Kannada Translation of Robert Frost's Fireflies in the Garden

An attempt at translating the poem "Fireflies in the Garden" by Robert Frost to Kannada:

 ತೋಟದ ಮಿಂಚುಹುಳಗಳು


ಬಾನನು ತುಂಬುತ ಬಂದಿವೆ ನೋಡಿರಿ ತಾರೆಗಳಪ್ಪಟ ಥಳಥಳಿಸಿ,

ಹಾರುತ ಬಂದಿವೆ ಮಿಂಚಿನ ಹುಳಗಳು ಧರೆಯೊಳಗವುಗಳನನುಕರಿಸಿ.

ಹೋಲಿಸಿ ನೋಡಿರಲಳತೆಯಲೆಂದೂ ತಾರೆಗೆ ಸಾಟಿಯವಾಗದವು;

ವಾಸ್ತವವಿದುವೇ, ಅಂತಃಕರಣದಿ ಸುತರಾಂ ತಾರೆಗಳಲ್ಲವವು.

ಅಂದೋ ಇಂದೋ ತಾರೆಗಳಂದದ ಆದಿಯನೇನೋ ಗಳಿಸುವುವು.

ಆದರೆ ನಿಶ್ಚಿತ, ಆ ಪರಿ ಥಳಕನು ಕಾಪಿಡಲಾಗದೆ ಕುಂದುವುವು.




The original by Robert Frost:

Fireflies in the Garden

Here come real stars to fill the upper skies,
And here on earth come emulating flies,
That though they never equal stars in size,
(And they were never really stars at heart)
Achieve at times a very star-like start.
Only, of course, they can’t sustain the part.



Comments