ಸ್ವೀಕಾರ - Kannada Translation of "Acceptance" by Robert Frost

Here is an old attempt to translate Robert Frost's poem "Acceptance" to Kannada:

ಸ್ವೀಕಾರ 

ಮುಗಿದ ಸೂರ್ಯ ತನ್ನ ಸುಡುವ ಕಿರಣಗಳ ಕೆಮ್ಮುಗಿಲಿನತ್ತ ಹರಿಸಿ
ಕೆಂಡ ಕಾರುತ್ತ ಮುಳುಗಿ ಹೋಗುವನು ಕಡಲ ತಡಿಯೊಂದನರಸಿ.
ಜಗದ ಜೀವಿಗಳು ಜರುಗಿದೀ ಕ್ರಿಯೆಗೆ ಜೋರು ದನಿಯನೇನೆತ್ತವು,
ಕಡೆಯ ಪಕ್ಷ ಬಾನಾಡಿಗಳಿಗೆ ಆಗಿರಲೇಬೇಕು ಇದರರ್ಥವು -
ಆಗಸದ ಬೆಳಕ ಕತ್ತಲಾಗಿಸುವ ಸಮಯವಾಯಿತೀಗೆಂದು.
ನಿಶ್ಶಬ್ದವಾಗಿ ಮನದಾಳದಲ್ಲೇ ಗೊಣಗುತ್ತ ಗುಬ್ಬಿಯೊಂದು
ತೂಕಡಿಕೆ ಬಂದ ಕಣ್ಣೆವೆಗಳನ್ನು ಮುಚ್ಚಲಾರಂಭಿಸುವುದು.
ಗೂಡಿನಿಂದ ಬಲು ದೂರ ಹೋದ ಮತ್ತೊಂದು ಮರೆತ ಹಕ್ಕಿ
ಪೊದೆಗಳೆತ್ತರವೆ ಹಾರುತ್ತಲಿರುವುದು ಮರಳಿ ಬರುವಾಸೆಯುಕ್ಕಿ;
ಧಾವಂತದಿಂದ ನೆನಪಿಟ್ಟ ಮರವ ತಲುಪಿ ಸಮಯದೊಳಗೆ,
ಏದುಸಿರು ಬಿಟ್ಟು ಚಿಂತಿಸುವುದಿಂತು ಮೆಲ್ಲನೆ ಮನದೊಳಗೆ -
`ರಕ್ಷಿತನು ನಾನು, ಇನ್ನಿಂದು ರಾತ್ರಿ ಕತ್ತಲೆಯು ಆವರಿಸಲಿ,
ಈ ರಾತ್ರಿಯಿನ್ನು ಕಗ್ಗತ್ತಲಾಗಿ ನನಗೇನೂ ಕಾಣದಿರಲಿ.
ಮುಂದೇನು ಎಂದು ಕಾಣುವುದೇ ಬೇಡ; ಆಗುವುದು ಆಗುತಿರಲಿ'.

- ವೆಂಕಟೇಶಪ್ರಸನ್ನ


Original poem by Robert Frost:

Acceptance

When the spent sun throws up its rays on cloud
And goes down burning into the gulf below,
No voice in nature is heard to cry aloud
At what has happened. Birds, at least must know
It is the change to darkness in the sky.
Murmuring something quiet in her breast,
One bird begins to close a faded eye;
Or overtaken too far from his nest,
Hurrying low above the grove, some waif
Swoops just in time to his remembered tree.
At most he thinks or twitters softly, 'Safe!
Now let the night be dark for all of me.
Let the night be too dark for me to see
Into the future. Let what will be, be.'



Comments