Posts

Showing posts from August, 2016

ಹಾಡು ಹಕ್ಕಿ - Kannada Translation of "A Minor Bird" by Robert Frost

Image
Here is an old attempt to translate Robert Frost's poem "A Minor Bird" to Kannada: ಹಾಡು ಹಕ್ಕಿ ಹಕ್ಕಿಯೊಂದು ಮನೆಯ ಸನಿಹ ದಿನವೂ ಹಾಡಿ ನಲಿಯುವಾಗ ದೂರ ಹಾರಿ ಹೋಗಲೆಂದು ನಾನು ಆಶಿಸಿದ್ದಿದೆ; ಮನೆಯ ಬಾಗಿಲಲ್ಲಿ ನಿಂತು ಕೈಯ ತಟ್ಟಿ ಕೂಗು ಹಾಕಿ ತಾಳಲಾರೆನಿನ್ನು ಎಂದು ಗೊತ್ತು ಮಾಡಿಸಿದ್ದಿದೆ. ಕೆಲ ಮಟ್ಟಿನ ಕುಂದುಕೊರತೆ ಇರಲು ಸಾಕು ನನ್ನೊಳಗೂ ಹಕ್ಕಿಯ ಶಾರೀರವನ್ನೆ ಹಳಿವುದೆಂದೂ ಸಲ್ಲದು. ಗಾನ ಯಾವುದಾದರೇನು ಮೌನಗೊಳಿಸುವಿಚ್ಛೆಯಿರುವ ಖಚಿತ ದೋಷವದೇನೆಂದು ಮನವೇ ಬಲ್ಲದು. -ವೆಂಕಟೇಶಪ್ರಸನ್ನ A Minor Bird I have wished a bird would fly away, And not sing by my house all day; Have clapped my hands at him from the door When it seemed as if I could bear no more. The fault must partly have been in me. The bird was not to blame for his key. And of course there must be something wrong In wanting to silence any song.

ಸ್ವೀಕಾರ - Kannada Translation of "Acceptance" by Robert Frost

Image
Here is an old attempt to translate Robert Frost's poem " Acceptance " to Kannada: ಸ್ವೀಕಾರ  ಮುಗಿದ ಸೂರ್ಯ ತನ್ನ ಸುಡುವ ಕಿರಣಗಳ ಕೆಮ್ಮುಗಿಲಿನತ್ತ ಹರಿಸಿ ಕೆಂಡ ಕಾರುತ್ತ ಮುಳುಗಿ ಹೋಗುವನು ಕಡಲ ತಡಿಯೊಂದನರಸಿ. ಜಗದ ಜೀವಿಗಳು ಜರುಗಿದೀ ಕ್ರಿಯೆಗೆ ಜೋರು ದನಿಯನೇನೆತ್ತವು, ಕಡೆಯ ಪಕ್ಷ ಬಾನಾಡಿಗಳಿಗೆ ಆಗಿರಲೇಬೇಕು ಇದರರ್ಥವು - ಆಗಸದ ಬೆಳಕ ಕತ್ತಲಾಗಿಸುವ ಸಮಯವಾಯಿತೀಗೆಂದು. ನಿಶ್ಶಬ್ದವಾಗಿ ಮನದಾಳದಲ್ಲೇ ಗೊಣಗುತ್ತ ಗುಬ್ಬಿಯೊಂದು ತೂಕಡಿಕೆ ಬಂದ ಕಣ್ಣೆವೆಗಳನ್ನು ಮುಚ್ಚಲಾರಂಭಿಸುವುದು. ಗೂಡಿನಿಂದ ಬಲು ದೂರ ಹೋದ ಮತ್ತೊಂದು ಮರೆತ ಹಕ್ಕಿ ಪೊದೆಗಳೆತ್ತರವೆ ಹಾರುತ್ತಲಿರುವುದು ಮರಳಿ ಬರುವಾಸೆಯುಕ್ಕಿ; ಧಾವಂತದಿಂದ ನೆನಪಿಟ್ಟ ಮರವ ತಲುಪಿ ಸಮಯದೊಳಗೆ, ಏದುಸಿರು ಬಿಟ್ಟು ಚಿಂತಿಸುವುದಿಂತು ಮೆಲ್ಲನೆ ಮನದೊಳಗೆ - `ರಕ್ಷಿತನು ನಾನು, ಇನ್ನಿಂದು ರಾತ್ರಿ ಕತ್ತಲೆಯು ಆವರಿಸಲಿ, ಈ ರಾತ್ರಿಯಿನ್ನು ಕಗ್ಗತ್ತಲಾಗಿ ನನಗೇನೂ ಕಾಣದಿರಲಿ. ಮುಂದೇನು ಎಂದು ಕಾಣುವುದೇ ಬೇಡ; ಆಗುವುದು ಆಗುತಿರಲಿ'. - ವೆಂಕಟೇಶಪ್ರಸನ್ನ Original poem by Robert Frost: Acceptance When the spent sun throws up its rays on cloud And goes down burning into the gulf below, No voice in nature is heard to cry aloud At ...