Posts

Showing posts from April, 2020

ಶಸ್ತ್ರವೈದ್ಯರು ಎಚ್ಚರ!

Image
Kannada translation of "Surgeons must be very careful" by Emily Dickinson: ಶಸ್ತ್ರವೈದ್ಯರು ಎಚ್ಚರ! ಎಚ್ಚರಿಕೆಯಿಂದಿರಲಿ ಶಸ್ತ್ರವೈದ್ಯರು ತಾವು ಬಿಚ್ಚುಗತ್ತಿಯ ಕೈಯೊಳಾಡಿಸುವ ಮೊದಲು ಕಚ್ಚುಗಳ ಮೊನಚಾಗಿ ಕೊರೆಯಲದರಾಳದಲಿ ಬೆಚ್ಚಿ ಹೊರಳಾಡುವುದು ದೋಷಿ ಬದುಕು! Original poem "Surgeons must be very careful": Surgeons must be very careful When they take the knife! Underneath their fine incisions Stirs the Culprit - Life!

ಜೀವಗಾನ / ಬಾಳ ಹಾಡು

Image
An attempt at translating to Kannada, the English poem "A Psalm of Life" by Henry Wadsworth Longfellow: ಜೀವಗಾನ / ಬಾಳ ಹಾಡು ಹೇಳದಿರಿ ನಿಮ್ಮಗಳ ಗೋಳುಗಳನೆನಗಿಂತು - "ಬಾಳಿದುವೆ ಬರಿದಾದ ಕನಸುಗಳ ಬೊಂತೆ!" ಆಳುವಾತ್ಮವು ತಾನು ಜೂಗರಿಸಲಳಿಯುವುದು, ಜಾಳವದು ಕಣ್ಕಟ್ಟು ವಿಷಯಗಳ ಸಂತೆ. ಬಾಳಿದುವೆ ನಿಜವಿಹುದು! ಬಾಳು ಹುರುಪಿನದಿಹುದು! ಹೂಳುವೆಡೆ ಗುರಿಯಲ್ಲವದರದೆಂದರಿಯೊ; ಧೂಳಕಣದಿಂ ನೀನು, ಧೂಳಿಗೇ ಮರಳುವುದು, ಹೇಳಿಕೆಯಿದಾತ್ಮಕಲ್ಲೆಂಬುದನು ತಿಳಿಯೊ. ಅತಿಸುಖದ ನಲಿವಲ್ಲ, ದುಗುಡದುಮ್ಮಳವಲ್ಲ, ಗತಿ ನಮ್ಮ ಕಡೆಯ ಗುರಿ ನಿರ್ಣಯದ ಪಥಕೆ; ಕೃತಿ ನಮ್ಮದಿಂತಿರಲಿ ಪ್ರತಿ ನಾಳೆಯಿಂ ಸಿಗಲಿ  ಮತಿಯಿಂದಿನದು ಕಲಿತು ಬೆಳೆವ ಮುನ್ನಡೆಗೆ. ಕಮ್ಮಟವು ಬಲು ಕಠಿಣ, ಕ್ಷಣಿಕ ನಮಗಿಹ ಸಮಯ ನಮ್ಮೊಳಗದಿರ್ದರೇಂ ಕೆಚ್ಚೆದೆಯ ದಾರ್ಢ್ಯ, ತಮ್ಮಟೆಯ ತೆರದಿ ತಾವೆಡಬಿಡದೆ ಬಡಿಯುವುವು ಬಿಮ್ಮೆನಿಪ ಶವಯಾತ್ರೆ ಮಸಣದೆಡೆ ನಡೆಯೆ. ಕಾಳಗದ ಪಿರಿದಾದ ಬಯಲಾಗಿ ಜಗವಿರಲು ಪಾಳೆಯದ ಶಿಬಿರವಾಗಿರೆ ನಿನ್ನ ಬದುಕು; ಸೂಳಿನೊಳ್ ಅಟ್ಟಿಸುವ ಕುರಿಮಂದೆಯಾಗದಿರು! ಬಾಳು ಕಲಿಯಾಗಿ ನೀ ಬಾಳ ಕಲಹದೊಳು! ಮುಂದಿನದ ನಂಬದಿರು ಹಿತವದೆಷ್ಟಿದ್ದರೇಂ! ಸಂದ ಗತಕಾಲ ತನ್ನಳಿವ ಹುಗಿದಿಡಲಿ! ಇಂದಿನೊಳು ಬದುಕು ನೀ, ಮಾಡಿಂದಿಗಿಹ ಕೆಲಸ, ಮಂದಿಯಾಳ್ವನು ಮೇಲೆ; ಒಳಗಾತ್ಮವಿ...