ಕತ್ತಲೊಳು ಕಾಶಿ

 ಕತ್ತಲೊಳು ಕಾಶಿ


ಸಂಜೆಗತ್ತಲು ತೇಲುತೆಪ್ಪದಿನಾಚೆ ನೋಡೆಲೊ, ಕಾಶಿಯ!
ಮಂಜಿನಾವರಣವನು ಮೀರುತ ಪೊಳಲು ಮೂಡುವ ರೀತಿಯ!

ನಿಚ್ಚಜಂಗಮ ಬೀಡು ಬಿಟ್ಟಿಹನಿಲ್ಲಿ ಕಾಣೆಲೊ ಯಾತ್ರಿಕ,
ಮುಚ್ಚಿ ಹಿಡಿದಿಹನೆಲ್ಲ ಜಗವನು; ತನ್ನ ಮುಷ್ಟಿ ಚಿದಾತ್ಮಕ!

ಸಾಲುಸಾಲಿಗೆ ಬಂದು ಪೋಪರ ನೋಡುತಿಹನೆಡಬಿಡದೆಯೇ,
ಕಾಲವದು ಕಂಕಣದವೊಲು ಮಣಿ ಕಟ್ಟಿ ನಿಂತಿಹುದಲ್ಲಿಯೇ!

ಕಡೆಯ ತಾಣವಿದೆಂದು ಹಲವರು ಬಂದು ಸೇರಿಹರಿಲ್ಲಿಗೆ,
ಬಿಡಲು ಸಜ್ಜಾಗಿರುವ ಪಟ್ಟಿಯ ನೋಡೆ ಮೂಡದೆ ಬೆಳ್ನಗೆ?

ಬಾಳಿನಾಸೆಗೆ, ಖೇದ ಪಾತಕಗಳಿಗೆ ಕೊನೆಮೊದಲೆಲ್ಲಿದೆ?
ತಾಳುಮೆಯ ತೋರುವರ ಪಾಲಿಗೆ ಗಟ್ಟಿ ನಂಬುಗೆಯೊಂದಿದೆ. 

ಅಂಗದಾಚೆಯ ಚೇತನದ ನೆಲೆಯರಿತರದುವೇ ನೈಗಮ,
ಗಂಗೆ ಲೆಕ್ಕವನಿಡುವಳೆಲ್ಲರ ನಿಯತಿಯೊಡನ ಸಮಾಗಮ!

ಇಹದಿ ಬಾಳುತ ಪರವ ತಾಳುವ ಸಹನೆಯಿಲ್ಲಿಯ ಜೀವನ,
ಸಹಜ ಸರ್ವವ್ಯಾಪಿ ಶೂನ್ಯತೆಗಳನು ತಿಳಿದಿರೆ ಪಾವನ!

- ವೆಂಕಟೇಶಪ್ರಸನ್ನ





This is an attempt at translating the poem "Kashi at Night" by Nivedita Tiwari. The original poem is below:

Kashi at Night
by Nivedita Tiwari

From this side of the boat,
a city rises against the mist,

the eternal wanderer’s abode,
who holds the universe in his fist,

it has watched come and go,
the time wrapped around his wrist.

Many arrive here finally
and laugh at the abandoned list

of desires, regrets and sins.
The ones who persist,

know that the body stays here,
the river witnesses the tryst,

between the being and becoming
of which everything and nothing exist.


The pictures of Kashi at Night too are from Nivedita Tiwari's twitter feed.


Comments