Posts

Hoysala Expedition Part 47: Kedareshwara Temple, Balligave

Image
Well, a Hoysala Temple Write-Up after a long time, and not entirely "Hoysala" for that matter too. This is a long pending blog post about the temple that stands as testimony to "the handing over of the baton", so to speak, from the Kalyani Chalukya Architecture to the Hoysala Architecture - The Kedareshwara Temple in Balligave , Shikaripura Taluk in Shivamogga . The town of Balligave must be celebrated as one of the most important centers of art and architecture in the history of Karnataka. After all, this is the birth place of Shantala Devi , a great exponent of the traditional Indian dance forms, a devout Jain, and the Queen of Hoysala King Vishnuvardhana . This is where the best of the sculptors of the later Kalyani Chalukya era and the initial Hoysala era hailed from - Dasoja, Malloja, Maniyoja, Siddoja, Nadoja and more. This is where they got their hands on a huge mine of soapstone (Chlorite Schist) that took the beauty and the possibilities of int...

ಮಂಜಿನ ಸಂಜೆಯ ಅರಣ್ಯವಾಸ್ತವ್ಯ - Kannada Translation of "Stopping By Woods on a Snowy Evening" by Robert Frost

Image
An old attempt at translation of Robert Frost's poem "Stopping By Woods on a Snowy Evening" to Kannada: ಮಂಜಿನ ಸಂಜೆಯ ಅರಣ್ಯವಾಸ್ತವ್ಯ ಅಡವಿಯಿದು ಯಾರದೆಂದಿದೆಯೆನಗೆ ಅರಿವು ಹಳ್ಳಿಮನೆಯೊಳಗುಂಟು ಇದರೊಡೆಯನಿರವು ನಾನಿಲ್ಲಿ ತಂಗಿದ್ದನವ ತಿಳಿಯಲಾರ - ನೋಡುತ್ತ ಅವನಡವಿಯ ಮಂಜು ಮುಸುಕಿದ ಹರವು ವಿಚಿತ್ರವೆನಿಸಬಹುದೆನ್ನ ತೇಜಿಗೀ ವ್ಯವಹಾರ ಹೊಲಮನೆಯಂಗಳವಿಲ್ಲದೆಡೆ ಬಿಡಾರ ಹೆಪ್ಪುಗಟ್ಟಿದ ಹಳ್ಳ ಅಡವಿಗಳ ನಡುವೆ ಅತಿಕರಾಳ ಸಂಜೆಯಂದು ತಳೆದ ಈ ನಿರ್ಧಾರ ರಿಂಗಣಿಸಿದೆ ಹೂಡುಗಂಟೆ ಮೈಯನೊಮ್ಮೆ ಕೊಡವೆ ತಪ್ಪಾಗಿದೆಯೇನೊ, ಒಮ್ಮೆ ನೋಡೆಂಬ ಗೊಡವೆ ಸುತ್ತಲಿನ ಪರಿಸರ ಬಹಳಷ್ಟು ಪ್ರಸನ್ನ ಹಗುರ ಹವೆ ಹಿಮಪಾತ, ಉಳಿದಂತೆ ಜಡವೆ ಕತ್ತಲಿದೆ ಗಹನವಿದೆ ಅಡವಿಯಿರಬಹುದು ಚೆನ್ನ ನಡೆಸುವುದಿದೆ ಕೊಟ್ಟ ಹಲವು ಮಾತುಗಳನ್ನ ಮೈಲುಗಳ ಪಯಣವಿದೆ ಕಣ್ಣ ಮುಚ್ಚುವ ಮುನ್ನ ಮೈಲುಗಳ ಪಯಣವಿದೆ ಕಣ್ಣ ಮುಚ್ಚುವ ಮುನ್ನ... -ವೆಂಕಟೇಶಪ್ರಸನ್ನ The original from Robert Frost: Stopping By Woods on a Snowy Evening Whose woods these are I think I know.    His house is in the village though;    He will not see me stopping here    To watch his woods fill up with snow. ...

ಎತ್ತ ಹೋಯಿತೆನ್ನ ಬಾಲ್ಯ

A very old poem in Kannada that I had written over 15 years ago... ಎತ್ತ ಹೋಯಿತೆನ್ನ ಬಾಲ್ಯ ಎಳೆಯ ಹೊಂಬಿಸಿಲಿನಲ್ಲಿ ಹೊಳೆಯ ದಂಡೆಗುಂಟ ಓಡಿ ಮಳೆಬಿಲ್ಲಿನ ಮಾದಕತೆಯ ಹೊಳೆವ ಕಂಗಳಲ್ಲೆ ಹಿಡಿದ ಎಳೆಯತನದ ದಿನಗಳೆಲ್ಲ ಕಳೆದುಹೋದುವೆಲ್ಲಿ ಇಂದು? ಗುಬ್ಬಿಗಳ ಕಲರವಕ್ಕೆ ಹಬ್ಬಗಳ ಸಡಗರಕ್ಕೆ ಕಬ್ಬು ಮಾವು ಸಜ್ಜಿಗೆಗೆ ಹುಬ್ಬೇರಿಸಿ ಕಣ್ಣರಳಿಸಿ ಸಭ್ಯರಾಗಿ ಕಾಯುತ್ತಿದ್ದ ಹೆಬ್ಬಯಕೆಯ ಆ ಕ್ಷಣಗಳೆಲ್ಲಿ? ಅಕ್ಕ ತಮ್ಮರೊಡನೆ ಕೂಡಿ ಸಿಕ್ಕ ಮರಳ ಗುಡ್ಡೆ ಹತ್ತಿ ಹೆಕ್ಕಿ ಕಪ್ಪೆ ಚಿಪ್ಪು ತೆಗೆದು ಲೆಕ್ಕ ಮಾಡಿ ನಲಿಯುತ್ತಿದ್ದ ದುಃಖದುಮ್ಮಾನವಿರದ ಮಕ್ಕಳಾಟದ ಆ ದಿನಗಳೆಲ್ಲಿ? ಹಚ್ಚಹಸಿರು ಸೀಬೆಯನ್ನು ಕಚ್ಚಿ ಕಾಗೆ ಎಂಜಲೆನುತ ರಚ್ಚೆ ಹಿಡಿದು ಜಗಳವಾಡಿ ಹಂಚಿ ತಿಂದು ಖುಷಿಯ ಪಟ್ಟ ಮುಚ್ಚು ಮರೆಯ ಅರಿಯದಂಥ ಅಚ್ಚರಿಯ ಆ ಸ್ನೇಹವೆಲ್ಲಿ? ಸುತ್ತಲಿರುವ ಪ್ರಕೃತಿಯನ್ನು ಮತ್ತೆ ತಿರುಗಿ ನೋಡದಂತೆ ಹತ್ತು ಹಲವು ಚಿಂತೆಗಳನು ಹೊತ್ತು ತಿರುಗುತ್ತಿರುವೆನಲ್ಲ! ಎತ್ತ ಹೋಯಿತೆನ್ನ ಬಾಲ್ಯ ಅತ್ತು ಕರೆದರೂ ಬಾರದಲ್ಲ... - ವೆಂಕಟೇಶಪ್ರಸನ್ನ

ಗುಟ್ಟು - Kannada Translation of "The Secret Sits" by Robert Frost

Image
An old attempt at translation of Robert Frost's poem "The Secret Sits" to Kannada: ಗುಟ್ಟು ಸುತ್ತಾಗಿ ಕುಣಿಯುತ್ತ ಊಹಿಪೆವು ನಾವು, ನಡುವೆ ಕುಳಿತಿಹ ಗುಟ್ಟು ಅರಿತಿಹುದು ತಾನು. -ವೆಂಕಟೇಶಪ್ರಸನ್ನ Original poem by Robert Frost: The Secret Sits We dance round in a ring and suppose, But the Secret sits in the middle and knows.

ಹೊನ್ನು ಶಾಶ್ವತವಲ್ಲ - Kannada Translation of "Nothing Gold Can Stay" by Robert Frost

Image
Here is an old attempt to translate Robert Frost's poem "Nothing Gold Can Stay" to Kannada: ಹೊನ್ನು ಶಾಶ್ವತವಲ್ಲ ಪ್ರಕೃತಿಮಾತೆಯ ಮೊದಲ ಹಸಿರಿನದು ಹೊಂಬಣ್ಣ, ಹೆಚ್ಚು ದಿನ ಹಿಡಿದಿಡಲು ಸಾಧ್ಯವಾಗದ ಬಣ್ಣ. ಅವಳ ಹೊಸ ಚಿಗುರೆಲೆಗೆ ಹೂವಿನದೆ ಅಂದ, ತಾಸು ಕಳೆಯುವುದರೊಳಗಾಗುವುದು ಮಂದ. ಎಲೆಯುದುರಿ ಮುಂದಿನೆಲೆಗವಕಾಶ ನೀಡುವುದು. ಆನಂದವನದೊಳೂ ದುಃಖ ಮಡುಗಟ್ಟುವುದು. ಉದಯರವಿ ದಿನವ ಮುಂದೂಡಲೇಬೇಕಲ್ಲ; ಹೊನ್ನು ಎಂದೆಂದಿಗೂ ಶಾಶ್ವತವಲ್ಲ. - ವೆಂಕಟೇಶಪ್ರಸನ್ನ The original poem by Robert Frost: Nothing Gold Can Stay Nature's first green is gold, Her hardest hue to hold. Her early leaf's a flower;  But only so an hour. Then leaf subsides to leaf, So Eden sank to grief, So dawn goes down to day Nothing gold can stay. - Robert Frost This picture I took at Lalbagh a few years ago just fits this poem's theme so well...

ಹಾಡು ಹಕ್ಕಿ - Kannada Translation of "A Minor Bird" by Robert Frost

Image
Here is an old attempt to translate Robert Frost's poem "A Minor Bird" to Kannada: ಹಾಡು ಹಕ್ಕಿ ಹಕ್ಕಿಯೊಂದು ಮನೆಯ ಸನಿಹ ದಿನವೂ ಹಾಡಿ ನಲಿಯುವಾಗ ದೂರ ಹಾರಿ ಹೋಗಲೆಂದು ನಾನು ಆಶಿಸಿದ್ದಿದೆ; ಮನೆಯ ಬಾಗಿಲಲ್ಲಿ ನಿಂತು ಕೈಯ ತಟ್ಟಿ ಕೂಗು ಹಾಕಿ ತಾಳಲಾರೆನಿನ್ನು ಎಂದು ಗೊತ್ತು ಮಾಡಿಸಿದ್ದಿದೆ. ಕೆಲ ಮಟ್ಟಿನ ಕುಂದುಕೊರತೆ ಇರಲು ಸಾಕು ನನ್ನೊಳಗೂ ಹಕ್ಕಿಯ ಶಾರೀರವನ್ನೆ ಹಳಿವುದೆಂದೂ ಸಲ್ಲದು. ಗಾನ ಯಾವುದಾದರೇನು ಮೌನಗೊಳಿಸುವಿಚ್ಛೆಯಿರುವ ಖಚಿತ ದೋಷವದೇನೆಂದು ಮನವೇ ಬಲ್ಲದು. -ವೆಂಕಟೇಶಪ್ರಸನ್ನ A Minor Bird I have wished a bird would fly away, And not sing by my house all day; Have clapped my hands at him from the door When it seemed as if I could bear no more. The fault must partly have been in me. The bird was not to blame for his key. And of course there must be something wrong In wanting to silence any song.

ಸ್ವೀಕಾರ - Kannada Translation of "Acceptance" by Robert Frost

Image
Here is an old attempt to translate Robert Frost's poem " Acceptance " to Kannada: ಸ್ವೀಕಾರ  ಮುಗಿದ ಸೂರ್ಯ ತನ್ನ ಸುಡುವ ಕಿರಣಗಳ ಕೆಮ್ಮುಗಿಲಿನತ್ತ ಹರಿಸಿ ಕೆಂಡ ಕಾರುತ್ತ ಮುಳುಗಿ ಹೋಗುವನು ಕಡಲ ತಡಿಯೊಂದನರಸಿ. ಜಗದ ಜೀವಿಗಳು ಜರುಗಿದೀ ಕ್ರಿಯೆಗೆ ಜೋರು ದನಿಯನೇನೆತ್ತವು, ಕಡೆಯ ಪಕ್ಷ ಬಾನಾಡಿಗಳಿಗೆ ಆಗಿರಲೇಬೇಕು ಇದರರ್ಥವು - ಆಗಸದ ಬೆಳಕ ಕತ್ತಲಾಗಿಸುವ ಸಮಯವಾಯಿತೀಗೆಂದು. ನಿಶ್ಶಬ್ದವಾಗಿ ಮನದಾಳದಲ್ಲೇ ಗೊಣಗುತ್ತ ಗುಬ್ಬಿಯೊಂದು ತೂಕಡಿಕೆ ಬಂದ ಕಣ್ಣೆವೆಗಳನ್ನು ಮುಚ್ಚಲಾರಂಭಿಸುವುದು. ಗೂಡಿನಿಂದ ಬಲು ದೂರ ಹೋದ ಮತ್ತೊಂದು ಮರೆತ ಹಕ್ಕಿ ಪೊದೆಗಳೆತ್ತರವೆ ಹಾರುತ್ತಲಿರುವುದು ಮರಳಿ ಬರುವಾಸೆಯುಕ್ಕಿ; ಧಾವಂತದಿಂದ ನೆನಪಿಟ್ಟ ಮರವ ತಲುಪಿ ಸಮಯದೊಳಗೆ, ಏದುಸಿರು ಬಿಟ್ಟು ಚಿಂತಿಸುವುದಿಂತು ಮೆಲ್ಲನೆ ಮನದೊಳಗೆ - `ರಕ್ಷಿತನು ನಾನು, ಇನ್ನಿಂದು ರಾತ್ರಿ ಕತ್ತಲೆಯು ಆವರಿಸಲಿ, ಈ ರಾತ್ರಿಯಿನ್ನು ಕಗ್ಗತ್ತಲಾಗಿ ನನಗೇನೂ ಕಾಣದಿರಲಿ. ಮುಂದೇನು ಎಂದು ಕಾಣುವುದೇ ಬೇಡ; ಆಗುವುದು ಆಗುತಿರಲಿ'. - ವೆಂಕಟೇಶಪ್ರಸನ್ನ Original poem by Robert Frost: Acceptance When the spent sun throws up its rays on cloud And goes down burning into the gulf below, No voice in nature is heard to cry aloud At ...