Here is an old attempt to translate Robert Frost's poem "Nothing Gold Can Stay" to Kannada:
ಹೊನ್ನು ಶಾಶ್ವತವಲ್ಲ
ಪ್ರಕೃತಿಮಾತೆಯ ಮೊದಲ ಹಸಿರಿನದು ಹೊಂಬಣ್ಣ,
ಹೆಚ್ಚು ದಿನ ಹಿಡಿದಿಡಲು ಸಾಧ್ಯವಾಗದ ಬಣ್ಣ.
ಅವಳ ಹೊಸ ಚಿಗುರೆಲೆಗೆ ಹೂವಿನದೆ ಅಂದ,
ತಾಸು ಕಳೆಯುವುದರೊಳಗಾಗುವುದು ಮಂದ.
ಎಲೆಯುದುರಿ ಮುಂದಿನೆಲೆಗವಕಾಶ ನೀಡುವುದು.
ಆನಂದವನದೊಳೂ ದುಃಖ ಮಡುಗಟ್ಟುವುದು.
ಉದಯರವಿ ದಿನವ ಮುಂದೂಡಲೇಬೇಕಲ್ಲ;
ಹೊನ್ನು ಎಂದೆಂದಿಗೂ ಶಾಶ್ವತವಲ್ಲ.
- ವೆಂಕಟೇಶಪ್ರಸನ್ನ
The original poem by Robert Frost:
Nothing Gold Can Stay
Nature's first green is gold,
Her hardest hue to hold.
Her early leaf's a flower;
But only so an hour.
Then leaf subsides to leaf,
So Eden sank to grief,
So dawn goes down to day
Nothing gold can stay.
- Robert Frost
This picture I took at Lalbagh a few years ago just fits this poem's theme so well...
Comments