ಬಿಂದುರೇಖಾಚರಿತೆ - Birth of Graph Theory in Kannada Bhamini Shatpadi verses
Thanks to the thoughts expressed by Sri Arvind Iyer (@longhandnotes at Twitter), I got the idea of attempting a poetic interpretation of Leonhard Euler 's work that led to the birth of Graph Theory . The story of the seven bridges of Königsberg . This is what followed over the course of the next 2-3 months, a mini-kaavya of 34 verses in Kannada Bhamini Shatpadi , which I named as "Bindurekha Charite" (Bindu - Node, Rekha - Edge: The two primary ingredients of a Graph). Here are the verses: ಹಸಿರು ವನಗಳು ಹಿಮದ ಗಿರಿಗಳು ಹೊಸತು ಜೀವದ ಸೆಲೆಯ ಕಣಗಳ- ನುಸಿರೊಳಾಡಿಸಿ ಹುರಿಯ ತುಂಬಿಸೆ ಮನಕೆ ಚೇತನಕೆ ಬೆಸೆದು ರೈನಿನ ನದಿಯ ಕೋರೆಗೆ ವಸತಿ ಕಟ್ಟಿದ ಬಾಸೆಲೂರಲಿ ಹೆಸರು ಮಾಡುವ ಗಣಿತ ಗಾರುಡಿಯೊಂದು ಜನಿಸಿತ್ತು || ೧ || Where there are lush green forests and snow capped mountains that infuse freshness in the thoughts of people everyday, on the banks of river Rhine was a town named Basel, where a Mathematical genius was born. ಶತಕ ಹದಿನೆಂಟರಲಿ ಹುಟ್ಟಿದ ರತುನ ಲಿಯೊನಾರ್ಡಾಯ್ಲರೆನ್ನುವ ಸುತನು ಹಿರಿಯನು ಪಾದ್ರಿ ಪಾಲಗೆ ಮಾರ್ಗರೀಟರಿಗೆ ಮತಿಯೊಳೆಲ...