ಕನ್ನಡದಲ್ಲಿ ಆದಿ ಶಂಕರಾಚಾರ್ಯರ ಶ್ರೀದಕ್ಷಿಣಾಮೂರ್ತ್ಯಷ್ಟಕ

Over the last couple of months, Dr. Chandana Sri and I took up this near-impossible task of translating Sri Dakshinamurti Ashtaka Stotra of Sri Adi Shankaracharya to Kannada. While the outcome is that of an attempt by beginners (trying to put across the translation in Bhamini Shatpadi while the original is in Shardula Vikridita chhandas), we could at least feel good about completing the task, and having learnt a lot through the process.

(EDIT: We have updated this with supportive and educative inputs from Dr. Shrikaanth K Murthy and Sri H S Raghavendra) Here is our attempt, also adorned with a spectacular painting of Sri Dakshinamurti by Dr. Chandana Sri!


ದಕ್ಷಿಣಾಮೂರ್ತ್ಯಷ್ಟಕಂ विश्वं दर्पणदृश्यमाननगरीतुल्यं निजान्तर्गतं पश्यन्नात्मनि मायया बहिरिवोद्भूतं यथा निद्रया । यः साक्षात्कुरुते प्रबोधसमये स्वात्मानमेवाद्वयं तस्मै श्रीगुरुमूर्तये नम इदं श्रीदक्षिणामूर्तये ॥ १ ॥ ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ | ಯಃ ಸಾಕ್ಷಾತ್ಕುರುತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೧ || ಹೊಳೆವ ಮುಕುರದಿ ಜಗವು ಕಾಣುವು- ದಿಳೆಯ ನಗರದ ರೀತಿಯಲಿ ತಾ- ನೊಳಗಿನದ ಹೊರಗೆನಿಸಿ ರೂಪಿಸೆ ಮಾಯೆ ನಿದಿರೆಯೊಳು ಬಳಿಕವೇಳುತಲರಿತವನು ತಾ ನುಳಿದು ಬೇರೊಂದಿಲ್ಲ ನಿಜವೆಂ- ದುಲಿವ ವರಗುರುದಕ್ಷಿಣಾಮೂರುತಿಗೆ ನಮನಗಳು || ೧ ||


बीजस्यान्तरिवाङ्कुरो जगदिदं प्राङ्निर्विकल्पं पुन- र्मायाकल्पितदेशकाल कलनावैचित्र्यचित्रीकृतम् । मायावीव विजृम्भयत्यपि महायोगीव यः स्वेच्छया तस्मै श्रीगुरुमूर्तये नम इदं श्रीदक्षिणामूर्तये ॥ २ ॥ ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ನಿರ್ವಿಕಲ್ಪಂ ಪುನ- ರ್ಮಾಯಾಕಲ್ಪಿತದೇಶಕಾಲ ಕಲನಾವೈಚಿತ್ರ್ಯಚಿತ್ರೀಕೃತಂ | ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೨ || ಮೊಳೆಕೆಯೊಡೆದಿಹ ಬೀಜದಂದದಿ ತಳೆಸುತೀ ಜಗಕಿತರ ರೂಪವ ಸೆಳೆದು ಬೆರಗನು ದೇಶಕಾಲದ ನಿರ್ವಿಕಲ್ಪತೆಯಿಂ ಪಳಗಿಸುವ ಮಾಯಾವಿ ಯೋಗಿಯ ಚಳಕ ತೋರಿ ಸ್ವೇಚ್ಛೆಯಿಂದಲಿ ನಲಿವ ವರಗುರುದಕ್ಷಿಣಾಮೂರುತಿಗೆ ನಮನಗಳು || ೨ ||


यस्यैव स्फुरणं सदात्मकमसत्कल्पार्थगं भासते साक्षात्तत्त्वमसीति वेदवचसा यो बोधयत्याश्रितान् । यत्साक्षात्करणाद्भवेन्न पुनरावृत्तिर्भवाम्भोनिधौ तस्मै श्रीगुरुमूर्तये नम इदं श्रीदक्षिणामूर्तये ॥ ३ ॥ ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಗಂ ಭಾಸತೇ ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ | ಯತ್ಸಾಕ್ಷಾತ್ಕರಣಾದ್ಭವೇನ್ನ ಪುನರಾವೃತ್ತಿರ್ಭವಾಂಭೋನಿಧೌ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೩ || ಸ್ಫುರಣೆಯಿಂದುದ್ಭವಿಸಿಹನು ತ- ನ್ನಿರವನಿರದುದರೊಳಗೆ ಮೂಡಿಸಿ ಅರಸಿ ಬರುವಗೆ ಬೋಧಿಪನು ತತ್ತ್ವಮಸಿ ವಾಕ್ಯವನು ಅರಿಯಲೀ ನಿಜ ಮರಳಿಯೀ ಭವ- ಶರಧಿಯಲಿ ತೊಳಲಾಟ ತಪ್ಪಿಸಿ ಪೊರೆವ ವರಗುರುದಕ್ಷಿಣಾಮೂರುತಿಗೆ ನಮನಗಳು || ೩ ||

नानाच्छिद्रघटोदरस्थितमहादीपप्रभाभास्वरं ज्ञानं यस्य तु चक्षुरादिकरणद्वारा बहिः स्पन्दते । जानामीति तमेव भान्तमनुभात्येतत्समस्तं जग- त्तस्मै श्रीगुरुमूर्तये नम इदं श्रीदक्षिणामूर्तये ॥ ४ ॥ ನಾನಾಚ್ಛಿದ್ರಘಟೋದರಸ್ಥಿತಮಹಾದೀಪಪ್ರಭಾಭಾಸ್ವರಂ ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪಂದತೇ | ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗ- ತ್ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೪ || ಹಲವು ತೂತಿನ ಮಡಿಕೆಯೊಳಗಿಹ ಹೊಳಪ ಸೂಸುವ ಸೊಡರಿನಂದದಿ ತಿಳಿವು ಕಣ್, ಕರಣಗಳ ಮೂಲಕ ಹೊರಗೆ ಹೊಮ್ಮುವುದು ಒಳಗಿನಾ ಶ್ರೀಕಾಂತಿಯಿಂದಲೆ ಬೆಳಗುವುದು ಜಗವೆಲ್ಲವೆಂಬುದ ತಿಳಿಪ ವರಗುರುದಕ್ಷಿಣಾಮೂರುತಿಗೆ ನಮನಗಳು || ೪ ||

देहं प्राणमपीन्द्रियाण्यपि चलां बुद्धिं च शून्यं विदुः स्त्रीबालान्धजडोपमास्त्वहमिति भ्रान्ता भृशं वादिनः । मायाशक्तिविलासकल्पितमहाव्यामोहसंहारिणे तस्मै श्रीगुरुमूर्तये नम इदं श्रीदक्षिणामूर्तये ॥ ५ ॥ ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ ಸ್ತ್ರೀಬಾಲಾಂಧಜಡೋಪಮಾಸ್ತ್ವಹಮಿತಿ ಭ್ರಾಂತಾ ಭೃಶಂ ವಾದಿನಃ | ಮಾಯಾಶಕ್ತಿವಿಲಾಸಕಲ್ಪಿತಮಹಾವ್ಯಾಮೋಹಸಂಹಾರಿಣೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೫ || ಒಡಲೊ ಹರಣವೊ ಇಂದ್ರಿಯಂಗಳೊ ತುಡಿವ ಬುದ್ಧಿಯೊ ಶೂನ್ಯವೋ ಕೆಲ ಜಡರು ಕುರುಡರು ಭ್ರಮೆಯೊಳಿವುಗಳನಾತ್ಮವೆಂದೆಣಿಸೆ ಬೆಡಗು ಮಾಡುವ ಮಾಯೆ ತಾ ಗಾ- ರುಡಿಯ ವ್ಯಾಮೋಹವನು ತೋರಿರೆ ತೊಡೆವ ವರಗುರುದಕ್ಷಿಣಾಮೂರುತಿಗೆ ನಮನಗಳು || ೫ ||

राहुग्रस्तदिवाकरेन्दुसदृशो मायासमाच्छादना- त्सन्मात्रः करणोपसंहरणतो योऽभूत्सुषुप्तः पुमान् । प्रागस्वाप्समिति प्रबोधसमये यः प्रत्यभिज्ञायते तस्मै श्रीगुरुमूर्तये नम इदं श्रीदक्षिणामूर्तये ॥ ६ ॥ ರಾಹುಗ್ರಸ್ತದಿವಾಕರೇಂದುಸದೃಶೋ ಮಾಯಾಸಮಾಚ್ಛಾದನಾ- ತ್ಸನ್ಮಾತ್ರಃ ಕರಣೋಪಸಂಹರಣತೋ ಯೋಽಭೂತ್ಸುಷುಪ್ತಃ ಪುಮಾನ್ | ಪ್ರಾಗಸ್ವಾಪ್ಸಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೬ || ಇಂದು-ದಿನಪರ ರಾಹು ನೊಣೆವವೊ- ಲೊಂದು ಮಾಯಾವರಣದಿಂದಲಿ ಹೊಂದಿ ಪ್ರತ್ಯಾಹಾರವನು ಮಲಗಿರ್ಪ ಸನ್ಮಾತ್ರ ಹಿಂದೆ ತಾ ಮಲಗಿದ್ದೆನೆಂಬುದ- ನಿಂದು ತಾನೆದ್ದರಿತು ಪೊರೆಯುವ ತಂದೆ ವರಗುರುದಕ್ಷಿಣಾಮೂರುತಿಗೆ ನಮನಗಳು || ೬ ||

बाल्यादिष्वपि जाग्रदादिषु तथा सर्वास्ववस्थास्वपि व्यावृत्तास्वनुवर्तमानमहमित्यन्तः स्फुरन्तं सदा । स्वात्मानं प्रकटीकरोति भजतां यो मुद्रया भद्रया तस्मै श्रीगुरुमूर्तये नम इदं श्रीदक्षिणामूर्तये ॥ ७ ॥ ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ ವ್ಯಾವೃತ್ತಾಸ್ವನುವರ್ತಮಾನಮಹಮಿತ್ಯಂತಃ ಸ್ಫುರಂತಂ ಸದಾ | ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೭ || ಸ್ಥಿತಿಯು ಬಾಲ್ಯವೊ ಜಾಗೃತಿಯೊ ಮ- ತ್ತಿತರ ಜೀವಾವಸ್ಥೆಗಳೊ ತಾ- ನತಿಯ ತೇಜವನಾತ್ಮದಿಂದಲಿ ನಿರುತ ಹೊಮ್ಮಿಸುತ ಸ್ತುತಿಸೆ ತನ್ನನು ತಾ ಪ್ರಕಟಿಸುತ ಕಥಿಸೆ ಶುಭದಿಂ ಮುದ್ರೆ ತೋರ್ವಗೆ ನುತಗೆ ವರಗುರುದಕ್ಷಿಣಾಮೂರುತಿಗೆ ನಮನಗಳು || ೭ ||

विश्वं पश्यति कार्यकारणतया स्वस्वामिसम्बन्धतः शिष्याचार्यतया तथैव पितृपुत्राद्यात्मना भेदतः । स्वप्ने जाग्रति वा य एष पुरुषो मायापरिभ्रामित- स्तस्मै श्रीगुरुमूर्तये नम इदं श्रीदक्षिणामूर्तये ॥ ८ ॥ ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ | ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತ- ಸ್ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೮ || ಕರಣ-ಕಾರಣವೊಡಮೆಯೊಡೆಯನ
ಗುರು-ವಿನೇಯರ ತಾತ-ತನಯರೊ-
ಳಿರುವುದೆನಿಸುವ ಭೇದವನು ತಾ ಮಾಯೆ ತೋರಿರಲು
ವಿರಮಿಸಿರಲೆಚ್ಚರದೊಳಿರಲವ
ಪುರುಷ ಮರುಳಾಗರಿವ ಪಡೆಯುವ
ತರಣಿ ವರಗುರುದಕ್ಷಿಣಾಮೂರುತಿಗೆ ನಮನಗಳು || ೮ ||

भूरम्भांस्यनलोऽनिलोऽम्बरमहर्नाथो हिमांशुः पुमा- नित्याभाति चराचरात्मकमिदं यस्यैव मूर्त्यष्टकम् । नान्यत्किञ्चन विद्यते विमृशतां यस्मात्परस्माद्विभो- स्तस्मै श्रीगुरुमूर्तये नम इदं श्रीदक्षिणामूर्तये ॥ ९ ॥ ಭೂರಂಭಾಂಸ್ಯನಲೋಽನಿಲೋಽಂಬರಮಹರ್ನಾಥೋ ಹಿಮಾಂಶುಃ ಪುಮಾ- ನಿತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಂ | ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ- ಸ್ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || ೯ || ಧರಣಿ-ಸಲಿಲಾನಲ-ಪವನ-ನಭ ತರಣಿ-ಚಂದಿರ-ಪುರುಷನೆಂಬುವ ಚರವೊ ಅಚರವೊ ತನ್ನ ರೂಪಗಳೆಂಟು ಮೆರೆದಿರಲು ಪರಿಕಿಸಿರಲಿದನುಳಿದ ದೈವವ- ದಿರದೆನುವ ತಿಳಿವೊಂದ ನೀಡುವ ಪರಮ ವರಗುರುದಕ್ಷಿಣಾಮೂರುತಿಗೆ ನಮನಗಳು || ೯ ||

सर्वात्मत्वमिति स्फुटीकृतमिदं यस्मादमुष्मिंस्तवे तेनास्य श्रवणात्तदर्थमननाद्ध्यानाच्च सङ्कीर्तनात् । सर्वात्मत्वमहाविभूतिसहितं स्यादीश्वरत्वं स्वतः सिध्येत्तत्पुनरष्टधा परिणतं चैश्वर्यमव्याहतम् ॥ १० ॥ ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿಂಸ್ತವೇ ತೇನಾಸ್ಯ ಶ್ರವಣಾತ್ತದರ್ಥಮನನಾದ್ಧ್ಯಾನಾಚ್ಚ ಸಂಕೀರ್ತನಾತ್ | ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ ಸಿಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಂ || ೧೦ || ಸ್ತುತಿಯೊಳಿರುವೀ ತಿರುಳು ವಿಶದವು ಋತವದಾತ್ಮವೆ ಸಾರವೆಂಬುದು ಕಥಿಸಿ ಮಥಿಸಿರಲದನು ಹಾಡುತ ದೇನಿಸನವರತ ಸತತಮಹಿಮೆಯ ಹೊಂದಿ ತಾನೇ ಜೊತೆಯೊಳೀಶ್ವರನೊಂದುಗೂಡಿರೆ ಮಿತಿಯ ಕಾಣದೆ ದೊರೆವುದವರಿಗೆ ಅಷ್ಟಸಿದ್ಧಿಗಳು || ೧೦ ||

Comments

Naveen said…
ಅಚ್ಚುಕಟ್ಟಾಗಿದೆ, ಅಭಿನಂದನೆಗಳು.
ಇಂತಹ ಅನುವಾದ ನಮ್ಮ ಕನ್ನಡಕ್ಕೆ ಅವಶ್ಯ ಬೇಕಾಗಿದೆ. ಡಿವಿಜಿ ಅವರು ಪುರುಷ ಸೂಕ್ತವನ್ನು ಇದೆ ಧಾಟಿಯಲ್ಲಿ ಕನ್ನಡಿಸಿದ್ದರು.
ನಿಮ್ಮಿಂದ ಇಂತಹ ಅನುವಾದಗಳು ಇನ್ನು ಹೆಚ್ಚು ನಡಿಯಲಿ.
Prasanna said…
ಧನ್ಯವಾದಗಳು ಸರ್!
Sharath Athrey said…
Wow..ಅತ್ಯುತ್ತಮವಾದ ಅನುವಾದ. Thanks a lot.