Posts

Showing posts from 2023

ಕೃಷ್ಣಸಂಭವ

Image
 An attempt at translating to Kannada, this beautiful 20-verse poetic beauty - "The Birth of Krishna" - by Sri Bhavesh Kansara (@kansaratva on Twitter): https://kansaratva.wordpress.com/2020/08/11/the-birth-of-krishna/ (Image is a picture taken of the exquisite painting by Sri Chandranath Acharya ) ಕೃಷ್ಣಸಂಭವ ಆಗಸದೊಂದುಲಿ ಶಕುನವ ಮೊಳಗಿಸಿ ಸುದ್ದಿಯನೆಲ್ಲೆಡೆಯೊದರಿಹುದು. "ಕಂಸನೆ, ಭಯದಲಿ ದಿನಗಳನೆಣಿಸಿಕೊ, ನಿನ್ನಳಿವಿನ ಹೊತ್ತಡರಿಹುದು!" ಉಲಿವನು ಕೇಳಿದ ದೊರೆ ಬಲಶಾಲಿಗೆ ಥರಥರ ನಡುಕವು ಹುಟ್ಟಿತ್ತು, ದಿಗಿಲಿಗೆ ಕಂಗಳು ಕತ್ತಲೆಗಟ್ಟಿರೆ ಶಂಕೆಯ ಬಲೆಯಾವರಿಸಿತ್ತು. ಗುರುತರದಾಜ್ಞೆಯ ಸಾರಿತು ಬಾನುಲಿ ಲೋಕವೆ ನಿಶ್ಚಲವಾಗಿರಲು, "ದೇವಕಿಯೊಡಲಿನ ಎಂಟನೆ ಬಸಿರದು ಸಿಗಿವುದು ನಿನ್ನನು ನೇಮದೊಲು." ಸ್ತಂಭಿಸಿ ನಿಂತನು ನಿರ್ದಯ ರಾಜನು ತುಂಬಿರೆ ಕತ್ತಲು, ನೀರವತೆ. ಕೇಡಿನ ಕಿಡಿಯೊಂದಿಣುಕಿತು ಮನದಲಿ "ಉಳಿಯುವುದೇತಕೆ ಸಹಜಾತೆ?" ಕೃತ್ರಿಮಹಾಸವ ಮೊಗದಲಿ ಸೂಸುತ ಹುಡುಕಿದನವಳನು ಗರಬಡಿದು ಕಂಡೊಡನೆಯೆ ತಾ ಬೀಸಿದ ಗದೆಯನು ಬೆಚ್ಚಿದ ದೇವಕಿ ಮುದುಡಿದಳು. ಬೇಡಿದ ವಸುದೇವನು ಸತಿಯುಳಿವಿಗೆ "ದೇವಕಿ ನಿನಗೇನೆಸಗಿಹಳು? ಬೇಡುವೆ ರಾಜನೆ, ಕೊಲ್ಲದಿರವಳನು ಬೇಡುವೆನೋ, ಕೇಳೆನ್ನಳಲು! ಪಡೆಯುವ ಮಕ್ಕಳನೆಲ್ಲವ ಮರೆಯದೆ ನಿನಗೊಪ್ಪ...