Kannada translation of this rare gem of a sonnet, "Thoughts on a Birthday", by Prof. M. Hiriyanna, the eminent Indian philosopher and scholar.
ಪಯಣ
ಪಯಣದ ಹಾದಿಯು ನೋವಿನದೆನ್ನುವ ಯೋಚನೆಯೆನ್ನನು ಕೊರೆದಿಹುದು,ನೀರಿನ ಚಿಲುಮೆಯೊ, ತೋಪಿನ ನೆರಳೋ ಕಾಣದ ಬರಡಿನ ಪಥವಿಹುದು.
ನನ್ನಯ ಚೇತನವನು ತಣಿಸುವ ತೆರನಾಗಿಹ ತಾಣವು ಕಂಡಿಲ್ಲ,
ಕೆಡುಕುಗಳನೆ ಕಂಡರಿತಿಹ ಜೀವಕೆ ಬಿಡುಗಡೆಯೆಂಬುದು ದೊರೆತಿಲ್ಲ!
ಪಾಠವನೊಂದನು ಕಲಿಸಿದೆ ಜೀವನ, ಸಂಶಯವೆನಗದರೊಳಗಿಲ್ಲ.
ಬಾಡಿಸಲೆಂದೇ ಮಾಡಿಹನೆನ್ನನು, ನನಗದು ಮೊದಲೇ ಗೊತ್ತಲ್ಲ!
ಬೇನೆಗಳಿರಲೂ ಬಳಲಿಕೆಯಿರಲೂ ನಿಲ್ಲದೆ ನಾ ಮುನ್ನಡೆದಿದ್ದೆ,
ಅಕ್ಕರೆಯಲಿ ದಾರಿಯ ತೋರುವರಿರೆ ಹದುಳವದೆನಗೆಂದೆಣಿಸಿದ್ದೆ.
ಕಸಿದಿಹನದನೂ, ಬಾಳಿನ ಬವಣೆಯ ಹೊರುವುದು ಸಾಧ್ಯವೆ? ತಿಳಿದಿಲ್ಲ.
ಸಡಗರವಿಲ್ಲದೆ ಹೆಜ್ಜೆಯ ಹಾಕಿರೆ ತಲೆಯೇ ತಿರುಗುತಲಿದೆಯಲ್ಲ!
ಮುಂದಡಿಯಿಡುವುದ ನಿಲ್ಲಿಸಲಾರೆನು, ದಿನಗಳು ಮುಂದಿವೆ ಕಷ್ಟದವು,
ಹೊರಡುವೆನೀಗಲೆ, ತೊಡಗಿಸಿಕೊಳ್ಳುವೆ - ಕರ್ತವ್ಯದ ಕಡೆಗೆನ್ನೊಲವು.
ಹೊಣೆಗಳನೆಲ್ಲವ ನೆರವೇರಿಸುವೆನು - ನಡೆವೆನು ನಾನಲ್ಲಿಯವರೆಗೆ,
ಹೊಣೆಗೇಡಿತನವು ಎಡೆಯಾಗಿಸುವುದು ಮತ್ತೂ ಹೆಚ್ಚಿನ ಯಾತನೆಗೆ!
The original by Prof. M. Hiriyanna:
Thoughts on a Birthday
My path - alas! how painful is its thought! -
Had not a single spring or place of shade
Wherein my soul in gladness could be laid,
Be freed from what on it had evil wrought.
Thus all the way, one lesson I was taught -
The one I know - that I was made to fade.
But still, tho' tired, I walked for still I had
A comfort in a loving guide that sought
To lead me. Now, that lost, I too much feel
The burden of my life. No more I fain
Would walk - so much my head doth seem to reel -
But walk I must. So let me start again,
Walk till my duty is done; for to steal
From Duty's to make way for greater pain.
Comments