An attempt at Kannada Translation of Robert Frost's poem Fire and Ice:
ಉರಿ - ಕುಳಿರು
ಇಳೆಯಳಿವುದುರಿಯಿಂದಲೆನ್ನುವರು ಕೆಲರು
ಕುಳಿರಿನಿಂದಳಿವೆಂದು ಸಾಧಿಪರು ಕೆಲರು
ಅಳಿಪು ಲಾಲಸೆಗಳನು ನಾನು ಕಂಡಿರುವೆ
ಅಳಿವಿಗುರಿಯೇ ಮೂಲವೆಂಬರೊಡನಿರುವೆ
ಇಳೆಯು ತಾನಿನ್ನೊಮ್ಮೆ ಮುಳುಗಲನುವಿರಲು
ಕುಳಿರಿನಂದದ ಹಗೆಯ ತಿಳಿವು ನನಗಿಹುದು
ಚಳಿಯಿಂದಲೂ ಅಳರಿ ಹೋಗುವುದು ಸಾಧ್ಯ
ಮುಳುವಾಗುವಷ್ಟಿರಲು ಹಿಮದ ಸಾನ್ನಿಧ್ಯ
Original poem "Fire and Ice" by Robert Frost:
Comments