Posts

Showing posts from March, 2025

ಸೋಽಹಂ

Image
Kannada translation of Kahlil Gibran's poem, "Fear": ಸೋಽಹಂ ಸಾಗರನ ಸೇರುವೆಡೆ ಸರಿತೆಗಿದೆ ದುಮ್ಮಾನ ಹೋಗಲೇತಕೆ ಮುಂದಕೆನಿಸುತಿಹ ದಿಗಿಲು. ಅಲೆಯಾಗಿ ಮರಳಿಹುದು ಸುಳಿದ ಹಾದಿಯ ನೆನಪು ಮಲೆಯ ಕುಡಿಯಿಂದ ತಾ ಭೋರ್ಗರೆದ ಹುರುಪು, ಹಲವು ಕಾನುಗಳಾಗಿ ಬಳಸಿ ಬಂದಿಹ ಹರಿವು, ಸೆಲೆಯಾಗಿ ಕೊಪ್ಪಗಳ ಸಲಹಿದ್ದ ಕುರುಹು. ಸಾಗರನು ಮುಂದಿಹನು, ಓಘದಲಿ ವಿಸ್ತರನು - ಸರಿತೆಯವನೊಳು ಲೀನಳಾಗಬೇಕು, ಮರೆತು ತನ್ನಿರುವಿಕೆಯ, ಕರಗಬೇಕು. ನಿರ್ವಾಹ ಬೇರಿಲ್ಲ ನಿರ್ವಾಣವವನಲ್ಲೆ, ಸಾಗಲಾರಳು ಸರಿತೆ ತಾನು ಹಿಂದಿರುಗಿ. ಹೋಗಲನುವಿರದಲ್ಲ ಯಾರಿಗೂ ಮರಳಿ! ಅರಿದು ಹಿಂದಿರುಗುವುದು ಈ ಜಗತ್ಸೃಷ್ಟಿಯಲಿ - ಸರಿತೆ ಭೀತಿಯನು ಬದಿಗಿರಿಸಬೇಕು, ನೆರೆದಿರುವ ಸಾಗರನ ಕೂಡಬೇಕು. ಸಾಗರನ ಸೇರುತಿರಲಂಜಿಕೆಯು ನೀಗುವುದು ಯೋಗವೆಂಬುದರರಿವು ಸರಿತೆಗಾಗುವುದು - ತಾನಳಿದು ಸಾಗರನ ಸೇರುತಿಹುದಲ್ಲವಿದು, ತಾನೆ ಸಾಗರನಾಗುತಿಹೆನೆಂಬ ತಿಳಿವು! - ವೆಂಕಟೇಶಪ್ರಸನ್ನ The original by Kahlil Gibran: Fear It is said that before entering the sea
 a river trembles with fear. She looks back at the path she has traveled,
 from the peaks of the mountains, 
the long winding road crossing forests and villages. And in front of her,
 she sees an ocean so vast,
 that to enter
there seems nothi...