇರೆಯವು, ಗುಬ್ಬಿಗಿದುವೆ ಮನದಟ್ಟು. ಮರಗಿಡಗಳೆಸಕ ನಿನ್ನ ಗಮನವನು ಸೆಳೆಯಲಾಗದಿರಲಿದು ಖರೆ -  ಕಳೆದು ಹೋಗಿರುವೆ, ನಿಲ್ಲು, ಚಲಿಸದಿರು. ನಿಬಿಡ ಕಾಂತಾರಕರಿವಿದೆ. ನೀನಿರುವ ತಾಣ ತಿಳಿದಿರುವುದದಕೆ, ಅನುಮತಿಸು ಹುಡುಕಲದಕೆ. - ವೆಂಕಟೇಶಪ್ರಸನ್ನ The original: Lost Stand still. The trees ahead and bushes beside you Are not lost. Wherever you are is called Here, And you must treat it as a powerful stranger, Must ask permission to know it and be known. The forest breathes. Listen. It answers, I have made this place around you. If you lea...