An attempt at translating to Kannada, the English poem "Indispensable Man" by Saxon White Kessinger
Original poem "Indispensable Man" by Saxon White Kessinger
ಅನಿವಾರ್ಯ ಮನುಜ
ಕೆಲವೊಮ್ಮೆ ನಿನ್ನಗ್ಗಳಿಕೆಯ ನೀನೆಣಿಸಿರಲು
ಕೆಲವೊಮ್ಮೆ ನಿನ್ನ ಅಹಮಿಕೆಯು ತಾನರಳಿರಲು
ಕೆಲವೊಮ್ಮೆ ನಿನ್ನ ಒಡನಿರುವರೆಲ್ಲರ ನಡುವೆ
ಬಲುದಕ್ಷ ನೀನೆಂದು ನೀನೆ ನಿರ್ಧರಿಸಿರಲು
ಕೆಲವೊಮ್ಮೆ ನೀನೆಲ್ಲವನು ಬಿಟ್ಟು ಹೊರನಡೆಯೆ
ಕಳೆದ ನಷ್ಟವ ತುಂಬಲಾಗದೆಂದೆಣಿಸಿರಲು
ಕೆಳಗಿರುವ ಸೂತ್ರಗಳನನುಸರಿಸಿ ತಿಳಿ ನಿನ್ನ
ಒಳಗಿರುವ ಸೊಕ್ಕನವು ಅಡಗಿಸುವ ಪರಿಯ
ಕೊಳಗವೊಂದನು ತಂದು ಬಹಳ ನೀರನು ತುಂಬಿ
ಮುಳುಗಿಸುತ ನಿನ್ನ ಕೈ ಮಣಿಕಟ್ಟು ನೆನೆಸಿ
ಬಳಿಕ ಕೈಯನು ಹೊರಗೆ ತೆಗೆದಾಗಲುಳಿವಂಥ
ಕುಳಿಯಷ್ಟೆ ಕಾಡುವುದು ನಿನ್ನ ಕೊರತೆ
ಒಳಹೊಗುವ ಸಮಯದಲಿ ಅಪ್ಪಳಿಸಿ ಜೋರಾಗಿ
ಕಲಕಿ ಕೋಲಾಹಲವ ನೀನೆಬ್ಬಿಸಲುಬಹುದು
ನಿಲಿಸೆ ನೀನಾಕ್ಷಣವೆ ಕಾಣಬಲ್ಲೆಯೊ ಮತ್ತೆ
ಚಲನೆ ನಿಂತಿಹ ನೀರು ಮೊದಲಿನಂತಿಹುದು
ಇನಿತು ನೀತಿಯದಿಹುದು ಈ ನಿದರ್ಶನದೊಳಗೆ
ನಿನಗಾಗುವಷ್ಟ ನೀ ಮಾಡಿ ನುಣುಪಾಗಿ
ನೆನಪಿನಲ್ಲಿಡು ವಿಷಯ ಹೆಮ್ಮೆಯಿಂದಿರುತಿರ್ದು
ಅನಿವಾರ್ಯವೆಂದೆನಿಪ ಮನುಜನಾರಿಲ್ಲ
Original poem "Indispensable Man" by Saxon White Kessinger
Sometime when you’re feeling important;
Sometime when your ego’s in bloom
Sometime when you take it for granted
You’re the best qualified in the room,
Sometime when you feel that your going
Would leave an unfillable hole,
Just follow these simple instructions
And see how they humble your soul;
Take a bucket and fill it with water,
Put your hand in it up to the wrist,
Pull it out and the hole that’s remaining
Is a measure of how you’ll be missed.
You can splash all you wish when you enter,
You may stir up the water galore,
But stop and you’ll find that in no time
It looks quite the same as before.
The moral of this quaint example
Is do just the best that you can,
Be proud of yourself but remember,
There’s no indispensable man.
Comments