ಅಲರು - Kannada translation of Alfred Lord Tennyson's "The Flower"

An attempt at translating Alfred Lord Tennyson's poem, "The Flower":


ಅಲರು


ಗಳಿಗೆಯು ಹೊನ್ನಿನದೆನಿಸಿತ್ತು,
ಇಳೆಗಿರಿಸಿದೆ ನಾನೀ ಬಿತ್ತು.
ಬೆಳೆದಿತ್ತದರಿಂದೊಂದಲರು,
ಕಳೆಯದು ಕೀಳೆಂದರು ಜನರು.

ಸುಳಿದಾಡುತಲೆನ್ನಂಗಳದಿ
ತಳಿರಿನ ತೋಪಿನ ಹಂದರದಿ
ಹಳಿದರು ಗೊಣಗುತ ನನ್ನನ್ನು,
ನಳನಳಿಸುವ ನನ್ನಲರನ್ನೂ!

ಬೆಳಯಿತದೆತ್ತರಕೆತ್ತರಕೆ
ಬೆಳಗಿತು ತೋಟವ ಕಾಂತಿಶಿಖೆ!
ದುರುಳರು ಬೇಲಿಯನೆಗರಿದರು,
ಇರುಳಲಿ ಬಿತ್ತವ ಕಳವಿದರು.

ಬಿತ್ತಿದರದನೆಲ್ಲೆಡೆಗಳಲಿ
ಸುತ್ತಲಿನೂರಲಿ, ಪೊದೆಗಳಲಿ.
ಎತ್ತರದುಲಿಯಲಿ ಜನರೆಲ್ಲ,
ಉತ್ತಮವೀ ಹೂವೆಂದರಲ!

ಗೆಳೆಯನೆ, ನನ್ನೀ ಕಥೆ ಕೇಳು,
ತಿಳಿಯಾಗಿದೆ ಇದರೊಳತಿರುಳು.
ಮೊಳಕೆಯು ಈಗೆಲ್ಲೆಡೆ ಲಭ್ಯ,
ಬೆಳೆಸಲು ಹಲರಿಗೆ ಸುಖಸಾಧ್ಯ.

ಚೆಲುವಿನ ಹೂಗಳು ಕೆಲವಿಹವು,
ಕೆಲವಲರುಗಳೋ ಕಳಪೆಯವು.
ಹಳಿಯುವ ಜನರೂ ಮರಳಿಹರು, 
ಕಳೆಯೆನ್ನುತ ಹೀಗಳೆದಿಹರು.





The original:

The Flower

Once in a golden hour I cast to earth a seed. Up there came a flower, The people said, a weed. To and fro they went Thro' my garden bower, And muttering discontent Cursed me and my flower. Then it grew so tall It wore a crown of light, But thieves from o'er the wall Stole the seed by night. Sow'd it far and wide By every town and tower, Till all the people cried, "Splendid is the flower!" Read my little fable: He that runs may read. Most can raise the flowers now, For all have got the seed. And some are pretty enough, And some are poor indeed; And now again the people Call it but a weed.

Comments