Search This Blog

Total Pageviews

Monday, 29 July 2019

ಬಾಲ್ಯದ ಓದಿನ ನೆನಪುಗಳು

ಈ ಕೆಳಗಿನ ದಿ ಅರುಣ್ ಮೇಷ್ಟ್ರು ಶೋ ಎರಡನೇ ಆವೃತ್ತಿಯ ಮಾತುಗಳನ್ನು ಕೇಳಿದ ಮೇಲೆ ನನಗೂ ಬಾಲ್ಯದಲ್ಲಿ ಓದಲು ಪುಸ್ತಕಗಳಿಗಾಗಿ ಹಾತೊರೆಯುತ್ತಿದ್ದ ದಿನಗಳು ನೆನಪಾದವು.ನಾನು ಇದ್ದದ್ದು ಒಂದು ಸಣ್ಣ ಊರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ. ಈಗ ಊರು ದೊಡ್ಡದಾಗಿ ಬೆಳೆದಿದ್ದರೂ ನನ್ನ ಬಾಲ್ಯದ ಕಾಲಕ್ಕೆ ಅದು ಸಣ್ಣ ಊರು. ಅಲ್ಲಿ ಕೊಳ್ಳಲು ಪುಸ್ತಕದ ಅಂಗಡಿಗಳು ಹೆಚ್ಚಾಗಿ ಇರಲಿಲ್ಲ. ನನ್ನ ಪಾಲಿಗೆ ವರವಾಗಿದ್ದಂತಹವು ಊರಿನ "ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ" ಎಂಬ ಒಂದು ಖಾಸಗಿ ಗ್ರಂಥಾಲಯ ಮತ್ತು ಸರ್ಕಾರಿ ಗ್ರಂಥಾಲಯ. ಅಲ್ಲಿಂದ ಎರವಲು ತಂದು ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ.

ನನಗೆ ಪುಸ್ತಕಗಳ ಪರಿಚಯವಾದದ್ದು ಮನೆಯಲ್ಲಿದ್ದ ಅಮರ ಚಿತ್ರ ಕಥೆ ಪುಸ್ತಕಗಳಿಂದ. ನಮ್ಮ ತಂದೆಯವರು, ಚಿಕ್ಕಪ್ಪ ಆಗಾಗ ಈ ಪುಸ್ತಕಗಳನ್ನು ತಂದಿಟ್ಟಿದ್ದರು. ಅವು ಕೇವಲ ಕಾಮಿಕ್ಸ್ ಪುಸ್ತಕಗಳಾಗಿದ್ದರೂ ಅವುಗಳಿಂದ ಕಲಿತದ್ದು ಬಹಳ. ಮಕ್ಕಳಿಗೆ ಭಾರತದ ಮೂಲೆ ಮೂಲೆಗಳಿಂದ ಪುರಾಣ ಮತ್ತು ನೀತಿಕಥೆಗಳನ್ನು ಹೆಕ್ಕಿ ತಂದು ಮನಮುಟ್ಟುವಂತೆ ಕಲಿಸಿದ ಶ್ರೇಯ ಅಮರ ಚಿತ್ರ ಕಥೆ ಮತ್ತು ಅನಂತ ಪೈ ಅವರಿಗೆ ಸಲ್ಲಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತರೇ (ಪ್ರೀತಿಯ ಕಾರಂತಜ್ಜ) ಅವುಗಳಲ್ಲಿ ಹಲವನ್ನು ಖುದ್ದಾಗಿ ಕನ್ನಡಕ್ಕೆ ಅನುವಾದಿಸಿದ್ದರೆಂದರೆ ಇನ್ನು ಕೇಳಬೇಕೇ?

ಅಮರ ಚಿತ್ರ ಕಥೆಗಳ ನಂತರ ಶಾಲೆಯಲ್ಲಿ ಬೇರೆ ಪುಸ್ತಕಗಳ ಪರಿಚಯವೂ ಆಯಿತು. ಶಾಲೆಯೆಂದರೆ ಊರಿನಲ್ಲಿದ್ದ ಚೈತನ್ಯ ವಿದ್ಯಾ ಶಾಲೆ. ಅಂದಿಗೂ, ಇಂದಿಗೂ ಊರಿನಲ್ಲಿ ಕಲಶಪ್ರಾಯವಾದ ವಿದ್ಯಾ ಸಂಸ್ಥೆ. ಒಂದು ವರ್ಷದ ಮಟ್ಟಿಗೆ ನಮ್ಮ ಶಾಲೆಯಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ಒಬ್ಬೊಬ್ಬರಿಗೆ ಒಂದೊಂದರಂತೆ ಪುಸ್ತಕಗಳನ್ನು ಹಂಚುವುದು ನಡೆಯಿತು. ಶಾಲೆಯದ್ದೇ ಲೈಬ್ರರಿ. ಇನ್ನೂ ಕರಾರುವಾಕ್ಕಾಗಿ ಹೇಳಬೇಕೆಂದರೆ ಶಾಲೆಯ ಪ್ರಿನ್ಸಿಪಾಲರದೇ. ಅವರ ಮನೆಯಲ್ಲಿದ್ದ ಅವರ ಸ್ವಂತ ಪುಸ್ತಕಗಳು. ಒಂದು ಶನಿವಾರ ಪುಸ್ತಕವೊಂದನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ ಮುಂದಿನ ಶನಿವಾರ ವಾಪಸ್ ಕೊಡುವುದು; ಮತ್ತೊಂದು ಪುಸ್ತಕ ತೆಗೆದುಕೊಂಡು ಹೋಗುವುದು - ಹೀಗಿತ್ತು ಪರಿಪಾಠ. ಪ್ರತಿ ವಾರ ಯಾವ ಪುಸ್ತಕ ನಮಗೆ ಸಿಗುತ್ತದೆ ಎಂಬ ವಿಷಯ ಗುರುಗಳು ನಮಗೆ ಪುಸ್ತಕ ಕೊಡುವವರೆಗೂ ಗೊತ್ತಿರುತ್ತಿರಲಿಲ್ಲ. ನಮಗೆ ಆ ಆಯ್ಕೆಯೂ ಇರಲಿಲ್ಲ. ಅವರು ಕೊಟ್ಟಿದ್ದನ್ನು ಓದುವುದು. ಹಾಗಿದ್ದರೂ ಅದೇ ಒಂದು ಖುಷಿ. ಅದು ಒಂದು ರೀತಿಯ ಕುತೂಹಲವನ್ನೂ ಹುಟ್ಟಿಸುತ್ತಿತ್ತು - "ಈ ವಾರ ನನಗೆ ಯಾವ ಪುಸ್ತಕ ಸಿಗುತ್ತದಪ್ಪಾ" ಎಂದು. 

ಈ ರೀತಿ ಶಾಲೆಯಲ್ಲಿ ವಾರಕ್ಕೊಮ್ಮೆ ಹಂಚುತ್ತಿದ್ದ ಪುಸ್ತಕಗಳಲ್ಲಿ ನನಗೆ ಮೊದಲಿಗೆ ಸಿಕ್ಕಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ "ಫ್ಲೈಯಿಂಗ್ ಸಾಸರ್ಸ್ - ಭಾಗ ೧". ಇದರಿಂದ ನನಗೆ ಹಾರುವ ತಟ್ಟೆಗಳ ಬಗ್ಗೆ ಮತ್ತು ತೇಜಸ್ವಿಯವರ ಬರವಣಿಗೆಯ ಬಗ್ಗೆ ಪರಿಚಯ ದೊರೆಯಿತು. ಆದರೆ ಶಾಲೆಯಲ್ಲಿ ಅವರ "ಫ್ಲೈಯಿಂಗ್ ಸಾಸರ್ಸ್ - ಭಾಗ ೨" ಪುಸ್ತಕ ಸಿಗಲೇ ಇಲ್ಲ. ಮುಂದಿನ ಮೂರ್ನಾಲ್ಕು ವರ್ಷಗಳು ನಾನು ಫ್ಲೈಯಿಂಗ್ ಸಾಸರ್ಸ್‌ಗಳ ಬಗ್ಗೆ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಹುಡುಕಾಡಿ ಓದಿ ತಿಳಿದುಕೊಂಡಿದ್ದಷ್ಟೇ ಅಲ್ಲದೆ ನನಗೆ ನಾನೇ ಅದರ ಬಗ್ಗೆ ಒಂದು ಪುಸ್ತಕ ಬರೆದಿಟ್ಟುಕೊಂಡೆ. ಹಾರುವ ತಟ್ಟೆಗಳ ಬಗೆಗಿನ ಎಲ್ಲಾ conspiracy theoryಗಳು ಒಂದು ರೀತಿ ಆ ವಯಸ್ಸಿನಲ್ಲಿ ಮೋಡಿ ಮಾಡಿದ್ದವು. ಅದಕ್ಕೆ ಕಾರಣ ತೇಜಸ್ವಿಯವರ ಬರವಣಿಗೆಯ ಶೈಲಿ.ಈ ಪುಸ್ತಕವಲ್ಲದೆ ಶಾಲೆಯ ಶನಿವಾರದ ಲೈಬ್ರರಿಯ ಕಾರಣದಿಂದಲೇ ನನಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಹಲವು ಮಹನೀಯರ ಬಗ್ಗೆ ಚಿಕ್ಕದಾಗಿಯಾದರೂ ಚೊಕ್ಕವಾಗಿ ತಿಳಿದುಕೊಳ್ಳುವ ಅವಕಾಶವಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕರು, ಸರದಾರ್ ವಲ್ಲಭಭಾಯ್ ಪಟೇಲರು, ಅಶ್ಫಾಕ್ ಉಲ್ಲಾ ಖಾನ್, ಸುಭಾಷ್ ಚಂದ್ರ ಬೋಸ್, ಮುಂತಾದವರ ಬಗ್ಗೆ, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿಯಂತಹವರ ಬಗ್ಗೆ ನಾನು ಆಗ ಆ ಸಣ್ಣ ಪುಸ್ತಕಗಳಲ್ಲಿ ಓದಿದ ಹಲವು ವಿಷಯಗಳು ಈಗಲೂ ಅಚ್ಚೊತ್ತಿದಂತೆ ನೆನಪಿವೆ.

ಮತ್ತೊಂದು ಶನಿವಾರ ಅನುಪಮಾ ನಿರಂಜನ ಅವರ "ದಿನಕ್ಕೊಂದು ಕಥೆ" ಪುಸ್ತಕ ದೊರೆತಿತ್ತು. ಅದನ್ನು ಮಂಗಳವಾರದ ಹೊತ್ತಿಗೇ ಪೂರ್ತಿಯಾಗಿ ಓದಿ ಮುಗಿಸಿ ಸ್ನೇಹಿತನಿಗೆ ಸಿಕ್ಕಿದ್ದ ಡಿವಿಜಿಯವರ "ಇಂದ್ರವಜ್ರ"ವನ್ನೂ ಪಡೆದುಕೊಂಡು ಓದಿದ್ದೆ. ಅದರಲ್ಲೇ ಏನೋ ಒಂದು ಮಹತ್ಸಾಧನೆ ಮಾಡಿದ ಅನುಭವ. ಜೀವನದಲ್ಲಿ ಅದೇ ಮೊದಲ ಬಾರಿಗೆ ಡಿವಿಜಿಯವರ ಬರವಣಿಗೆಯನ್ನು ಓದಿದ್ದೂ ಸಹ.

ಆದರೆ ಶಾಲೆಯ ಲೈಬ್ರರಿ ಹೆಚ್ಚು ದಿನ ನಡೆಯಲಿಲ್ಲ. ಕಾರಣ ಗೊತ್ತಿಲ್ಲ. ಓದಿಗೆ ಇನ್ನಷ್ಟು ಆಸಕ್ತಿ ಹೆಚ್ಚಾಗತೊಡಗಿದ್ದಾಗ ನನ್ನ ಸಹಾಯಕ್ಕೆ ಬಂದಿದ್ದು ಈ ಮೊದಲೇ ಹೇಳಿದ ಜಯಲಕ್ಷ್ಮೀ ಸರ್ಕ್ಯುಲೇಟಿಂಗ್ ಲೈಬ್ರರಿ. ಅದರ ಮಾಲಿಕರಾದ ಜಯರಾಮು ಅವರು ನನ್ನ ತಂದೆಯವರ ಹತ್ತಿರದ ಸ್ನೇಹಿತರಾಗಿದ್ದದ್ದು ಇನ್ನೂ ಒಳ್ಳೆಯದಾಯಿತು. ನಾನು ಯಾವಾಗ ಯಾವ ಪುಸ್ತಕ ಕೇಳಿದರೂ ಅವರು ಇಲ್ಲವೆಂದವರಲ್ಲ. ಮಾರಾಟಕ್ಕೆಂದು ತಂದಿಟ್ಟುಕೊಂಡಿದ್ದ ಪುಸ್ತಕಗಳನ್ನೂ ಅವರು ನನಗೆಂದು ಎರವಲಿಗೆ ಕೊಟ್ಟದ್ದಿದೆ. ಅಲ್ಲಿಂದಲೇ ಹಲವು ನಿಯತಕಾಲಿಕೆಗಳೂ ಸಹ ನನಗೆ ಪರಿಚಯವಾದವು. Reader's Digest, ಚುಟುಕ, ಸಂತೃಪ್ತಿ, ಕಸ್ತೂರಿ, ಮಯೂರ, ತುಷಾರ ಮುಂತಾದವು, ಮಕ್ಕಳ ನಿಯತಕಾಲಿಕೆಗಳಾಗಿದ್ದ ಬಾಲಮಂಗಳ, ಬಾಲಮಿತ್ರ, ಚಂದಮಾಮ, ಬೊಂಬೆಮನೆ, ಚಂಪಕ, Tinkle ಮುಂತಾದವು ನಮ್ಮ ಮನೆಯ ಖಾಯಂ ಅತಿಥಿಗಳಾದವು. ಬಾಲಮಂಗಳವಂತೂ ನಾನು ಪ್ರತಿ ಹದಿನೈದು ದಿನಕ್ಕೊಮ್ಮೆ ದುಡ್ಡು ಕೊಟ್ಟು ಕೊಂಡು ಓದಿ ಸಂಗ್ರಹಿಸಿಟ್ಟುಕೊಂಡ ಮೊದಲ ಪುಸ್ತಕಗಳ ಗೊಂಚಲಿಗೆ ಸೇರುತ್ತದೆ. ಸ್ನೇಹಿತರೊಡನೆ ಯಾರ ಬಳಿ ಅತಿ ಹೆಚ್ಚು ಬಾಲಮಂಗಳಗಳಿವೆ ಎಂಬ ಪಂಥ ಹೂಡಿ ಅದಕ್ಕಾಗಿ ನಮ್ಮ ಚಿಕ್ಕಪ್ಪನವರಿಗೆ ದುಂಬಾಲು ಬಿದ್ದು, ಅವರು ಬೆಂಗಳೂರಿನ ಅವೆನ್ಯೂ ರೋಡಿನಿಂದ ಹಳೆಯ ಬಾಲಮಂಗಳಗಳ ನೂರಕ್ಕೂ ಹೆಚ್ಚು ಪ್ರತಿಗಳನ್ನು ನನಗೆ ತಂದುಕೊಟ್ಟದ್ದಿದೆ. ಅವೆಲ್ಲವನ್ನೂ ವಾರದೊಳಗೇ ಓದಿ ಮುಗಿಸಿ ಒಂದು ರೀತಿಯ ಶೂನ್ಯವನ್ನು ನನಗೆ ನಾನೇ ಸೃಷ್ಟಿ ಮಾಡಿಕೊಂಡದ್ದೂ ಅಷ್ಟೇ ನಿಜ.

ಪ್ರೈಮರಿ ಸ್ಕೂಲಿನ ಕೊನೆಯ ಎರಡು ವರ್ಷಗಳಲ್ಲಿ ನಮಗೆ ನಮ್ಮದೇ ಆದ ಒಂದು ಗ್ರಂಥಾಲಯ ಮಾಡಿಕೊಳ್ಳಲೂ ಸಲಹೆ ಕೊಟ್ಟವರು ಶಾಲೆಯಲ್ಲಿ ನಾಟಕ ಕಲೆಯನ್ನು ಕಲಿಸುತ್ತಿದ್ದ ನಾಗರಾಜ್ ಮೇಷ್ಟ್ರು. ಶಾಲೆಯಿಂದ ಪುಸ್ತಕಗಳನ್ನು ಎರವಲು ಕೊಡುತ್ತಿದ್ದ ಪದ್ಧತಿ ನಿಂತು ಹೋಗಿ ಎರಡು ವರ್ಷಗಳಾಯಿತು ಎಂದು ನಾವು ಕೆಲವು ವಿದ್ಯಾರ್ಥಿಗಳು ಅವರಲ್ಲಿ ಅಲವತ್ತುಕೊಂಡಾಗ ಅವರು "ನಿಮ್ಮ ನಿಮ್ಮ ಮನೆಗಳಲ್ಲಿ ಪುಸ್ತಕಗಳಿಲ್ಲವೇ? ಒಬ್ಬರು ಓದಿರುವುದು ಮತ್ತೊಬ್ಬರು ಓದಿರುವುದಿಲ್ಲ. ಅವುಗಳನ್ನೇ ತಂದು ವಾರಕ್ಕೊಮ್ಮೆ ಅದಲು ಬದಲು ಮಾಡಿಕೊಂಡು ಓದಿ. ನಾನೇ ಇದಕ್ಕೆ ಸಹಾಯ ಮಾಡುತ್ತೇನೆ" ಎಂಬ ಬಹಳ ಸುಲಭವಾದ ಸುಂದರವಾದ ಸಲಹೆ ಕೊಟ್ಟ ಅವರು ತಾವು ಶಾಲೆಯಲ್ಲಿರುವವರೆಗೂ ಅದನ್ನು ಪೋತ್ಸಾಹಿಸಿದರು. ಅವರು ಶಾಲೆ ಬಿಟ್ಟು ಹೋದ ಮೇಲೆ ನಮ್ಮಲ್ಲಿಯೂ ಆ ಸಡಗರ ಕಡಿಮೆಯಾಯಿತೇನೋ. ಅದು ಅಲ್ಲಿಗೇ ನಿಂತು ಹೋಯಿತು.

ಆದರೆ ನಾಗರಾಜ್ ಮೇಷ್ಟ್ರ ಆ ಸಲಹೆಯನ್ನು ನಾನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ನಮ್ಮ ಮನೆಯಲ್ಲೇ ಇದ್ದ ಎಲ್ಲ ಪುಸ್ತಕಗಳಿಗೂ ಒಂದೊಂದು ನಂಬರ್ ಕೊಟ್ಟು ಮನೆಯ ಪುಸ್ತಕದ ಗೂಡನ್ನೇ ಲೈಬ್ರರಿಯಾಗಿ ಪರಿವರ್ತಿಸಿದೆ! ನಾನೇ ಲೈಬ್ರೇರಿಯನ್, ನಾನೇ ಗ್ರಾಹಕ! ಮುಂದೊಂದು ದಿನ ನನ್ನದೇ ಲೈಬ್ರರಿಯೊಂದನ್ನು ನಡೆಸಬೇಕೆನ್ನುವುದು ನನ್ನ ಆಗಿನ ಬದುಕಿನ ಗುರಿಗಳಲ್ಲೊಂದಾಗಿತ್ತು.

ಇನ್ನು ಹೈಸ್ಕೂಲಿಗೆ ಹೋದಂತೆ ಊರಿನ ಸರ್ಕಾರಿ ಗ್ರಂಥಾಲಯದ ಕಾರ್ಡ್ ಮಾಡಿಸಿಕೊಂಡು ಶಿಸ್ತಿನಿಂದ ಹಲವು ಪುಸ್ತಕಗಳನ್ನು ಓದಿದ್ದು ಇನ್ನೂ ಆಸಕ್ತಿ ಹೆಚ್ಚುವಂತಾಗಿಸಿತು. ಮಹಾನ್ ಲೇಖಕರ ಹಲವು ಕೃತಿಗಳನ್ನೇನೂ ಓದದಿದ್ದರೂ ನಮ್ಮದೇ ಊರಿನ ಇತಿಹಾಸ, ಕರ್ನಾಟಕದ ದೇಗುಲಗಳು, ಕಂಪ್ಯೂಟರ್‌ಗಳ ಹುಟ್ಟು ಮತ್ತು ಇತಿಹಾಸ, ಇವೇ ಮುಂತಾದ ವಿಷಯಗಳ ಬಗೆಗಿನ ಪುಸ್ತಕಗಳನ್ನು  ಅಲ್ಲಿಂದ ತಂದು ಓದಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಅಲ್ಲಿಯ ಪುಸ್ತಕ ಭಂಡಾರದಲ್ಲಿ ಹುಡುಕಾಡುತ್ತಾ ಗಂಟೆಗಟ್ಟಲೆ ಸಮಯ ಕಳೆದದ್ದೂ ಉಂಟು.

ಇದಲ್ಲದೇ ನಮಗೆ ಹೊಸ ಪುಸ್ತಕಗಳನ್ನು ಕೊಳ್ಳಲು ಸಿಗುತಿದ್ದ ಒಂದು ಅವಕಾಶವೆಂದರೆ ನಮ್ಮ ಶಾಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ. ಅದರ ಅಂಗವಾಗಿ ಮೈಸೂರು, ಬೆಂಗಳೂರುಗಳ ಶ್ರೀ ರಾಮಕೃಷ್ಣ ಮಿಷನ್ ಮತ್ತು ಇನ್ನೂ ಕೆಲವು ಸಂಘ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸುತ್ತಿದ್ದರು ಶಾಲೆಯಲ್ಲಿ. ಆ ಸಂದರ್ಭದಲ್ಲಿ ಪುಸ್ತಕಗಳನ್ನು ಕೊಳ್ಳಲು ಮನೆಯಲ್ಲಿ ಹಣ ಕೇಳುವುದು ಸ್ವಲ್ಪ ಸುಲಭವಾಗಿತ್ತು. ಇಂಥದ್ದೊಂದು ಪುಸ್ತಕ ಬೇಕೆಂದು ಯಾವಾಗ ಕೇಳಿದರೂ ಮನೆಯಲ್ಲಿ ಯಾರೇನೂ ಬೇಡವೆನ್ನುತ್ತಿರಲಿಲ್ಲ. ಆದರೂ ಏನೋ ಒಂದು ಹಿಂಜರಿಕೆ, ಮನೆಯ ಹಣಕಾಸಿನ ಪರಿಸ್ಥಿತಿಯನ್ನು ಮನಗಂಡಿದ್ದರಿಂದ. ಆದರೆ ಶಾಲೆಯಲ್ಲೇ ಪುಸ್ತಕ ಕೊಳ್ಳುವ ಅವಕಾಶ ವರ್ಷಕ್ಕೊಮ್ಮೆ ಸಿಕ್ಕಿದಾಗ ಆ ಹಿಂಜರಿಕೆಯನ್ನು ಬದಿಗೊತ್ತಿ ಒಂದಷ್ಟು ಪುಸ್ತಕಗಳನ್ನು ಕೊಂಡು ಓದಿ ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡದ್ದರಲ್ಲಿ ಅನುಮಾನವಿಲ್ಲ.

ಪುಸ್ತಕಗಳನ್ನು ಓದುವುದರಲ್ಲಿ ಆಗಿದ್ದ ಕಾತರತೆ, ಆನಂದವನ್ನು ನೆನೆಸಿಕೊಂಡರೆ ಈಗಲೂ ಮನಸ್ಸಿಗೆ ಒಂದು ಬಗೆಯ ಸಂತೋಷವಾಗುತ್ತದೆ. ಇದನ್ನು ನೆನಪು ಮಾಡಿಕೊಳ್ಳಲು ದಾರಿ ಮಾಡಿಕೊಟ್ಟ ಅರುಣ್ ಮೇಷ್ಟ್ರಿಗೆ ಧನ್ಯವಾದಗಳು.

Sunday, 23 June 2019

Translation of William Shakespeare's Sonnet 94 to Kannada

Thanks to the requests of the multi-talented Dr. Chandana Sri over at Twitter, I took up the challenge of translating William Shakespeare's Sonnet 94 to Kannada. This is an intriguing and enigmatic sonnet with multiple interpretations discussed by many scholars, so I'm not going into the details of those interpretations with no scholarly background for the same. Here's the attempt to translate it to Kannada though, where attempts to stick to its original rhyming scheme had to be given up mostly, and also my initial thoughts of ensuring dwitIyAkShara prAsa in Kannada had to be set aside too, while only ensuring it for lines 9-14.

The whole write up is in the form 5/5/5/3, so that it could match the last line that was already translated by Dr. Chandana as "ಕೊಳೆತ ನೈದಿಲೆ ನಾತ ಕಳೆಗಿಂತ ಕೀಳು"

So, in essence, it was an exercise in samasyApUraNa!


ನೋಯಿಸುವ ಬಲವಿದ್ದು ನೋಯಿಸದ ಜನರು
ಗೋಚರಿಪ ಲಕ್ಷಣವ ದಿಟ ಮಾಡದವರು
ಇತರರಂ ಕದಲಿಪರು ತಾವು ಕಲ್ಲಾಗಿ
ಜಡವಾಗಿ, ಸೆಟೆದಿರ್ದು, ಸೆಳೆತಗಳ ಮಣಿಸಿ

ಋಜುವಾಗಿ ದೈವಕೃಪೆ ಗಳಿಸುತ್ತಲವರು
ಸೃಷ್ಟಿಯಸದಳವನ್ನು ಕಾಯ್ದು ಸಲಹುವರು
ಅವರೆ ತಮ್ಮಯ ಮೊಗವನಾಳ್ವ ನಾಯಕರು
ಉಳಿದವರು, ಅವರ ಹಿರಿತನದ ಸೇವಕರು

ಬೇಸಿಗೆಯ ಹೂವದುವೆ ಬೇಸಿಗೆಗೆ ಸವಿಯು
ಖಾಸಗಿಯೊಳದರದೊಂದಿರವು ಮತ್ತಳಿವು
ಆಸರೆಯ ಹೂದಳಕೆ ನಂಜಂಟುತಿರಲು
ಮಾಸುವುದು ಹೂ ಹಿರಿಮೆ ಹೊಲಸು ಕಳೆಯೆದುರು

ಹುಳಿಗೆ ತಿರುಗುವುದು ಸವಿ, ಎಸಕಗಳೆ ಬೀಳು
ಕೊಳೆತ ನೈದಿಲೆ ನಾತ ಕಳೆಗಿಂತ ಕೀಳು


The original Sonnet 94:

They that have power to hurt, and will do none,
That do not do the thing they most do show,
Who, moving others, are themselves as stone,
Unmoved, cold, and to temptation slow;
They rightly do inherit heaven's graces,
And husband nature's riches from expense;
They are the lords and owners of their faces,
Others, but stewards of their excellence.
The summer's flower is to the summer sweet,
Though to itself, it only live and die,
But if that flower with base infection meet,
The basest weed outbraves his dignity: 
   For sweetest things turn sourest by their deeds;
   Lilies that fester, smell far worse than weeds.

Sunday, 14 April 2019

"ಜ್ಞಾನಲೋಕ"ವೆಂಬ ಮರೀಚಿಕೆ, ಸಡಗರದ ಕೈಬರಹ ಪತ್ರಿಕೆ

ಇಂದಿಗೆ ಸರಿಯಾಗಿ ೨೦ ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿದ್ದಾಗ ನಿಂತುಹೋದದ್ದೊಂದು ಖಯಾಲಿಯನ್ನು ಮತ್ತೇಕೆ ಆರಂಭಿಸಬಾರದೆಂಬ ಮನಸ್ಸು ನನಗೂ ನನ್ನ ಸ್ನೇಹಿತ ಶಿವಪ್ರಸಾದನಿಗೂ ಇಂದು ಬೆಳಿಗಿನ ಜಾವದ ನಡಿಗೆಯ ಸಮಯದಲ್ಲಿ ಒಟ್ಟಿಗೇ ಬಂದದ್ದು ಆಶ್ಚರ್ಯಕರವೇ. ೧೪ ಏಪ್ರಿಲ್ ೧೯೯೯ರ ದಿನ ನಾವಿಬ್ಬರೂ ಕೈಜೋಡಿಸಿ ಆರಂಭಿಸಿದ್ದ ಕೈಬರಹ ಪತ್ರಿಕೆ "ಜ್ಞಾನಲೋಕ"ದ ಕೊನೆಯ ಪ್ರತಿ ಪ್ರಕಟಗೊಂಡ ದಿನ. ಅಂದು ಅಂಬೇಡ್ಕರ್ ಜಯಂತಿಯೆಂದು ಶಿವಪ್ರಸಾದನು ಅಂಬೇಡ್ಕರರ ಚಿತ್ರವೊಂದನ್ನೂ ಬಿಡಿಸಿ ಒಂದೇ ಹಾಳೆಯ ಪೇಪರನ್ನು ಚೆನ್ನಾಗಿಯೇ ತುಂಬಿಸಿದ್ದ. ಆ ಪತ್ರಿಕೆ ಅಂದು ದಿನಪತ್ರಿಕೆಯಾಗಿತ್ತು. ದಿನಕ್ಕೆ ಎರಡು ಪ್ರತಿಗಳನ್ನು ಹೊರತರುತ್ತಿದ್ದೆವು. ಒಂದು ದಿನ ನಾನು ಪತ್ರಿಕೆ ಬರೆದರೆ ಮಾರನೆಯ ದಿನ ಅವನು. ಅದರ ನಂತರ ಮತ್ತೆ ನಾನು. ಹಾಗೆ. ಯಾರು ಬರೆದರೂ ಕೆಳಗೊಂದು ಕಾರ್ಬನ್ ಶೀಟ್ ಇಟ್ಟುಕೊಂಡು ಬರೆಯುವುದು. ಅದೇ ಎರಡನೇ ಪ್ರತಿ. ನಾನು ಬರೆದ ದಿನ ಆ ಕಾರ್ಬನ್ ಕಾಪಿ ಪ್ರತಿಯನ್ನು ಶಿವಪ್ರಸಾದನಿಗೆ ಕೊಡುವುದು, ಅವನು ಬರೆದ ದಿನ ಅವನು ನನಗೆ ಕೊಡುತ್ತಿದ್ದ. ಅಷ್ಟೇ. ಅದರಲ್ಲೇ ಒಂದು ಸಂತೃಪ್ತಿ. ಯಾರಿಗೇನು ಅದರ ಬಗ್ಗೆ ನಾವು ಹೇಳಿಯೂ ಇರಲಿಲ್ಲ. 
 
ಇಷ್ಟೆಲ್ಲಾ ಪ್ರಚಾರ ಕೊಡುವುದು ನೋಡಿದರೆ ಓದುಗರು ನಾವೇನೋ ಆ ಪತ್ರಿಕೆಯನ್ನು ಹಲವು ವರ್ಷಗಳ ಕಾಲ ನಡೆಸಿದೆವೆಂದುಕೊಳ್ಳಬಹುದು. ಆದರೆ ನಾವು ಹೊರತಂದದ್ದು ಕೇವಲ ಐದೋ ಆರೋ ಸಂಚಿಕೆಗಳನ್ನು! ನಮ್ಮಿಬ್ಬರಿಗೂ ಆಗ ಪ್ರಚಲಿತ ವಿದ್ಯಮಾನಗಳ ಬಗೆಗೆ ತಿಳಿದುಕೊಳ್ಳಲು ಬಹಳ ಆಸಕ್ತಿ. ನನಗಂತೂ ರಸಪ್ರಶ್ನೆ, ಸಾಮಾನ್ಯ ಜ್ಞಾನಗಳಲ್ಲಿದ್ದ ಆಸಕ್ತಿಯಿಂದ ಆಗ ವೃತ್ತಪತ್ರಿಕೆಗಳನ್ನೋದುವ ಗೀಳು ಬಹಳ. ಅದು ನನ್ನ ಭಾಷೆಯ ಬೆಳವಣಿಗೆಗೂ ಬಹಳ ಸಹಕಾರಿಯಾಯಿತು. ಅಷ್ಟೇ ಅಲ್ಲದೆ ನಮ್ಮ ಕುಟುಂಬದ ಅತ್ಯಂತ ಆತ್ಮೀಯ ಸ್ನೇಹಿತರೊಬ್ಬರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದದ್ದು ನನಗೆ ಇನ್ನೊಂದು ರೀತಿಯ ಕುಮ್ಮಕ್ಕು ಕೊಟ್ಟಿತ್ತು. ನನಗೆ ಆಗ ಅವರಂತೆಯೇ ಪತ್ರಿಕೋದ್ಯಮ ಸೇರುವಾಸೆಯಿದ್ದದ್ದು ಸಹಜ. 
 
ಆ ಜ್ಞಾನಲೋಕ ಪತ್ರಿಕೆಯ ವಿಚಾರಕ್ಕೆ ಮತ್ತೆ ಬರೋಣ. ೧೪ ಏಪ್ರಿಲ್ ೧೯೯೯ರಂದು ಬಂದ ಸಂಚಿಕೆಯ ನಂತರ, ಕಾರಣಾಂತರಗಳಿಂದ ಅದರ ಮಾರನೆಯ ದಿನ ನಾನು ನನ್ನ ಜವಾಬ್ದಾರಿ ನಿರ್ವಹಿಸಲಾಗಲಿಲ್ಲ. ನಂತರದ ದಿನ ಶಿವಪ್ರಸಾದನೂ ಸಹ. ಪರಿಸ್ಥಿತಿಯನ್ನು ಮನಗಂಡು ನಾವು ನಮ್ಮ ಪತ್ರಿಕೆಯನ್ನು ಸಾಪ್ತಾಹಿಕವನ್ನಾಗಿ ಮಾರ್ಪಡಿಸಿದೆವು. ಒಂದು ಸಂಚಿಕೆ ಹೊರಬಂತು. ನಂತರ "ಜ್ಞಾನಲೋಕ" ಮಾಸಿಕವಾಯಿತು. ಉಪಯೋಗ ಕಾಣಲಿಲ್ಲ. ತ್ರೈಮಾಸಿಕವಾಯಿತು, ಅರ್ಧವಾರ್ಷಿಕವಾಯಿತು, ವಾರ್ಷಿಕವಾಯಿತು. ಯಾವುದೂ ಬೆಳಕು ಕಾಣಲಿಲ್ಲ. ಆಮೇಲೆ ನಮ್ಮ ನಮ್ಮ ಓದು ಮುಖ್ಯವಾಗಿಬಿಟ್ಟು ಜ್ಞಾನಲೋಕ ನೇಪಥ್ಯಕ್ಕೆ ಸರಿಯಿತು. ೨೦೧೦ರಲ್ಲಿ ಹಲವು ವರ್ಷಗಳ ನಂತರ ಶಿವಪ್ರಸಾದನನ್ನು ಭೇಟಿಯಾಗಲು ಮತ್ತೆ ಆರಂಭಿಸಿದ ಮೇಲೆ ಹಲವು ಬಾರಿ ನಮ್ಮ "ಪತ್ರಿಕೆ"ಯ ಬಗ್ಗೆ ನೆನಪಿಸಿಕೊಂಡು ನಮಗೆ ನಾವೇ ಹಾಸ್ಯ ಮಾಡಿಕೊಂಡು ನಕ್ಕಿದ್ದಿದೆ.
 
ಆದರೆ ಇಂದಿನ ಮಾತುಕತೆ ಸ್ವಲ್ಪ ಮುಂದುವರೆದು "ಮತ್ತೇಕೆ ಈ ಪ್ರಯತ್ನ ಮಾಡಬಾರದು?" ಎನಿಸಿತು. ನಾವು ಯಾವುದರ ಬಗ್ಗೆ ಬರೆಯುತ್ತೇವೆ ಎಂಬುದೂ ಇನ್ನೂ ಸ್ಪಷ್ಟವಿಲ್ಲ. ಈ ಬಾರಿಯೂ ಇದು ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ. ಆದರೆ ಅದೇ ಬಾಲ್ಯದ ಸಡಗರ ಈ ವಿಚಾರದಲ್ಲಿ ಈಗಲೂ ಇದೆ. ಮಾಸಿಕವೆಂದು ಹೊರತರುವ ಇರಾದೆಯಿದೆ. ಇಂದು ನಮಗೆ ಹತ್ತು ಹಲವು ತಂತ್ರಜ್ಞಾನಗಳ ಸಹಾಯವಿದೆ. ಪತ್ರಿಕೆಯನ್ನು ಹಲವು ರೀತಿಗಳಲ್ಲಿ ಆಕರ್ಷಕವನ್ನಾಗಿಸುವ ಸಾಧ್ಯತೆಯಿದೆ. ಆದರೆ ನಾವು ಇದನ್ನು ಕೈಬರಹಕ್ಕೇ ಸೀಮಿತಗೊಳಿಸಿ ಬಹುಮಟ್ಟಿಗೆ ನಿಂತೇ ಹೋಗಿರುವ ನಮ್ಮ ಬರಹಗಳನ್ನು ಮತ್ತೆ ಬಳಕೆಗೆ ತರಲು ಆಲೋಚಿಸಿದ್ದೇವೆ. ಅದರೊಟ್ಟಿಗೇ ಇದು ಕೈಬರಹದ್ದಾಗಿದ್ದರೆ ಅದರದ್ದೇ ವೈಶಿಷ್ಟ್ಯ ಹೊಂದಿರುತ್ತದೆಂಬ ಅನಿಸಿಕೆ. ಕಾರ್ಬನ್ ಶೀಟ್‌ನ ಮಟ್ಟಕ್ಕಿಳಿಯದೆ ಬರೆದದ್ದನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಕಡತವಾಗಿ ಹಂಚಿಕೊಳ್ಳುವ ಮಟ್ಟಕ್ಕೆ ಮಾತ್ರ ತಂತ್ರಜ್ಞಾನದ ಬಳಕೆಗೆ ಮನಸ್ಸಿದೆ. ನೋಡೋಣ, ಹೇಗೆ ಮುಂದುವರೆಯುತ್ತದೆಂದು...
 
ವೆಂಕಟೇಶಪ್ರಸನ್ನ.

 

Tuesday, 29 January 2019

Jhansi Rani Lakshmi Bai: Manikarnika: Through Murals at her Memorial

A brief history of Jhansi Rani Lakshmi Bai, Manikarnika, through the murals of her memorial at Varanasi, pictures from the Varanasi visit of November 2018:


Road leading to the Jhansi Rani Lakshmi Bai Memorial near Assi Ghat, Varanasi


Entrance of the memorial...


Details about the memorial and about Rani Lakshmi Bai:The majestic statue of the Queen of Jhansi:Manikarnika, being cared by her parents, Moropant and Bhagirathi Bai:


Manikarnika playing on the banks of river Ganga at the Ghats of Varanasi:


Moropant moves to Bithoor with little daughter Manikarnika after his wife passes away:


Manikarnika gets special affection and attention from Peshwa Bajirao II and gets to learn the art of warfare from Tatya Tope and others:


Manikarnika marries Gangadhar Rao, King of Jhansi, and becomes Lakshmi Bai:


King Gangadhar Rao and Queen Lakshmi Bai of Jhansi:


Gangadhar Rao and Lakshmi Bai adopt Damodar Rao as the heir to the Jhansi throne:


The death of king Gangadhar Rao leaves Lakshmi Bai in deep sorrow:


The British deny access to the Jhansi throne for Damodar Rao, citing "Doctrine of Lapse", and attempt to annexe the kingdom themselves:


The Great Queen Lakshmi Bai fights multiple battles against the British and attains immortality through her bravery and martyrdom in the first war of Indian independence:Saturday, 19 January 2019

A Trip to Adi Badri and Sarasvati Udgam Sthal, Haryana

A detailed write up will follow, but here are some pictures from Adi Badri, Haryana, from a visit in October 2018.

This place is home to ancient Badrinath Vishnu and Kedarnath Shiva temples, as well as the place believed to be the birth place of River Sarasvati.

Some clicks of the picturesque Adi Badri Pond:

The green-filled path leading to Sarasvati Udgam Sthal:

Sarasvati trickles through and falls on the Shiva Linga placed  here:The Somb River, a tributary of Yamuna that flows through Adi Badri, is believed to trace the same course as the River Sarasvati of the Vedic times:Beautiful crape jasmine (ಕನ್ನಡ: ನಂದಿಬಟ್ಟಲು) flowering at the feet of Sarasvati river birth:


Initial steps to climb to the Adi Kedarnath Temple:


And the last few steps to the temple:


The main temple of Adi Kedarnath:
The Gaushala maintained at Adi Kedarnath Temple premises:
Adi Badrinath Temple and it's steps as seen from Adi Kedarnath:Entrance of Adi Badrinath Temple::


The Adi Badrinath Shrine:


Picture depicting Adi Shankaracharya's role in setting up the temples at Adi Badri:The greenery at the Shivalik footsteps at Adi Badri:


The steps to Adi Badrinath in the foreground, the hill of Mantra Devi in the background, and the temple of Adi Kedarnath at the distance, all in one frame:


An early morning contemplation for this monkey:


A nice little Mantapa away from all the temples surrounded by greenery:


Early morning Sun rays shining on the Adi Kedarnath Temple:With my father at Adi Badri: