Posts

Showing posts with the label Architecture

ಗಡಿನಾಡ ಬೇಲೂರು ಖಿದ್ರಾಪುರ

Image
ಕರ್ನಾಟಕದಲ್ಲಿ ಶಿಲ್ಪಕಲಾ ಸೌಂದರ್ಯವನ್ನು ಉತ್ತುಂಗಕ್ಕೇರಿಸಿರುವ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನೇ ಹೋಲುವ ದೇಗುಲವೊಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಇದೆಯೆಂದರೆ ಯಾರಿಗೇ ಆದರೂ ಅಚ್ಚರಿಯಾಗದಿರದು. ಹೌದು, ಕೊಲ್ಹಾಪುರ ಜಿಲ್ಲೆಗೆ ಸೇರಿದ ಶಿರೋಳ ತಾಲ್ಲೂಕಿನ ಖಿದ್ರಾಪುರ ಎಂಬ ಸಣ್ಣ ಹಳ್ಳಿಯ "ಕೋಪೇಶ್ವರ" ಶಿವ ದೇವಾಲಯವೇ ಆ ಸ್ಮಾರಕ. ಕೃಷ್ಣಾ ನದಿಯ ದಡದಲ್ಲಿರುವ ಖಿದ್ರಾಪುರ ಕರ್ನಾಟಕಕ್ಕೆ ಅಂಟಿಕೊಂಡಂತಿರುವ ಮಹಾರಾಷ್ಟ್ರದ ಒಂದು ಹಳ್ಳಿ. ವಾಸ್ತವವಾಗಿ ಈ ಊರಿನಲ್ಲಿ ಹರಿಯುವ ಕೃಷ್ಣಾ ನದಿಯ ಒಂದು ದಡ ಮಹಾರಾಷ್ಟ್ರಕ್ಕೆ ಸೇರಿದರೆ ಮತ್ತೊಂದು ದಡ ಕರ್ನಾಟಕಕ್ಕೆ ಸೇರುತ್ತದೆ. ಹತ್ತಿರದ ಊರುಗಳಿಂದ ಎರಡೂ ರಾಜ್ಯದ ಭಕ್ತರು ಈ ದೇಗುಲಕ್ಕೆ ಹೋಗುತ್ತಾರೆ. ಶಿವರಾತ್ರಿಯ ಸಮಯದಲ್ಲಿ ಈ ದೇಗುಲ ವಿಶೇಷ ಪೂಜೆಗಳಿಂದ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತದೆ.   ಚಿತ್ರ ೧: ಕೋಪೇಶ್ವರ ಶಿವ ದೇವಾಲಯ: ಹಿಂಭಾಗದಿಂದ ಕಾಣಸಿಗುವ ಭವ್ಯ ನೋಟ ಸುತ್ತಲಿನ ಕೆಲವು ಊರುಗಳನ್ನು ಬಿಟ್ಟರೆ ಹೆಚ್ಚು ಜನರಿಗೆ ಮನೋಹರ ಶಿಲ್ಪಕಲೆಯ ಬೀಡಾದ ಖಿದ್ರಾಪುರದ ಕೋಪೇಶ್ವರ ದೇವಾಲಯದ ಬಗ್ಗೆ ತಿಳಿದಿರುವುದು ಕಡಿಮೆ. ಈ ದೇವಾಲಯವನ್ನು ಯಾರು ಯಾವಾಗ ಕಟ್ಟಿಸಿದರೆಂಬ ಸಂಪೂರ್ಣ ಮಾಹಿತಿ ಇಲ್ಲವಾದರೂ, ದೊರೆತಿರುವ ಶಾಸನಗಳ ಪ್ರಕಾರ ೭ನೇ ಶತಮಾನದಲ್ಲಿಯೇ ಇಲ್ಲಿ ಬಾದಾಮಿಯ ಚಾಲುಕ್ಯರು ದೇವಾಲಯ ಕಟ್ಟಿಸುವ ಪ್ರಯತ್ನಗಳನ್ನು ಮಾಡಿರುವುದು ಗೋಚ...

ಡಂಬಳ: ಮತ್ತೆ ಮತ್ತೆ ನೋಡಬೇಕೆನಿಸುವ ಹಂಬಲ

Image
ಹನ್ನೊಂದು ಮತ್ತೆ ಹನ್ನೆರಡನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ಮತ್ತು ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪದ ಪರಾಕಾಷ್ಠೆಯನ್ನು ಪ್ರದರ್ಶಿಸುವ ಹಲವು ದೇಗುಲಗಳಿಗೆ ಗದಗ ಜಿಲ್ಲೆ ಇಂದು ತವರೂರಾಗಿದೆ . ಇವುಗಳಲ್ಲಿ ಅತ್ಯಂತ ಸುಂದರವಾಗಿದ್ದೂ ಸಹ ಎಲೆಮರೆಯ ಕಾಯಾಗಿರುವ ಡಂಬಳ ದ ದೊಡ್ಡಬಸಪ್ಪ ದೇವಾಲಯವೂ ಒಂದು . ಡಂಬಳ ಗದಗಿನಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರವಿದ್ದು , ಮುಂಡರಗಿ ತಾಲ್ಲೂಕಿಗೆ ಸೇರಿರುವ ಒಂದು ಹಳ್ಳಿ . ಆದರೆ ಇದೇ ಡಂಬಳ ಚಾಲುಕ್ಯರ ಕಾಲಕ್ಕೆ ಮಾಸವಾಡಿನಾಡೆಂದು ಕರೆಸಿಕೊಂಡ ಪ್ರದೇಶದ ರಾಜಧಾನಿಯಾಗಿ ಮೆರೆದ ಧರ್ಮಪುರ , ಧರ್ಮೋಳ , ಧರ್ಮವೊಳಲ್ ಎಂದೆಲ್ಲಾ ಹೆಸರು ಮಾಡಿದ್ದ ಮಹಾಪಟ್ಟಣ . ಆಗಿನ ಕಾಲದ ಧಾರ್ಮಿಕ ಅನ್ಯೋನ್ಯತೆಗೆ ಹಿಡಿದ ಕನ್ನಡಿಯಂತಿದ್ದ ಡಂಬಳದ ಶಿಲ್ಪಕಲಾ ಮತ್ತು ಐತಿಹಾಸಿಕ ಹೆಚ್ಚುಗಾರಿಕೆನ್ನು ಬಿಂಬಿಸುವ ಪ್ರಯತ್ನ ಈ ಲೇಖನ . ಚಿತ್ರ ೧. ದೂರದಿಂದಲೇ ಕೈಬೀಸಿ ಕರೆಯುವ ದೊಡ್ಡಬಸಪ್ಪ ದೇವಾಲಯ ಡಂಬಳ ಮತ್ತು ಆಸುಪಾಸಿನಲ್ಲಿ ದೊರಕಿರುವ ಶಾಸನಗಳ ಪ್ರಕಾರ ಹಿಂದೆ ಈ ಹಳ್ಳಿ ಬೌದ್ಧ , ಜೈನ ಮತ್ತು ಹಿಂದೂ ಧರ್ಮಗಳ ಪೋಷಣೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿರುವುದು ಕಂಡುಬರುತ್ತದೆ . ಕ್ರಿ.ಶ. 1059 ರ ಶಾಸನದಿಂದಾಗಿ ಡಂಬಳದಲ್ಲಿ ಮೊದಲೇ ಉಪಸ್ಥಿತವಿದ್ದ ಜಿನಾಲಯವೊಂದಕ್...