ಶಾರ್ದೂಲಂಗಳೆ ಶ್ರೇಷ್ಠ!

Recently, I came across this poem that happens to be the secret song (forced by Hobbes, of course) to get access to the headquarters of the club G.R.O.S.S, in Bill Watterson's Calvin and Hobbes:

Tigers are mean
Tigers are fierce
Tigers have teeth
And claws that pierce.

Tigers are great
They can't be beat
If I was a tiger
That would be neat!

Tigers are nimble
And light on their toes
My Respect for tigers
Continually grows.

Tigers are perfect
The e-pit-o-me
Of good looks and grace
And quiet dignity!

Tigers are great
They're the toast of town
Life's always better
When a tiger's around!
 

So, here's my attempt to translate this into Kannada in Shardula Vikridita Chhandas. 20 lines become 12, so I have split them into 2 verses of 6 lines each, depending on where there is a meaningful pause in the original.

Surely, Shardula Vikridita is the most fitting meter for Calvin and Hobbes?! :)


ಶಾರ್ದೂಲಂಗಳು ಕ್ರೂರವಾಗಿರುವುದೇ ಸಾಮಾನ್ಯವೀ ವಿಶ್ವದೊಳ್
ಶಾರ್ದೂಲಂಗಳು ಘೋರವಾಗಿರುವುದೇ ಸರ್ವತ್ರ ಮಾತಾಗಿರಲ್
ಶಾರ್ದೂಲಂಗಳ ಕೋರೆಹಲ್ಲುನಖಗಳ್ ಚೂಪಾಗಿ ಚುಚ್ಚುತ್ತಿರಲ್
ಶಾರ್ದೂಲಂಗಳೆ ಶ್ರೇಷ್ಠವಿಂದು ಜಗದೊಳ್ ಮತ್ತೆಲ್ಲ ಜೀವಂಗಳಿಂ
ಶಾರ್ದೂಲಂಗಳಿಗಾರು ಸೋಲನುಣಿಸರ್ ತಾವೇ ವಿಜೇತೋತ್ತಮರ್
ನಿರ್ದಾಕ್ಷಿಣ್ಯದಿ ಪೇಳ್ವೆ ನಾ ಬಯಕೆಯಂ ಶಾರ್ದೂಲ ನಾನಾಗುವೇ!
 
ಶಾರ್ದೂಲಂಗಳು ಸೂಕ್ಷ್ಮವೋ ಚಲನೆಯೊಳ್ ಸದ್ದಿಲ್ಲವೋ ದಾಳಿಯೊಳ್
ಶಾರ್ದೂಲಂಗಳಿಗಿರ್ಪ ಗೌರವವಿದೋ ಹೆಚ್ಚಾಯಿತೆನ್ನಾತ್ಮದೊಳ್
ಶಾರ್ದೂಲಂಗಳೆ ಜೀವನೋತ್ಕರುಷವಂ ಸಂಪೂರ್ಣತಾಭಾವದಿಂ
ಸೌಂದರ್ಯಾತಿಮನೋಹರಾದಿ ಗುಣದಿಂ ಗಾಂಭೀರ್ಯದಿಂ ತೋರಿರಲ್
ಶಾರ್ದೂಲಂಗಳೆ ಶ್ರೇಷ್ಠವೋ ತಿಳಿಯಿರೈ ಲೋಕೋತ್ತರಾದರ್ಶದೊಳ್
ನಿರ್ದಿಷ್ಟೋತ್ತಮ ಬಾಳಿದಾಗುವುದೆಲೋ ಶಾರ್ದೂಲದೊಟ್ಟಾಗಿರಲ್!

Comments