Here's an attempt at translating Dr. Chandana Sri's beautiful poem "Phases of the Moon" to Kannada. I also thank her for her inputs during the translation. The original is right below the translation attempt:
ಚಂದ್ರಾಯಣ
ಇರುಳಿನಾಗಸವನ್ನು ತುಂಬಿ ಬರುತಿಹ ಚಂದ್ರ
ಒಲವೆಂಬ ಚಂಚಲತೆಗೊತ್ತಾಸೆಯೇ?
ಶೂನ್ಯದಿಂ ಮೂಡಿರುವ ತೆಳುವಾದ ಗುರುತೊಂದು
ಕಂಡರೂ ಕಾಣದೊಲು ಮಿನುಗಿಲ್ಲವೇ?
ಭರವಸೆಯು ಮೈಗೂಡಿ ಮೆಲ್ಲಗದು ಹೆಚ್ಚಾಗಿ
ಅರ್ಧಚಂದ್ರಾಕೃತಿಯ ತಲುಪುತಿಹುದು,
ಸಂಯಮದ ಬೆಳವಣಿಗೆ ತೋರುತ್ತ ಬಲಿತಿರಲು
ಹುಣ್ಣಿಮೆಯ ಜಾಜ್ವಲ್ಯ ಕಾಂತಿಯಿಹುದು!
ಆ ವಿಪುಲ ವೈಭವವು ದಿನವೊಂದರಷ್ಟಿದ್ದು
ಕರಗುವುದು ಗೆರೆಗೆರೆಯೆ ಮರೆಯಾಗಲು,
ಕನಿಕರವ ತೋರದೆಯೆ ಕಾಲ ತರಿದಿರಲದನು
ದಿನದಿನಕೆ ಹಿಂಜರಿವ ಪ್ರಭೆಯ ಹೊನಲು.
ಕೊನೆಗೊಮ್ಮೆ ಕತ್ತಲೆಯೆ, ಕಾಣದಂತಾಗಲದು
ಚರಮವಾಕ್ಯವ ಬರೆವ ತವಕ ಬೇಡ
ಮತ್ತೊಮ್ಮೆ ಕುಡಿನೋಟ ತೋರುತ್ತ ಹೊಮ್ಮುವುದು
ತಪ್ಪೆಸಗಿ ಮರುಗುವೊಲು ನಲುಗಿ, ನೋಡ!
ಕುಂದುಗಳ ಸರಿಪಡಿಸಲೆಂಬಂತೆ ನಿರ್ಧರಿಸಿ
ಸರಿದೂಗಿಸುವ ಮತ್ತೆ ಬೆಳೆದು ದಿನವೂ,
ಬೆಳೆದು ಕುಂದುವುದೇಕೆ? ಕುಂದಿ ಬೆಳೆಯುವುದೇಕೆ?
ನೋವಿಗೆಡೆಯಾಗಿಸಿರಲೇಕೆ ನಲಿವು?
ಕೀಟಲೆಯಿದೆನ್ನುವರು, ನನಗೆ ನಿಶ್ಚಯವಿಲ್ಲ,
ನೆರಳು-ಬೆಳಕುಗಳಾಟ ಹಳೆಯದಂತೆ;
ಹಳೆಯ ನಾಟಕವಿದುವೆ ನಟವರ್ಗ ಪರಿಚಿತವೆ,
ತನ್ನ ಪಾತ್ರಕೆ ಚಂದ್ರ ನಿಷ್ಠನಂತೆ.
The original poem by Dr Chandana Sri:
"Phases of the Moon"
Comments