Walks along a river...


Walks along a river...


Her majesty flows along,

Through the hills where gods belong!

Forming linns and streams alike,

The river calls for vibrant hikes.


Through the woods and their life eternal,

She marches on - it's her home maternal -

As a brook, as a rush, as a sentient shrine;

She knows every nook - they're her own design!


Washing the roots of the elderly groves,

Feeding life into mortal droves,

Caressing the pristine sprouts with care,

Cleansing all with love and flair!


They call her Danube, they call her Ganga,

They call her Kaveri, Inn, or Tunga.

She's all the same, the essence of life,

Clear as crystal, turquoise rife!


Some take a dip and some take a sip,

I walk along her in an endless trip.

Serene and regal, she casts a spell,

With her rippling calm, on thoughts I dwell.


She cares for me like she cares for the whole,

Filling me with purpose on a casual stroll.

Her poise it is, that offers a thrill,

Bestowing on me, a mighty will!


This is a journey for every day,

Of hope, of content, and of noble way!

The river is immense and immortal too,

My quest shall follow her through and through!


- Venkateshprasanna H. M.


Here is an outstanding translation of this poem by Smt.  Rashmi Vinay to Kannada, which in many parts, outshines the original!


ದೇವಗಣದಾವಾಸ ಮಲೆಗಳಿಂದಿಳಿಯುವಳು

ನದಿ, ಅವಳ ಗಾಂಭೀರ್ಯಕಿದು ಸೂಕ್ತ ಮಾನ

ಅಲ್ಲಲ್ಲಿ ಝರಿಯಾಗಿ ತೊರೆಯಾಗಿ ಸಾಗುವಳ

ಕರೆಯಿಹುದು ಮಾಡಲೆಂದುಲ್ಲಾಸಯಾನ


ಕಾನನದ ನಿತ್ಯಜೀವಿತದೊಳಗೆ ಹರಿಯುವಳು

ತನ್ನ ತವರಿದುವೆ ಎಂದೆನುವ ಹುರುಪಿನಲಿ

ಜೀವತಳೆದಂಥ ದೇಗುಲವಾಗಿ ನುಗ್ಗಾಗಿ  

ತಾನೆ ಮೂಡಿಸಿದ ತಿರುವುಗಳ ಹಾಯುತಲಿ


ಹಿರಿಯ ತರುಗಳ ಬೇರುಗಳನು ತೊಳೆಯುತ ನಮಿಸಿ

ಮರ್ತ್ಯಸಂಕುಲಕವಳು ಜೀವವನ್ನೂಡಿ

ಎಲ್ಲವನು ಒಲವಿಂದ ಹೊಳವಿಂದ ಶುಚಿ ಮಾಡಿ

ಅಕ್ಕರದಿ ನವಿರು ಕುಡಿಗಳ ಮೆಲ್ಲ ತೀಡಿ


ಗಂಗೆಯೆನ್ನುವರವಳ ಡ್ಯಾನ್ಯೂಬಳೆನ್ನುವರು

ಕಾವೇರಿ ಇನ್ನ್ ತುಂಗೆ ಅವಳ ಹಲ ಹೆಸರು

ಹೊಳೆವಳೆಲ್ಲೆಲ್ಲಿಯೂ ಜೀವಸೆಲೆ ತಳೆದಂತೆ

ಶುಭ್ರ ಸ್ಫಟಿಕ ಕಾಂತಿ ಪಚ್ಚೆಕಲ್ ಹಸಿರು


ತೀರ್ಥಮಜ್ಜನ ಪಾನದಿಂದ ಪಾವನಗೈವ

ಹರಿವಿರುವೆಡೆಯೆ ನನ್ನ ಕೊನೆಯಿರದ ಪಯಣ

ಮೋಹಗೊಳಿಸುವ ಶಾಂತಿ ಘನತೆಗಳ ಸಾಕಾರ

ಅವಳ ಕಲಕಲ ನಾದದಲಿ ನನ್ನ ಧ್ಯಾನ


ಸಕಲವನು ಪೊರೆವಂತೆ ನನ್ನನೂ ಪೊರೆಯುವಳ

ಮೈತ್ರಿಯಿಂದೊದಗುವುದು ದಿವ್ಯ ಸಂಕಲ್ಪ

ಅವಳ ಸೊಬಗಿಗೆ ಪುಳಕಗೊಂಡ ಮನದಲ್ಲೊಂದು

ಹೆಬ್ಬಯಕೆ ತಾನಾಗುವುದು ಭವ್ಯ ಶಿಲ್ಪ


ಔದಾರ್ಯ ಸಂತೃಪ್ತಿ ಭರವಸೆಯ ಭಾವಗಳ

ವಿಸ್ತರದಿ ನದಿ ಹರಿವಳವಿನಾಶಿಯಾಗಿ      

ಅನುದಿನದ ಯಾತ್ರೆಯಲಿ ಹೆಗ್ಗುರಿಯ ಶೋಧದಲಿ

ಸಾಗುವೆನು ನಾನವಳ ಸಹಚಾರಿಯಾಗಿ




Comments