Kannada Translation of Saxon White Kessinger's "Indispensable Man"
An attempt at translating to Kannada, the English poem " Indispensable Man " by Saxon White Kessinger ಅನಿವಾರ್ಯ ಮನುಜ ಕೆಲವೊಮ್ಮೆ ನಿನ್ನಗ್ಗಳಿಕೆಯ ನೀನೆಣಿಸಿರಲು ಕೆಲವೊಮ್ಮೆ ನಿನ್ನ ಅಹಮಿಕೆಯು ತಾನರಳಿರಲು ಕೆಲವೊಮ್ಮೆ ನಿನ್ನ ಒಡನಿರುವರೆಲ್ಲರ ನಡುವೆ ಬಲುದಕ್ಷ ನೀನೆಂದು ನೀನೆ ನಿರ್ಧರಿಸಿರಲು ಕೆಲವೊಮ್ಮೆ ನೀನೆಲ್ಲವನು ಬಿಟ್ಟು ಹೊರನಡೆಯೆ ಕಳೆದ ನಷ್ಟವ ತುಂಬಲಾಗದೆಂದೆಣಿಸಿರಲು ಕೆಳಗಿರುವ ಸೂತ್ರಗಳನನುಸರಿಸಿ ತಿಳಿ ನಿನ್ನ ಒಳಗಿರುವ ಸೊಕ್ಕನವು ಅಡಗಿಸುವ ಪರಿಯ ಕೊಳಗವೊಂದನು ತಂದು ಬಹಳ ನೀರನು ತುಂಬಿ ಮುಳುಗಿಸುತ ನಿನ್ನ ಕೈ ಮಣಿಕಟ್ಟು ನೆನೆಸಿ ಬಳಿಕ ಕೈಯನು ಹೊರಗೆ ತೆಗೆದಾಗಲುಳಿವಂಥ ಕುಳಿಯಷ್ಟೆ ಕಾಡುವುದು ನಿನ್ನ ಕೊರತೆ ಒಳಹೊಗುವ ಸಮಯದಲಿ ಅಪ್ಪಳಿಸಿ ಜೋರಾಗಿ ಕಲಕಿ ಕೋಲಾಹಲವ ನೀನೆಬ್ಬಿಸಲುಬಹುದು ನಿಲಿಸೆ ನೀನಾಕ್ಷಣವೆ ಕಾಣಬಲ್ಲೆಯೊ ಮತ್ತೆ ಚಲನೆ ನಿಂತಿಹ ನೀರು ಮೊದಲಿನಂತಿಹುದು ಇನಿತು ನೀತಿಯದಿಹುದು ಈ ನಿದರ್ಶನದೊಳಗೆ ನಿನಗಾಗುವಷ್ಟ ನೀ ಮಾಡಿ ನುಣುಪಾಗಿ ನೆನಪಿನಲ್ಲಿಡು ವಿಷಯ ಹೆಮ್ಮೆಯಿಂದಿರುತಿರ್ದು ಅನಿವಾರ್ಯವೆಂದೆನಿಪ ಮನುಜನಾರಿಲ್ಲ Original poem "Indispensable Man" by Saxon White Kessinger Sometime when you’re feeling important; Sometime when your ego’s in bloom Som...