Posts

Showing posts from April, 2021

Kannada re-creation of Bill Watterson's poem "Christmas Eve"

Image
I was fascinated especially by the last two lines of this beautiful and heartwarming poem "Christmas Eve" by Bill Watterson as part of his Calvin and Hobbes series and tried translating it through Indianizing, by bringing some Kannada " sogadu " in it. Here's the attempt: ಸುಗ್ಗಿಹಬ್ಬದ ಮುನ್ನ... ನಮ್ಮ ಮನೆಯಂಗಳದ ಹುಲ್ಲು ಹಾಸಿನ ಮೇಲೆ ಮುಸುಕಿಹುದು ಮುತ್ತಿನೊಲು ಹಿಮದ ಬಿಂದು, ಎಳ್ಳು ಬೆಲ್ಲದ ಕುಡಿಕೆ, ಹುಗ್ಗಿ ತಪ್ಪಲೆಯೆಲ್ಲ ಸಿಂಗರಿಸಿಕೊಂಡಿಹವು ಹಬ್ಬಕೆಂದು. ಪುಟ್ಟ ಹಣತೆಯ ಸಾಲು ಬೆಳಗಿಹವು ಹೊಸ್ತಿಲಲಿ ಕುಳಿರಿನೀ ರಾತ್ರಿಯನು ಬೆಚ್ಚಗಿಡಲು, ನೆನಪಿಟ್ಟ ಹಾಡುಗಳು, ಜನಪದದ ಗೀತೆಗಳು ಮೆಲ್ಲುಸಿರಿನಲ್ಲೆಲ್ಲೊ ಮೊಳಗುತಿರಲು. ಕೊಟ್ಟಿಗೆಯ ಗೋವುಗಳ ಉಸಿರ ದನಿ ಬೆರೆಯುವುದು ಶಿಳ್ಳೆಯಂದದಿ ತಾಳ ಚಿಟಿಕೆಯೊಡನೆ, ಮುದ್ದು ಕರು ಮಲಗಿಹುದು ಹಟ್ಟಿಯಲಿ ಮೆಲುಕುತ್ತ  ನಿದಿರೆಯಾಳದಿ ಕಂಡ ಕನಸುಗಳನೆ. ಚಳಿಗಾಳಿ ಬೀಸದರ ಮೆದುರೋಮ ನಲುಗಿರಲು ಮುದುಡಿ ಮತ್ತೊಣಹುಲ್ಲಿಗೊರಗುತಿಹುದು. ಬದಿಯಲ್ಲೆ ಕುಳಿತದನು ಎದೆಗವಚಿಕೊಂಡಿಹೆನು ಬಳಸಪ್ಪಿಕೊಳ್ಳಲದು ನಸುನಗುವುದು. ಇಂತಿರಲು ಮರುದಿನದ ಬೆಳಗ ಕಾದಿರುವೆ, ಕಾತರವನಿನ್ನು ಕೆಲ ಗಳಿಗೆ ಹಿಡಿದಿಡುವೆ.   The original poem by Bill Watterson:

ಬಿಂದುರೇಖಾಚರಿತೆ - Birth of Graph Theory in Kannada Bhamini Shatpadi verses

Image
 Thanks to the thoughts expressed by Sri Arvind Iyer (@longhandnotes at Twitter), I got the idea of attempting a poetic interpretation of Leonhard Euler 's work that led to the birth of Graph Theory . The story of the seven bridges of  Königsberg . This is what followed over the course of the next 2-3 months, a mini-kaavya of 34 verses in Kannada Bhamini Shatpadi , which I named as "Bindurekha Charite" (Bindu - Node, Rekha - Edge: The two primary ingredients of a Graph). Here are the verses: ಹಸಿರು ವನಗಳು ಹಿಮದ ಗಿರಿಗಳು ಹೊಸತು ಜೀವದ ಸೆಲೆಯ ಕಣಗಳ- ನುಸಿರೊಳಾಡಿಸಿ ಹುರಿಯ ತುಂಬಿಸೆ ಮನಕೆ ಚೇತನಕೆ ಬೆಸೆದು ರೈನಿನ ನದಿಯ ಕೋರೆಗೆ ವಸತಿ ಕಟ್ಟಿದ ಬಾಸೆಲೂರಲಿ ಹೆಸರು ಮಾಡುವ ಗಣಿತ ಗಾರುಡಿಯೊಂದು ಜನಿಸಿತ್ತು || ೧ || Where there are lush green forests and snow capped mountains that infuse freshness in the thoughts of people everyday, on the banks of river Rhine was a town named Basel, where a Mathematical genius was born. ಶತಕ ಹದಿನೆಂಟರಲಿ ಹುಟ್ಟಿದ ರತುನ ಲಿಯೊನಾರ್ಡಾಯ್ಲರೆನ್ನುವ ಸುತನು ಹಿರಿಯನು ಪಾದ್ರಿ ಪಾಲಗೆ ಮಾರ್ಗರೀಟರಿಗೆ ಮತಿಯೊಳೆಲ...

Kannada Translation of Dr. Chandana Sri's poem Phases of the Moon

Image
Here's an attempt at translating Dr. Chandana Sri 's beautiful poem "Phases of the Moon" to Kannada. I also thank her for her inputs during the translation. The original is right below the translation attempt: ಚಂದ್ರಾಯಣ ಇರುಳಿನಾಗಸವನ್ನು ತುಂಬಿ ಬರುತಿಹ ಚಂದ್ರ ಒಲವೆಂಬ ಚಂಚಲತೆಗೊತ್ತಾಸೆಯೇ? ಶೂನ್ಯದಿಂ ಮೂಡಿರುವ ತೆಳುವಾದ ಗುರುತೊಂದು ಕಂಡರೂ ಕಾಣದೊಲು ಮಿನುಗಿಲ್ಲವೇ? ಭರವಸೆಯು ಮೈಗೂಡಿ ಮೆಲ್ಲಗದು ಹೆಚ್ಚಾಗಿ ಅರ್ಧಚಂದ್ರಾಕೃತಿಯ ತಲುಪುತಿಹುದು, ಸಂಯಮದ ಬೆಳವಣಿಗೆ ತೋರುತ್ತ ಬಲಿತಿರಲು ಹುಣ್ಣಿಮೆಯ ಜಾಜ್ವಲ್ಯ ಕಾಂತಿಯಿಹುದು! ಆ ವಿಪುಲ ವೈಭವವು ದಿನವೊಂದರಷ್ಟಿದ್ದು ಕರಗುವುದು ಗೆರೆಗೆರೆಯೆ ಮರೆಯಾಗಲು, ಕನಿಕರವ ತೋರದೆಯೆ ಕಾಲ ತರಿದಿರಲದನು ದಿನದಿನಕೆ ಹಿಂಜರಿವ ಪ್ರಭೆಯ ಹೊನಲು. ಕೊನೆಗೊಮ್ಮೆ ಕತ್ತಲೆಯೆ, ಕಾಣದಂತಾಗಲದು ಚರಮವಾಕ್ಯವ ಬರೆವ ತವಕ ಬೇಡ ಮತ್ತೊಮ್ಮೆ ಕುಡಿನೋಟ ತೋರುತ್ತ ಹೊಮ್ಮುವುದು ತಪ್ಪೆಸಗಿ ಮರುಗುವೊಲು ನಲುಗಿ, ನೋಡ! ಕುಂದುಗಳ ಸರಿಪಡಿಸಲೆಂಬಂತೆ ನಿರ್ಧರಿಸಿ ಸರಿದೂಗಿಸುವ ಮತ್ತೆ ಬೆಳೆದು ದಿನವೂ, ಬೆಳೆದು ಕುಂದುವುದೇಕೆ? ಕುಂದಿ ಬೆಳೆಯುವುದೇಕೆ? ನೋವಿಗೆಡೆಯಾಗಿಸಿರಲೇಕೆ ನಲಿವು? ಕೀಟಲೆಯಿದೆನ್ನುವರು, ನನಗೆ ನಿಶ್ಚಯವಿಲ್ಲ, ನೆರಳು-ಬೆಳಕುಗಳಾಟ ಹಳೆಯದಂತೆ; ಹಳೆಯ ನಾಟಕವಿದುವೆ ನಟವರ್ಗ ಪರಿಚಿತವೆ, ತನ್ನ ಪಾತ್ರಕೆ ಚಂದ್ರ ನಿಷ್ಠನಂತೆ....