Kannada Translation of "Lost" by David Wagoner

Kannada Translation of the poem "Lost" by David Wagoner.


ಕಾಂತಾರ

ನಿಲ್ಲು, ಚಲಿಸದಿರು. ಮುಂದೆ ಮರಗಳಿವೆ, ಬದಿಗೆ ಪೊದೆಗಳಿವೆ ಕಾಣ!
ಬಲ್ಲವೀ ನೆಲೆಯ, ಕಳೆದು ಹೋಗವವು - "ಇಲ್ಲಿ" ಎಂಬುದೀ ತಾಣ.
ಪತ್ತೆಯಿರದ ಪರಕೀಯವಿದುವೆ - ಮೈ ಕಣ್ಣನಾಗಿಸಿರು, ಎಚ್ಚರ!
ಗೊತ್ತನರಿತು ಅನುಮತಿಯ ಬೇಡಿ ಪರಿಚಯವನಿತ್ತು ಮುಂದಿನ ಬೆಸ.
ಅಡವಿಯುಸಿರನಿಡುತಿಹುದು, ಕಿವಿಯ ಕೊಡು - ಮಾರುನುಡಿವುದದು ನಿಶ್ಚಿತ.
ಸುತ್ತ ನಿನಗೆಂದು ತಾನು ರಚಿಸಿರುವ ನೆಲೆಯ ನೀನೊಮ್ಮೆ ನೋಡು,
ಬಿಟ್ಟು ಹೊರಟಿರಲು ಮರಳಲನುವಿಹುದು, ಇಲ್ಲಿಗೆಂದುಸುರಿ ಜಾಡು.
ಮರಗಳೆರಡೊಂದೆ ರೀತಿಯಿರವೆಂದು ಕಾಗೆಗಳಿಗಿಲ್ಲಿ ಗೊತ್ತು,
ಎರಡು ಕೊಂಬೆಗಳು ಬೇರೆ ಬೇರೆಯವು, ಗುಬ್ಬಿಗಿದುವೆ ಮನದಟ್ಟು.
ಮರಗಿಡಗಳೆಸಕ ನಿನ್ನ ಗಮನವನು ಸೆಳೆಯಲಾಗದಿರಲಿದು ಖರೆ - 
ಕಳೆದು ಹೋಗಿರುವೆ, ನಿಲ್ಲು, ಚಲಿಸದಿರು. ನಿಬಿಡ ಕಾಂತಾರಕರಿವಿದೆ.
ನೀನಿರುವ ತಾಣ ತಿಳಿದಿರುವುದದಕೆ, ಅನುಮತಿಸು ಹುಡುಕಲದಕೆ.

- ವೆಂಕಟೇಶಪ್ರಸನ್ನ




The original:

Lost

Stand still. The trees ahead and bushes beside you
Are not lost. Wherever you are is called Here,
And you must treat it as a powerful stranger,
Must ask permission to know it and be known.
The forest breathes. Listen. It answers,
I have made this place around you.
If you leave it, you may come back again, saying Here.
No two trees are the same to Raven.
No two branches are the same to Wren.
If what a tree or a bush does is lost on you,
You are surely lost. Stand still. The forest knows
Where you are. You must let it find you.

- David Wagoner

Comments

Popular posts from this blog

Bhagyada Lakshmi Baramma: Lyrics and Some of the Best Renditions

Kannada translation of Robert Frost's "The Road Not Taken"

ಮಂಜಿನ ಸಂಜೆಯ ಅರಣ್ಯವಾಸ್ತವ್ಯ - Kannada Translation of "Stopping By Woods on a Snowy Evening" by Robert Frost