Kannada Translation of "To Sleep" by John Keats:
ನಿದಿರೆಗೆ...
ಬೆರಳುಗಳ ನಯದಿಂದ ಕಂಗಳನು ಬೆಸೆದು
ಕವಿದ ಮಂಕನು ಹರಿಸಿ ಬೆಳಕನಾವರಿಸು
ನೆರಳಾಗಿ ಸೊಗದಿಂದ ನೆನಪುಗಳ ಮರೆಸು
ನಿದಿರೆಯೇ! ನಿನ್ನಿಚ್ಛೆಯಿರುವಂತೆ ಮಾಡು
ನುತಿಸುತಿರೆ ನಡುವಿನಲೆ ನಯನಗಳ ಕೂಡು
ನಮನದಂತ್ಯಕೆ ಕಾಯ್ದು ದಯೆಯೆನಗೆ ನೀಡು
ಗಸಗಸೆಯ ಮಹಿಮೆಯೊಲು ಲಾಲಿಯನು ಹಾಡು
ರಕ್ಷಿಸೆನ್ನನು, ಮುಗಿದ ದಿನ ಮೆರೆಯದಿರಲಿ
ನನ್ನ ದಿಂಬಿನ ಮೇಲೆ ಗೋಳರಳದಿರಲಿ
ಕಡುಗತ್ತಲಲಿ ಭಾವಮರ್ಮ ಕೊರೆದಿರಲು
ಬಿಡಿಸು ಬಿಗಿಹಿಡಿತದಿಂದೆನುವುದೆನ್ನೊರಲು!
ಜಾರುತಿಹ ಕೀಲಿಯನು ತಿರುವು ಚುರುಕಿನಲಿ,
ನನ್ನಾತ್ಮ ಸಂಪುಟಕೆ ನೀರವತೆ ಬರಲಿ!
The original by Jon Keats:
To Sleep
O soft embalmer of the still midnight,
Shutting, with careful fingers and benign,
Our gloom-pleas'd eyes, embower'd from the light,
Enshaded in forgetfulness divine:
O soothest Sleep! if so it please thee, close
In midst of this thine hymn my willing eyes,
Or wait the "Amen," ere thy poppy throws
Around my bed its lulling charities.
Then save me, or the passed day will shine
Upon my pillow, breeding many woes,—
Save me from curious Conscience, that still lords
Its strength for darkness, burrowing like a mole;
Turn the key deftly in the oiled wards,
And seal the hushed Casket of my Soul.
Comments