Calvin as Shiva


ಹೆಸರು ಮಾಡಿಹ ಜನರು ಕಸಿ ಚಿಕಿತ್ಸೆಗೆ ಬಾಗಿ
ಹುಸಿನಗುತ ಬಾಳುತಿರೆ ತಾಯೆ ಹೇಳೆನಗೆ
ಸೊಸೆ ಭವಾನಿಯ ಹುಲಿಯ ಜೊತೆಯಲಾಡುವ ನಾನು
ಬೆಸೆದು ಕಣ್ಣಿನ್ನೊಂದ ಶಿವನಾಗಲೇ?

ಹೆಸರು ಮಾಡಿಹ ಜನರು ಕಸಿ ಚಿಕಿತ್ಸೆಗೆ ಬಾಗಿ
ಹುಸಿನಗುತ ಬಾಳುತಿರೆ ತಾಯೆ ಹೇಳೆನಗೆ
ನೊಸಲಿನೊಳು ಮೂರನೆಯ ಕಣ್ಣ ಬೆಸೆಯಿಸಿ ನಾನು
ರಸಿಕ ಕಾಮನ ಸುಟ್ಟ ಶಿವನಾಗಲೇ?

Comments