Kannada Translation of Kuvempu's "The Banished Indian Patriot - Sonnet 2"
The legendary Kannada Poet, Kuppalli Venkatappa Puttappa (Kuvempu) had written a couple of sonnets in English, highlighting the patriotism of Veer Savarkar. Here's an attempt to translate the second of them to Kannada: ಮರೆತ ವೀರ ಭಾರತೀಯ - ಸಾನೆಟ್ ೨ ಅಬ್ಬರಿಸುವ ಸಾಗರಗಳೆ! ಹಬ್ಬಿರೆನ್ನ ಸುತ್ತಲೂ, ಭೋರ್ಗರೆಯುವ ತೆರೆಗಳುಬ್ಬಿ ಮೊರೆಯುತಿರಲದೆಂದಿಗೂ! ಧರೆಯ ಕಾಳ ನರಕ ನೀನು, ಓ ಕರಾಳ ದೀವಿಯೇ! ನಾಕವೆಂದೆ ಬಗೆವೆ; ಕೆರಳು! ಕೆರಳಿ ಕೆಂಡವಾಗಿಸು! ಭರತಭೂಮಿಸುತನು ನಾನು ಪರಮವೀರಚೇತನ, ಮರಣದೆದುರು ಮುಗುಳುನಗುವೆ; ರೌದ್ರದೆದುರು ರುದ್ರ ನಾ! ಅಪರಿಮೇಯದಾಚೆಗಿರುವೆ, ನಾನು ಅಗಣಿತಾತ್ಮನು; ಪೂರ್ಣರಾದ ಋಷಿಮುನಿಗಳ ಮೇರುಕುಲದೆ ಜಾತನು. ಅಳವುಗುಂದಿದೆಲರೆ ಕೇಳು, ಕೇಳಿ ಕಿಗ್ಗಡಲುಗಳೇ! ಅವನ ಸತ್ತ್ವದಿಂದ ನೀವು, ಹಿಡಿಯಲವನ ಸಾಧ್ಯವೇ? ಆ ಪರಾತ್ಪರದೊಳಗೊಂದುಗೂಡಿದಾತ್ಮ ನನ್ನದು, ಆದರೇನು? ಭಾರತೀಯನೆಂಬ ಹೆಮ್ಮೆ ಕುಂದದು! ನಾನೆ ಶರ್ವ, ನಾನೆ ಸರ್ವ; ಗಹ್ವರದೊಳು ಧುಮುಕುವೆ, ಪ್ರಾಣನಾಥನಲ್ಲಿ ಸಿಗುವ, ಸಚ್ಚಿದಾನಂದವೇ! - ವೆಂಕಟೇಶಪ್ರಸನ್ನ The original: The Banished Indian Patriot - Sonnet 2 - Kuppalli Venkatappa Puttappa (Kuvempu) Ye oceans that around me spread your vast And endless wavy bosom, roar and swell! And O thou...