Kannada translation of Robert Frost's "The Road Not Taken"
Kannada translation attempt of Robert Frost's famous poem "The Road Not Taken": ನಡೆಯದ ಹಾದಿ ಕವಲೊಡೆಯಿತೆರಡಾಗಿ ಕಾನನದ ಹಾದಿ, ಅವುಗಳೆರಡಿಹವು; ನಾ ದಾರಿಯೊಳಗೊಂಟಿ. ಸವೆಸಲಾರೆನು ನಾನು ಒಮ್ಮೆಗೆರಡೆನುತ, ಎವೆಯಿಡದೆ ನೋಡಿದೆನು ಒಂದನನವರತ, ಕವಿದು ಪೊದೆಯೊಳಗದುವೆ ಮರೆಯಾಗುವನಕ. ಎರಡನೆಯ ಹಾದಿಯದೆ ಸರಿಯೆನಿಸಿ ಹಿಡಿದೆ, ಚರಿಸೆನ್ನ ಮೇಲೆನುತಲದು ಕರೆಯುತಿತ್ತು. ಹೊರವಾಗಿ ಹುಲ್ಲಿತ್ತು, ಸವೆತ ಬಯಸಿತ್ತು. ತಿರುಗಾಡಿ ತುಸು ದೂರ ನಡೆದಂತೆ ತಿಳಿದೆ, ಸರಿಸಮದ ಸವಕಳಿಯೆ ಎರಡರೊಳಗಿತ್ತು. ಆ ದಿನದ ಬೆಳಗವುಗಳೊಂದರಂತೊಂದು ಮೂಡಿದವು, ತರಗುಗಳ ತುಳಿದ ಕಪ್ಪಿರದೆ. ಆದಿಯದನಿನ್ನೊಂದು ದಿನಕುಳಿಸಿ ಹೊರಟೆ. ಹಾದಿ ಹಾದಿಗೆ ಹಾದಿ ತೋರುವುದನರಿತು, ಪಾದಗಳು ಹಿಂದಿರುಗಿ ಬರುವ ನಚ್ಚಿರದೆ. ನಿಡುಸುಯ್ದು ಹೇಳುವೆನು ಮುಂದೆ ನಾನಿಂತು - ಕಡೆಯಲ್ಲಿ, ಹಲವಾರು ವರುಷಗಳ ಕಳೆದು, ಒಡೆದು ಕವಲಾಗಿರಲು ಪಥವೆರಡು ವನದಿ, ಕಡಿಮೆ ಬಳಸಿದ ಪಥವ ತುಳಿದು ನಾ ನಡೆದೆ; ಪಡೆದೆ ನಾ, ಬೇರೆಯದೆ ಫಲಗಳನು ಪಡೆದೆ. The original poem: The Road Not Taken Two roads diverged in a yellow wood, And sorry I could not travel both And be one traveler, long I stood And looked down one as far as I could To where it bent in the undergrowth; Then to...